ಸೆ.25ರೊಳಗೆ ಭಾರತಕ್ಕೆ ಹಿಂದಿರುಗುವವರಿಗೆ ಉಚಿತ ಪ್ರಯಾಣದ ವ್ಯವಸ್ಥೆ

Update: 2016-08-23 18:26 GMT

ರಿಯಾದ್,ಆ.23: ಸೌದಿ ಅರೇಬಿಯದಲ್ಲಿ ಉದ್ಯೋಗಗಳನ್ನು ಕಳೆದುಕೊಂಡ ಭಾರತೀಯ ಕಾರ್ಮಿಕರು, ಸೆಪ್ಟಂಬರ್ 25ರೊಳಗೆ ತಾಯ್ನೋಡಿಗೆ ವಾಪಸಾಗಲು ಬಯಸಿದಲ್ಲಿ ಅವರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮಂಗಳವಾರ ಹೊಸದಿಲ್ಲಿಯಲ್ಲಿ ತಿಳಿಸಿದ್ದಾರೆ.

ಸೌದಿ ಸರಕಾರವು ಕಂಪೆನಿಗಳಿಗೆ ಹಣವನ್ನು ಪಾವತಿಸುವಾಗ, ಕಾರ್ಮಿಕರಿಗೆ ದೊರೆಯಬೇಕಾಗಿರುವ ಬಾಕಿವೇತನ ಮತ್ತಿತರ ಭತ್ತೆಗಳು ಕೂಡಾ ಪಾವತಿಯಾಗಲಿವೆ. ಸೆಪ್ಟಂಬರ್ 25ರ ಆನಂತರ ಸ್ವದೇಶಕ್ಕೆ ವಾಪಸಾಗದವರು ತಮ್ಮ ವಸತಿ ಹಾಗೂ ಪ್ರಯಾಣದ ವೆಚ್ಚಗಳನ್ನು ತಾವೇ ಭರಿಸಬೇಕಾಗಿದೆಯೆಂದು ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ತೈಲ ಬೆಲೆ ಕುಸಿತದಿಂದಾಗಿ ಸೌದಿ ಆರ್ಥಿಕತೆಗೆ ಹಿನ್ನಡೆಯುಂಟಾದ ಹಿನ್ನೆಲೆಯಲ್ಲಿ ಹಾಗೂ ಸರಕಾರದ ವೆಚ್ಚಕಡಿತದ ಕ್ರಮಗಳಿಂದಾಗಿ ಆ ದೇಶದಲ್ಲಿ ಸಹಸ್ರಾರು ಭಾರತೀಯ ಕಾರ್ಮಿಕರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News