×
Ad

ಸುಲಭವಾಗಿ ಸಾಗಿಸಲು ಶವದ ಮೂಳೆ ಮುರಿದು ಮುದ್ದೆ ಮಾಡಿದರು

Update: 2016-08-26 12:13 IST

ಬಲಸೋರ್, ಆ.26: ಆಂಬುಲೆನ್ಸ್ ಗೆ ನೀಡಲು ಹಣವಿಲ್ಲದೆ ವ್ಯಕ್ತಿಯೊಬ್ಬ ಸತ್ತು ಹೋದ ತನ್ನ ಮಡದಿಯ ದೇಹವನ್ನುತನ್ನ ಭುಜದಲ್ಲಿರಿಸಿ 10 ಕಿಮಿ ದೂರದ ತನ್ನ ಮನೆಯತ್ತ ತನ್ನ ಪುಟ್ಟ ಮಗಳೊಂದಿಗೆ ನಡೆದುಕೊಂಡು ಹೋದ ಘಟನೆ ಇನ್ನೂ ಎಲ್ಲರ ಮನದಲ್ಲೂ ಹಚ್ಚ ಹಸಿರಿರುವಾಗಲೇ ಒಡಿಶಾದಲ್ಲಿ ಇನ್ನೊಂದು ಭೀಭತ್ಸ ವೀಡಿಯೋ ಬಹಿರಂಗಗೊಂಡಿದೆ. ಈ ವೀಡಿಯೋದಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಬ್ಬ ರೈಲು ಬಡಿದು ಸತ್ತು ಹೋದ 70 ವರ್ಷದ ಮಹಿಳೆಯ ಶವದ ಮೂಳೆಯನ್ನು ತನ್ನ ಕಾಲುಗಳಿಂದ ಮುರಿದು ಅದನ್ನು ಒಂದು ಪ್ಲಾಸ್ಟಿಕ್ ಮೂಟೆಯಲ್ಲಿ ಕಟ್ಟಿ ಕೊಂಡೊಯ್ಯುವುದು ಕಾಣಿಸುತ್ತದೆ.

ಅವರು ಹೀಗೆ ಮಾಡಲು ಕಾರಣವನ್ನು ತಿಳಿದುಕೊಂಡರೆ ಆಶ್ಚರ್ಯವಾಗುತ್ತದೆ.ಸಲಮಣಿ ಬಾರಿಕ್ ಎಂಬ 76 ವರ್ಷದ ವಿಧವೆ ಬುಧವಾರದಂದು ರೈಲು ಬಡಿದುಸಾವನ್ನಪ್ಪಿದ್ದಳು. ಆಕೆಯ ಮೃತ ದೇಹವನ್ನು ಬಲಸೋರ್ ಜಿಲ್ಲೆಯ ಸೋರೋ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿತ್ತು. ಆದರೆ ಅಲ್ಲಿಪೋಸ್ಟ್ ಮಾರ್ಟಂ ಸೌಲಭ್ಯವಿಲ್ಲದೇ ಇದ್ದಿದುದರಿಂದಮೃತ ದೇಹವನ್ನು 30 ಕಿಮಿ ದೂರದಪಟ್ಟಣಕ್ಕೆ ಕೊಂಡೊಯ್ಯಲು ರೈಲ್ವೇ ಪೊಲೀಸರು ನಿರ್ಧರಿಸಿದ್ದರು. ಆದರೆ ಅಲ್ಲಿ ಅಂಬ್ಯುಲೆನ್ಸ್ ಲಭ್ಯವಿರಲಿಲ್ಲ. ಮೇಲಾಗಿ ಆಟೋದಲ್ಲಿ ಮೃತದೇಹ ಕೊಂಡೊಯ್ಯುವುದು ದುಬಾರಿಯಾಗುವುದರಿಂದ ಪೊಲೀಸರು ಮೃತ ದೇಹವನ್ನುರೈಲಿನಲ್ಲಿ ಕೊಂಡುಹೋಗಲು ನಿರ್ಧರಿಸಿ ಆಸ್ಪತ್ರೆಯ ಸ್ವೀಪರ್‌ಗೆ ಈ ನಿಟ್ಟಿನಲ್ಲಿ ಆದೇಶ ನೀಡಿದ್ದರು. ಆದರೆ ಅಷ್ಟೊತ್ತಿಗಾಗಲೆೀ ಮಹಿಳೆಯ ದೇಹ ಪಡೆಸಾಗಿತ್ತು.ಇದನ್ನು ಹಾಗೆಯೇ 2 ಕಿಮಿ ದೂರದ ರೈಲ್ವೇ ನಿಲ್ದಾಣಕ್ಕೆ ಕೊಂಡೊಂಯ್ಯುವುದು ಕಷ್ಟವೆಂದು ತಿಳಿದಾಗ ಆಸ್ಪತ್ರೆಯ ಸ್ವೀಪರ್‌ಅದರ ಮೂಳೆ ಮುರಿದು ಮೂಟೆಯಲ್ಲಿ ಕೊಂಡು ಹೋಗಲು ತೀರ್ಮಾನಿಸಿದ್ದನು.
ಈ ಘಟನೆಯ ಬಗ್ಗೆಒಡಿಶಾ ಮಾನವ ಹಕ್ಕುಗಳ ಆಯೋಗ ರೈಲ್ವೇ ಪೊಲೀಸರು ಹಾಗೂ ಬಲಸೋರ್ ಜಿಲ್ಲಾಡಳಿತದಿಂದ ವಿವರಣೆ ಕೇಳಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News