ವಿದ್ಯಾರ್ಥಿಗಳು ಭದ್ರತಾಪಡೆಯ ಮೇಲೆ ಕಲ್ಲು ಎಸೆಯುವುದನ್ನು ನಿಲ್ಲಿಸಬೇಕು: ಮೆಹಬೂಬ ಮುಫ್ತಿ

Update: 2016-08-31 06:33 GMT

 ಜಮ್ಮು, ಆ.31: " ಭದ್ರತಾ ಅಧಿಕಾರಿಗಳ ಮೇಲೆ ಕಲ್ಲೆಸೆಯುವುದನ್ನು ವಿದ್ಯಾರ್ಥಿಗಳು ನಿಲ್ಲಿಸಬೇಕು" ಎಂದು ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ. "ಮಕ್ಕಳು ಶಾಲೆಗೆ ಹೋಗಬೇಕು. ಕಲಿತು ಡಾಕ್ಟರ್,ಇಂಜಿನಿಯರ್, ಅಧ್ಯಾಪಕರು ಆಗಬೇಕು. ಇದು ಬಿಟ್ಟು ಕಲ್ಲೆಸೆಯಲು ಅವರು ಹೋಗುವುದಾದರೆ ನಮಗೆ ಭವಿಷ್ಯದಲ್ಲಿ ವೈದ್ಯರು, ಇಂಜಿನಿಯರ್‌ಗಳು, ಅಧ್ಯಾಪಕರು ದೊರೆಯುವುದಿಲ್ಲ" ಎಂದು ಮೆಹಬೂಬ ಮುಫ್ತಿ ಹೇಳಿಕೆ ನೀಡಿದ್ದಾರೆ.

 ಶಿಕ್ಷಣದಿಂದ ವೈಯಕ್ತಿಕ ಹಾಗೂ ಸಾಮಾಜಿಕ ಪ್ರಗತಿ ಸಾಧ್ಯವಾಗಲಿದೆ. ಆದ್ದರಿಂದ ರಾಜ್ಯದಲ್ಲಿ ಹೆಚ್ಚು ನುರಿತ ವ್ಯಕ್ತಿತ್ವಗಳನ್ನು ರೂಪಿಸಲಿಕ್ಕಾಗಿ ಸರಕಾರ ಕ್ರಮಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News