ಆಕರ್ಷಕ ಮೈಕಟ್ಟಿನ ಹಿಂದಿನ ಶ್ರಮ

Update: 2016-08-27 18:31 GMT

ನಾವೆಲ್ಲರೂ ಬಾಲಿವುಡ್ ಬಾದ್‌ಶಾನನ್ನು ಮೆಚ್ಚಿಕೊಳ್ಳುತ್ತೇವೆ. ಕೆಲವೊಮ್ಮೆ ಅವರ ಸಿನೆಮಾಗಳು ಇಷ್ಟವಾಗದಿದ್ದರೂ ವಯಸ್ಸಾಗುತ್ತಿದ್ದರೂ ಇನ್ನೂ ಕಟ್ಟುಮಸ್ತಾಗಿರುವ ಅವರ ದೇಹ ಸೌಷ್ಟವವನ್ನಂತೂ ಪಡ್ಡೆ ಹುಡುಗರು ಅಚ್ಚರಿಯಿಂದ ನೋಡದೇ ಇರಲಾರರು. ಓಂ ಶಾಂತಿ ಓಂ ಸಿನೆಮಾದಲ್ಲಿ ಸಿಕ್ಸ್ ಪ್ಯಾಕ್ ದೇಹವನ್ನು ತೋರಿಸಿ ಎಲ್ಲರನ್ನೂ ಮೆಚ್ಚಿಸಿದ್ದ ಶಾರುಖ್ ಖಾನ್, ಈಗಲೂ ತಮ್ಮ ವಯಸ್ಸನ್ನು ಮೀರಿದ ದೇಹವನ್ನು ಕಾಪಾಡಿಕೊಂಡಿದ್ದಾರೆ. ಇಮ್ತಿಯಾಜ್ ಅಲಿ ನಿರ್ದೇಶನದ ಮುಂದಿನ ಸಿನೆಮಾದಲ್ಲಿ ಅನುಷ್ಕಾ ಶರ್ಮಾ ಜೊತೆಗೆ ಶಾರುಖ್ ನಟಿಸುತ್ತಿದ್ದಾರೆ. ಶಾರುಖ್ ಖಾನ್‌ರ ಈ ಕಟ್ಟು ಮಸ್ತಾದ ದೇಹದ ಹಿಂದೆ ಇರುವುದು ಫಿಟ್ನೆಸ್ ಟ್ರೈನರ್ ಪ್ರಶಾಂತ್ ಸಾವಂತ್. ಶಾರುಖ್ ಜೊತೆಗೆ ಫಿಟ್ನೆಸ್ ತರಬೇತುದಾರರಾಗಿ ಧೀರ್ಘ ಸಮಯವನ್ನು ಕಳೆದಿರುವ ಪ್ರಶಾಂತ್ ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ವ್ಯಾಯಾಮ ಮಾಡುವ ಮೊದಲು ಮತ್ತು ನಂತರ ಸೇವಿಸಬೇಕಾದ ಆಹಾರ ಯೋಜನೆಯ ಬಗ್ಗೆಯೂ ವಿವರ ನೀಡಿದ್ದಾರೆ.

ಅಶೋಕನ ಪಾತ್ರದಲ್ಲಿ ನಟಿಸಿದ ವ್ಯಕ್ತಿಯ ಹಿಂದಿನ ಶಕ್ತಿ

ಪ್ರಶಾಂತ್ ಮೊದಲ ಬಾರಿಗೆ 2001ರಲ್ಲಿ ಅಶೋಕ ಸಿನೆಮಾ ಬಿಡುಗಡೆಯಾದ ಸಂದರ್ಭದಲ್ಲಿ ಶಾರುಖ್‌ರ ಟ್ರೈನರ್ ಆದರು. ಅಲ್ಲಿಂದ ಇಂದಿನವರೆಗೂ ಶಾರುಖ್ ದೇಹ ಪ್ರಶಾಂತ್ ಗರಡಿಯಲ್ಲೇ ಪಳಗಿದೆ.

ಶಾರುಖ್ ಫಿಟ್ನೆಸ್ ಮಂತ್ರವೇನು?

ನಿತ್ಯವೂ 45 ನಿಮಿಷಗಳಿಗಿಂತ ಹೆಚ್ಚು ಕಾಲ ವ್ಯಾಯಾಮ ಮಾಡುವುದಿಲ್ಲ. ಆದರೆ ಈ 45 ನಿಮಿಷಗಳಲ್ಲಿ ಬಹಳ ಕಠಿಣವಾದ ವ್ಯಾಯಾಮ ಪಾಲಿಸುತ್ತಾರೆ. ಇಬ್ಬರೂ ಮಾತನಾಡುವುದಿಲ್ಲ. ಸಂಗೀತ ಕೇಳುವುದಿಲ್ಲ. ಸಾಮಾನ್ಯವಾಗಿ ಈ ವ್ಯಾಯಾಮ ತಡರಾತ್ರಿಯೇ ಇರುತ್ತದೆ. ಒಂದು ಬಾರಿಗೆ ಒಂದು ದೇಹದ ಭಾಗವೆಂದು ತರಬೇತಿ ಕೊಡಲಾಗುತ್ತದೆ. ವಾರದೊಳಗೆ ಎಲ್ಲಾ ದೇಹದ ಭಾಗಕ್ಕೂ ವ್ಯಾಯಾಮ ಸಿಕ್ಕಿರುತ್ತದೆ. ಅತೀ ಕಠಿಣ ರಿಹ್ಯಾಬ್ ವರ್ಕೌಟ್ ಮಾಡುತ್ತಾರೆ. ಸೈಕ್ಲಿಂಗ್ ಮತ್ತು ಇತರ ಕಾಲುಗಳು ಮತ್ತು ಕಿಬ್ಬೊಟ್ಟೆಯ ತರಬೇತಿ ಕಠಿಣವಾಗಿ ನಡೆಯುತ್ತದೆ.

ನಮ್ಮಂತೆ ಶಾರುಖ್ ಕೂಡ ನೆಪ ಹೇಳಿ ವ್ಯಾಯಾಮ ತಪ್ಪಿಸಿಕೊಳ್ಳುತ್ತಾರೆಯೆ?

ಶಾರುಖ್ ತಮ್ಮ ಬೆನ್ನಿನ ಸಮಸ್ಯೆ ಇದ್ದಾಗ ಧೀರ್ಘ ಕಾಲದ ತರಬೇತಿ ತಪ್ಪಿಸಿಕೊಂಡಿದ್ದರು. ಇಲ್ಲದಿದ್ದರೆ ಸಂಪೂರ್ಣ ಬದ್ಧತೆಯಿಂದ ಸಮಯ ಮಾಡಿಕೊಂಡು ವ್ಯಾಯಾಮದಲ್ಲಿ ತೊಡಗುತ್ತಾರೆ. ಕೆಲವೊಮ್ಮೆ ಪ್ರಚಾರಗಳಲ್ಲಿ ಬ್ಯುಸಿಯಾಗಿದ್ದಾಗ ಮಾತ್ರ ವ್ಯಾಯಾಮ ತಪ್ಪುತ್ತದೆ.

ಶಾರುಖ್ ಖಾನ್ ವರ್ಸಸ್ ವರುಣ್ ಧವನ್

ಬಾಲಿವುಡ್ ತಾರೆಯರಾದ ಶಾರುಖ್ ಮತ್ತು ವರುಣ್ ಇಬ್ಬರಿಗೂ ಪ್ರಶಾಂತ್ ತರಬೇತಿ ನೀಡುತ್ತಾರೆ. ಇಬ್ಬರೊಳಗೆ ಯಾರು ಶ್ರೇಷ್ಠ ಎಂದು ಕೇಳಿದರೆ, ಇಬ್ಬರೂ ಬಹಳ ಬದ್ಧತೆಯಿಂದ ಮತ್ತು ಸ್ಪರ್ಧಾತ್ಮಕವಾಗಿ ವ್ಯಾಯಾಮಕ್ಕೆ ಇಳಿಯುತ್ತಾರೆ ಎನ್ನುತ್ತಾರೆ ಪ್ರಶಾಂತ್. ವರುಣ್‌ಗೆ ತಮ್ಮ ದೇಹ ಇಷ್ಟ. ಹೀಗಾಗಿ ಸ್ವತಃ ಮುಂದೆ ಬಂದು ಅದನ್ನು ಬಾಗಿದ ಬಿಲ್ಲಾಗಿಸಲು ಪ್ರಯತ್ನಿಸುತ್ತಾರೆ. ಡಿಶೂಂ ಮತ್ತು ಸ್ಟೂಡೆಂಟ್ ಆಫ್ ಇಯರ್ ಸಿನೆಮಾಗಳ ಸಂದರ್ಭ ವರುಣ್‌ಗೆ ಪ್ರಶಾಂತ್ ತರಬೇತಿ ನೀಡಿದ್ದರು. ಶಾರುಖ್ ಹಿರಿಯಣ್ಣನಾದರೆ, ವರುಣ್ ತಮ್ಮನಂತೆ ಎನ್ನುವುದು ಪ್ರಶಾಂತ್ ಅಭಿಪ್ರಾಯ. ವರುಣ್ ಮತ್ತು ಶಾರುಖ್ ಜೊತೆಯಾಗಿ ದಿಲ್ವಾಲೆ ಸಿನೆಮಾಗಾಗಿ ತರಬೇತಿ ಪಡೆದಾಗ ಇಬ್ಬರೂ ಪರಸ್ಪರರಿಂದ ಪ್ರೇರಣೆ ಪಡೆದುಕೊಂಡಿದ್ದರು.

ವರ್ಕೌಟ್ ಪೂರ್ವ ಯೋಜನೆ

0.25g ವರ್ಕೌಟ್‌ಗೆ ಮೊದಲಿನ ಆಹಾರದಲ್ಲಿ ಎರಡು ವಿಷಯಗಳು ಕಡ್ಡಾಯವಾಗಿರಬೇಕು. ಪ್ರೊಟೀನ್‌ಗಳು ಮತ್ತು ಕಾರ್ಬೋಹೈಡ್ರೇಟ್‌ಗಳು. ವರ್ಕೌಟ್ ಮಾಡುವ ಒಂದು ಗಂಟೆಯ ಮೊದಲು ಪೂರ್ಣ ಭೋಜನ ಸೇವಿಸಬಹುದು. ಅದರಲ್ಲಿ ನಿಮ್ಮ ದೇಹ ತೂಕದ ಪ್ರತೀ ಗ್ರಾಂಗೆ ನಷ್ಟು ಪ್ರೊಟೀನ್‌ಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ಇರಬೇಕು. ಅಥವಾ ದ್ರವಾಹಾರವಾಗಿದ್ದಲ್ಲಿ ಅಷ್ಟೇ ಪ್ರಮಾಣದ ಪೌಷ್ಠಿಕಾಂಶಗಳನ್ನು ವರ್ಕೌಟ್ ಮಾಡುವ ಅರ್ಧಗಂಟೆ ಮೊದಲು ಸೇವಿಸಬೇಕು.

ವರ್ಕೌಟ್ ನಂತರದ ಆಹಾರ

ವರ್ಕೌಟ್ ನಂತರದ ಆಹಾರ ಹೆಚ್ಚು ಕಡಿಮೆ ವರ್ಕೌಟ್ ಮೊದಲು ಸೇವಿಸುವ ಆಹಾರದ ಹಾಗೇ ಇರುತ್ತದೆ. ಅಷ್ಟೇ ಪೌಷ್ಠಿಕಾಂಶಗಳ ಅಗತ್ಯವಿದೆ. ವರ್ಕೌಟ್ ನಂತರ 30 ನಿಮಿಷಗಳ ಮೇಲೆ ಪ್ರೊಟೀನ್‌ಗಳು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಬೇಕು. ಪ್ರೊಟೀನ್ ಅಧಿಕವಿರುವ ದ್ರವಾಹಾರ ಅಥವಾ ಕಾರ್ಬೋಹೈಡ್ರೇಟ್‌ಗಳಿರುವ ಆಹಾರ ಅಥವಾ ಎರಡರ ಸಂಯೋಜನೆ ಸೇವಿಸಬಹುದು. ಅಧಿಕ ಗ್ಲಿಸಮಿಕ್ ಆಹಾರವನ್ನು ವರ್ಕೌಟ್ ಆದ ಮೇಲೆ ಸೇವಿಸುವುದು ಉತ್ತಮ. (ಗ್ಲಿಸಮಿಕ್ ಆಹಾರವು ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಏರಿಸುತ್ತದೆ. ಸಾಮಾನ್ಯ ಬ್ರೆಡ್, ಕುಕೀಸ್, ಬಟಾಟೆ ಇತ್ಯಾದಿಯಲ್ಲಿ ಹೆಚ್ಚು ಗ್ಲಿಸಮಿಕ್ ಇರುತ್ತದೆ.)

ಕೆಲವು ಫಿಟ್ನೆಸ್ ಸಲಹೆಗಳು

► ನಿತ್ಯವೂ 45 ನಿಮಿಷ ವರ್ಕೌಟ್

► ವಾರಕ್ಕೆ 4-5 ಬಾರಿ ವರ್ಕೌಟ್

► ನಿಮ್ಮ ರಕ್ತದ ವರದಿ ಮತ್ತು ಹೃದಯದ ಬಡಿತವನ್ನು ಗಮನಿಸುತ್ತಿರಬೇಕು.

► ಸಾಕಷ್ಟು ನೀರು ಕುಡಿಯಿರಿ

► ತಪ್ಪು ಆಹಾರ ಸೇವಿಸಬೇಡಿ. ಅಂತರ್ಜಾಲದಲ್ಲಿ ನೋಡಿ ಆಹಾರ ಸೇವಿಸುವುದಲ್ಲ. ವರ್ಕೌಟ್ ಮೊದಲು ದೇಹ ಸ್ಥಿತಿ ತಿಳಿದುಕೊಂಡಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News