ಎದೆ ಭಾಗದ ಕೊಬ್ಬು ನಿವಾರಣೆ ಹೇಗೆ?

Update: 2016-08-31 05:50 GMT

ಎದೆಯಲ್ಲಿ ಕೊಬ್ಬು ಬೆಳೆಯುವುದು ಭಾರತೀಯ ಪುರುಷರಲ್ಲಿ  ಸಾಮಾನ್ಯ ಸಮಸ್ಯೆಯಾಗಿದೆ.  ಈ ಸಮಸ್ಯೆಯನ್ನು ತಕ್ಷಣವೇ ಸರಿಯಾಗಿ ನಿಭಾಯಿಸದೆ ಇದ್ದಲ್ಲಿ ಜೀವಿತಾವಧಿಯಿಡೀ ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಕೆಲವೊಮ್ಮೆ ಇದು ಗೈನೆಕೋಮಾಸ್ತಿಯದ (ಗೈನೋ) ರೂಪವನ್ನೂ ಪಡೆದುಕೊಳ್ಳಬಹುದು. ಗೈನೋ ರೋಗ ಸಾಮಾನ್ಯವಾಗಿ ಹದಿಹರೆಯದಲ್ಲಿ ವಿವಿಧ ಹಾರ್ಮೋನುಗಳ ಬದಲಾವಣೆಯಿಂದ ಉಂಟಾಗುತ್ತದೆ.

ಗೈನೋ ಎಂದರೆ ಟೆಸ್ಟೋಸ್ಟರೀನ್ ಎನ್ನುವ ಪುರುಷ ಹಾರ್ಮೋನ್‌ನಲ್ಲಿ ಕೊರತೆಯುಂಟಾಗುವುದು. ಇದರ ಕೊರತೆಯು ವ್ಯಕ್ತಿಯಲ್ಲಿ ಮಹಿಳಾ ಹಾರ್ಮೋನ್ ಆಗಿರುವ ಎಸ್ಟ್ರೋಜೆನ್ ಹೆಚ್ಚಾಗುವ ಸಾಧ್ಯತೆಯಿದೆ. ಈ ಕಾರಣದಿಂದ ಪುರುಷರಲ್ಲಿ ಮಹಿಳಾ ಎದೆ ಬೆಳೆಯಬಹುದು. ಇದನ್ನು ನಿವಾರಿಸಲು ಶಸ್ತ್ರಚಿಕಿತ್ಸೆಯೊಂದೇ ದಾರಿಯಾಗಿರುತ್ತದೆ. ಇದೇನೂ ಮಾರಕ ರೋಗವಲ್ಲ. ಆದರೆ ಪುರುಷರಲ್ಲಿ ಭಾವನಾತ್ಮಕವಾಗಿ ತೀವ್ರ ಪರಿಣಾಮ ಬೀರಬಹುದಾದ ರೋಗ.

ಈಗ ಸಿಹಿ ಸುದ್ದಿ: ಗೈನೋ ಎಂದು ಕಾಣುವುದು ಶೇ.80ರಷ್ಟು ಸಂದರ್ಭದಲ್ಲಿ ಎದೆ ಕೊಬ್ಬೇ ಆಗಿರುತ್ತದೆ. ಅದನ್ನು ಕೆಲವು ಸರಳ ಸಲಹೆಗಳ ಮೂಲಕ ಪರಿಹರಿಸಿಕೊಳ್ಳಬಹುದು.

1. ಕಾರ್ಬೋಹೈಡ್ರೇಟ್ ತೆಗೆದುಕೊಳ್ಳುವುದು ಕಡಿಮೆ ಮಾಡಿ

ನಿಮ್ಮ ಎದೆಯ ಕೊಬ್ಬನ್ನು ಕಡಿಮೆ ಮಾಡಲು ಮೊದಲಿಗೆ ನೀವು ನಿತ್ಯವೂ ಸೇವಿಸುವ ಕ್ಯಾಲರಿಗಳನ್ನು ಕಡಿಮೆ ಮಾಡಿ ಕ್ಯಾಲರಿ ಕೊರತೆ ಸೃಷ್ಟಿಸಬೇಕು. ಇದು ಅತೀ ಸರಳ ತೂಕ ಇಳಿಸುವ ನಿಯಮ. ಎದೆಯ ಕೊಬ್ಬು ಇದರಿಂದ ಭಿನ್ನವೇನಲ್ಲ. ಇಂತಹ ಸ್ಥಳದಲ್ಲೇ ಕಡಿಮೆ ಮಾಡುವುದು ಎನ್ನುವುದೇನೂ ಇಲ್ಲ. ಅಂದರೆ ಕೇವಲ ಎದೆಯಿಂದಲೇ ನೀವು ಕೊಬ್ಬನ್ನು ನಿವಾರಿಸಲು ಸಾಧ್ಯವಿಲ್ಲ. ಅದು ಪೂರ್ಣ ದೇಹಕ್ಕೆ ಅನ್ವಯಿಸಿ ಇಳಿಯಬೇಕು.

2. ಪುಶಪ್‌ಗಳು

 ಎದೆಯ ಕೊಬ್ಬನ್ನೇ ಇಳಿಸುವತ್ತ ಹೆಚ್ಚು ಗಮನ ಕೇಂದ್ರೀಕರಿಸಲು ನೀವು ವಾರಕ್ಕೆ ಮೂರ್ನಾಲ್ಕು ಬಾರಿ ಪುಶಪ್ ಮಾಡುವ ನಿತ್ಯದ ವ್ಯಾಯಾಮ ಅಭ್ಯಾಸ ಹೊಂದಿರಬೇಕು. ಪುಶಪ್‌ಗಳು ನಿಮ್ಮ ಎದೆಯ ಸ್ನಾಯುಗಳನ್ನು ಬಾಗಿಸಲಿದೆ ಮತ್ತು ಬೆಳೆಸಲಿದೆ. ಹೀಗಾಗಿ ಎದೆ ಹೆಚ್ಚು ಹರವಾಗಿ ಬೆಳೆಯಲಿದೆ.

3. ಸಾಮರ್ಥ್ಯದ ತರಬೇತಿ

ಉತ್ತಮ ಸಾಮರ್ಥ್ಯದ ತರಬೇತಿ ಕಾರ್ಯಕ್ರಮವು ಎದೆಯ ಕೊಬ್ಬನ್ನು ಕಡಿಮೆ ಮಾಡಲು ನಿಜಕ್ಕೂ ನೆರವಾಗಲಿದೆ. ನಿರ್ದಿಷ್ಟ ಪ್ರತ್ಯೇಕ ಎದೆಯ ವ್ಯಾಯಾಮಗಳಾದ ಕೇಬಲ್ ಕ್ರಾಸ್ ಮತ್ತು ಬೆಂಚ್ ಪ್ರೆಸ್‌ಗಳನ್ನು ಪದೇ ಪದೇ ಮಾಡುವುದರಿಂದ ನಿಮ್ಮ ಎದೆಯನ್ನು ಆಕಾರಕ್ಕೆ ತರುವಲ್ಲಿ ತೀವ್ರ ಪರಿಣಾಮ ಬೀರಲಿವೆ. ಕ್ಯಾಲರಿ ಕೊರತೆಯು ನಿಮಗೆ ಎದೆಯಿಂದ ಕೊಬ್ಬು ಕರಗಲು ನೆರವು ನೀಡುತ್ತದೆ. 

ಕೃಪೆ: www.dailyo.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News