×
Ad

ರಾಜಧಾನಿಯಲ್ಲಿ ಭಾರೀ ಮಳೆ: ನೀವು ದೋಣಿಯಲ್ಲಿ ಬಂದಿರಾ ? ಐಐಟಿ ವಿದ್ಯಾರ್ಥಿಗಳಿಗೆ ಕೆರ‍್ರಿ ಪ್ರಶ್ನೆ

Update: 2016-08-31 12:15 IST

ಹೊಸದಿಲ್ಲಿ, ಆ.31: ರಾಜಧಾನಿ ದಿಲ್ಲಿಯಲ್ಲಿ ಭಾರೀ ಮಳೆಯಿಂದಾಗಿ ಅಲಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಕಂಡು ಬಂತು. ಬೆಳಗ್ಗೆ 9:30ಕ್ಕೆ ದಿಲ್ಲಿ ಐಐಟಿಯಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ ಮಳೆಯಿಂದಾಗಿ 11 ಗಂಟೆಗೆ ಆರಂಭಗೊಂಡಿತು. ಮುಖ್ಯ ಅತಿಥಿ ಅಮರಿಕಾದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ದಿಲ್ಲಿಯ ಐಐಟಿಯ ವಿದ್ಯಾರ್ಥಿಗಳಲ್ಲಿ ನೀವು ಮಳೆಯಲ್ಲಿ ಬಂದಿರಾ ? ಎಂದು ಹಾಸ್ಯ ಚಟಾಕಿ ಹಾರಿಸಿದರು.
ಕೆರ‍್ರಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾಗ ಟ್ರಾಫಿಕ್‌ ಜಾಮ್‌ ಸಮಸ್ಯೆ ಎದುರಿಸಿದರು. ರಸ್ತೆಗಳಲ್ಲಿ ಮಳೆ ನೀರು ಹರಿಯುತ್ತಿರುವುದನ್ನು ಗಮನಿಸಿದ್ದ ಕೆರ‍್ರಿ ಅವರು ಮಳೆಯಿಂದಾಗಿ ಜನರು ಎದುರಿಸುತ್ತಿರುವ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದ್ದರು. ಈ ಕಾರಣದಿಂದಾಗಿ ವಿದ್ಯಾರ್ಥಿಗಳಲ್ಲಿ ಹಾಸ್ಯ ಚಟಾಕಿ ಹಾರಿಸುವ ಮೂಲಕ ಕೆರ‍್ರಿ ಮಾತುಕತೆ ಆರಂಭಿಸಿದರು. 
ಜಾನ್‌ ಕೆರ‍್ರಿ ಸೋಮವಾರ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಾಜ್ ಮಹಲ್‌ ಹೋಟೆಲ್‌ ಆಗಮಿಸಲು ಸಮಸ್ಯೆ ಎದುರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News