×
Ad

ಪಾಕಿಸ್ತಾನಕ್ಕೆಅಮೆರಿಕದ ನೆರವಿನಲ್ಲಿ ತೀವ್ರಕಡಿತ

Update: 2016-08-26 23:55 IST

ವಾಶಿಂಗ್ಟನ್, ಆ. 26: ಅಮೆರಿಕಕ್ಕೆ ಪ್ರತಿಕೂಲವಾಗಿರುವ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲ ಹಾಗೂ, ಅದೇ ವೇಳೆ, ಭಾರತದೊಂದಿಗೆ ಅಮೆರಿಕದ ಸೇನಾ ಮತ್ತು ವಾಣಿಜ್ಯ ಸಂಬಂಧಗಳ ಬೆಳವಣಿಗೆಯ ಹಿನ್ನೆಲೆಯಲ್ಲಿ, ಅಮೆರಿಕದೊಂದಿಗಿನ ವ್ಯೆಹಾತ್ಮಕ ಪಾಲುದಾರನಾಗಿ ಪಾಕಿಸ್ತಾನದ ಮಹತ್ವ ತೀವ್ರವಾಗಿ ಕುಸಿಯುತ್ತಿದೆ ಎಂದು ಅಮೆರಿಕದ ಸೇನಾ, ರಾಜತಾಂತ್ರಿಕ ಮತ್ತು ಗುಪ್ತಚರ ಅಕಾರಿಗಳು ಹಾಗೂ ಬಾಹ್ಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನಕ್ಕೆ ನೀಡುವ ಸೇನಾ ಹಾಗೂ ಆರ್ಥಿಕ- ಎರಡೂ ನೆರವುಗಳನ್ನು ಇತ್ತೀಚಿನ ವರ್ಷಗಳಲ್ಲಿ ಅಮೆರಿಕ ತೀವ್ರವಾಗಿ ಕಡಿತಗೊಳಿಸಿದೆ. ಇದು ನೆರೆಯ ಅ್ಘಾನಿಸ್ತಾನದಲ್ಲಿರುವ ತಾಲಿಬಾನ್‌ಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲದ ವಿಷಯದಲ್ಲಿ ಅಮೆರಿಕದ ಅಕಾರಿಗಳಲ್ಲಿ ಹೆಚ್ಚುತ್ತಿರುವ ಹತಾಶೆಯನ್ನು ಸೂಚಿಸಿದೆ ಎಂದು ಪರಿಣತರು ಹೇಳುತ್ತಾರೆ.ಮೆರಿಕದ ಅಕಾರಿಗಳ ಇದೇ ಹತಾಶೆಯಿಂದಾಗಿ ದಶಕಕ್ಕೂ ಹೆಚ್ಚಿನ ಅವಯಲ್ಲಿ ಅಮೆರಿಕ-ಪಾಕಿಸ್ತಾನ ಸಂಬಂಧ ಕುಸಿಯುತ್ತಾ ಬಂದಿದೆ. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ತಾಲಿಬಾನ್ ಗುಂಪು ಅ್ಘಾನಿಸ್ತಾನದ ವಿವಿಧ ಭಾಗಗಳಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿದ ಬಳಿಕ ಅಮೆರಿಕ-ಪಾಕಿಸ್ತಾನ ಸಂಬಂದ ಮತ್ತಷ್ಟು ತಳ ಹಿಡಿದಿದೆ ಎಂದು ಅಮೆರಿಕದ ಅಕಾರಿಗಳು ಮತ್ತು ವಿಶ್ಲೇಷಕರು ಹೇಳುತ್ತಾರೆ.ಂದು ಕಾಲದಲ್ಲಿ, ಈಗ ತಾಲಿಬಾನ್‌ನ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಅಮೆರಿಕ ಮತ್ತು ಅದರ ಮಿತ್ರ ಪಡೆಗಳು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದವು.ಮೆರಿಕದ ದಕ್ಷಿಣ ಏಶ್ಯ ನೀತಿಯಲ್ಲಿ ತೀವ್ರ ಪಲ್ಲಟವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಮೆರಿಕದ ಗಮನ ಅ್ಘಾನಿಸ್ತಾನ-ಪಾಕಿಸ್ತಾನದಿಂದ ಭಾರತದತ್ತ ಹೆಚ್ಚು ವಾಲುತ್ತಿದೆ’’ ಎಂದು ವಾಶಿಂಗ್ಟನ್‌ನ ಚಿಂತನಾ ವೇದಿಕೆ ‘ವುಡ್‌ರೋ ವಿಲ್ಸನ್ ಸೆಂಟರ್’ನಲ್ಲಿ ದಕ್ಷಿಣ ಏಶ್ಯ ಪರಿಣತನಾಗಿರುವ ಮೈಕಲ್ ಕಜಲ್‌ಮನ್ ಹೇಳುತ್ತಾರೆ.
ತನ್ನ ಅಕಾರಾವ ಮುಗಿಯುವವರೆಗೆ ಅ್ಘಾನಿಸ್ತಾನ ದಲ್ಲಿರುವ ಅಮೆರಿಕದ ಸೈನಿಕರ ಸಂಖ್ಯೆಯನ್ನು ಈಗ ಇರುವ 8,400ರ ಮಟ್ಟದಲ್ಲೇ ಇರಿಸುವುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕಳೆದ ತಿಂಗಳು ಘೋಷಿಸಿದ್ದಾರೆ. ಹಾಗೂ ಆ ಮೂಲಕ, ಸೈನಿಕರ ಸಂಖ್ಯೆಯನ್ನು ವರ್ಷದ ಕೊನೆಯ ವೇಳೆಗೆ ಇದರ ಅರ್ಧಕ್ಕೆ ಕಡಿತಗೊಳಿಸುವ ಯೋಜನೆಯನ್ನು ಕೈಬಿಟ್ಟಿದ್ದಾರೆ.ಂದು ಕಾಲದಲ್ಲಿ ಪಾಕಿಸ್ತಾನ ಅಮೆರಿಕದ ವಿದೇಶಿ ನೆರವಿನ ಮೂರನೆ ಅತಿ ದೊಡ್ಡ ಮೊತ್ತವನ್ನು ಪಡೆದುಕೊಳ್ಳುತ್ತಿತ್ತು. ಆದರೆ, 2016ರಲ್ಲಿ ಅಮೆರಿಕದಿಂದ ಪಾಕಿಸ್ತಾನ ಪಡೆಯಲಿರುವ ನಾಗರಿಕ ಮತ್ತು ಸೇನಾ ನೆರವು 100 ಕೋಟಿ ಡಾಲರ್‌ಗೂ ಕಡಿಮೆ ಎಂದು ಹೇಳಲಾಗಿದೆ. 2011ರಲ್ಲಿ ಪಾಕಿಸ್ತಾನ ಅಮೆರಿಕದಿಂದ ಪಡೆದ ನೆರವಿನ ಒಟ್ಟು ಮೊತ್ತ 350 ಕೋಟಿ ಡಾಲರ್.ನಿಷ್ಠ 2007ರ ಬಳಿಕ ಅಮೆರಿಕ ಪಾಕಿಸ್ತಾನಕ್ಕೆ 100 ಕೋಟಿ ಡಾಲರ್‌ಗಿಂತಲು ಕಡಿಮೆ ನೆರವನ್ನು ನೀಡಿದ ಉದಾಹರಣೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News