ಮುಸ್ಲಿಂ ಪ್ರವಾಸಿಗರನ್ನು ಆಕರ್ಷಿಸಲು ಥೈಲಾಂಡ್ ಇಟ್ಟ ಪ್ರಪ್ರಥಮ ಹೆಜ್ಜೆ ಏನು ಗೊತ್ತೇ?

Update: 2016-08-31 18:48 GMT

ಹೆಚ್ಚು ಮುಸ್ಲಿಂ ಪ್ರವಾಸಿಗರನ್ನು ಆಕರ್ಷಿಸಲು ಬೌದ್ಧಮತೀಯ ಥೈಲಾಂಡ್ ಮೊದಲ ಹಲಾಲ್ ಹೊಟೇಲನ್ನು ತೆರೆದಿದೆ. ದೇಶದ ಆರ್ಥಿಕತೆಗೆ ಹೆಚ್ಚು ಕೊಡುಗೆ ನೀಡುವ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈ ಹೆಜ್ಜೆಯನ್ನು ಇಡಲಾಗಿದೆ. ಕಳೆದ ವರ್ಷ ಸುಮಾರು 30 ಮಿಲಿಯ ವಿದೇಶಿ ಪ್ರವಾಸಿಗರು ಥೈಲಾಂಡ್ ಗೆ ಭೇಟಿ ನೀಡಿದ್ದು, ಸುಮಾರು 658,000 ಮಧ್ಯಪ್ರಾಚ್ಯದಿಂದ ಬಂದಿದ್ದಾರೆ ಎಂದು ಔದ್ಯಮಿಕ ವಿವರಗಳು ತಿಳಿಸಿವೆ. ನವೆಂಬರ್ ನಲ್ಲಿ ತೆರೆಯಲಾಗಿರುವ ಬ್ಯಾಂಕಾಕಿನ ಚತುರ್ತಾರಾ ಅಲ್ ಮೆರೋಜ್ ಹೊಟೇಲ್ ಬದಲಾವಣೆಯ ಹಾದಿಯಲ್ಲಿ ನಡೆದು ಮುಸ್ಲಿಂ ಪ್ರವಾಸಿಗರನ್ನು ಆಕರ್ಷಿಸಲು ಹೆಜ್ಜೆ ಇಟ್ಟಿದೆ. “ಜಾಗತಿಕವಾಗಿ 1.6 ಬಿಲಿಯನ್ ಮುಸ್ಲಿಮರಿದ್ದಾರೆ. ಇದು ಅತೀ ದೊಡ್ಡ ಮಾರುಕಟ್ಟೆ. ಅದರಲ್ಲಿ ಕೇವಲ ಶೇ.1ರಷ್ಟು ಮಂದಿ ನಮ್ಮ ಕಡೆಗೆ ಆಕರ್ಷಿತರಾದರೂ ಅಭಿವೃದ್ಧಿ ಖಚಿತ” ಎನ್ನುವುದು ಹೊಟೇಲ್ ಜನರಲ್ ಮ್ಯಾನೇಜರ್ ಸಾನ್ಯ ಸಾಯ್ನಗ್ಬಾನ್ ಅಭಿಪ್ರಾಯವಾಗಿದೆ.

ಮಸೀದಿ ರೀತಿಯ ವಾಸ್ತುಶಿಲ್ಪವನ್ನು ಹೊಂದಿರುವ ಅಲ್ ಮೆರೋಜ್ ಹೊಟೇಲಿನಲ್ಲಿ ಎರಡು ಪ್ರಾರ್ಥನಾ ಕೊಠಡಿಗಳು ಮತ್ತು ಮೂರು ಹಲಾಲ್ ಡೈನಿಂಗ್ ಹಾಲ್ ಗಳಿವೆ. ಕೋಣೆಗಳು ಒಂದು ರಾತ್ರಿಗೆ 4000 ದಿಂದ 50,000 ಬಾತ್‌ಗಳವರೆಗೆ ($116 $1,445 ರಿಂದ ) ಬೆಲೆ ಬಾಳುತ್ತವೆ. ಈ ಹೊಟೇಲಿನಲ್ಲಿ ಅತಿಥಿಯಾಗಿ ತಂಗಿರುವ ಆಸ್ಟ್ರೇಲಿಯದ ಭದ್ರತಾ ಅಧಿಕಾರಿಯಾಗಿರುವ 28 ವರ್ಷದ ಆಮಿರ್ ಫಝಲ್ ಪ್ರಕಾರ ಹಲಾಲ್ ಆಹಾರ ಸಿಗುವುದು ಬಹಳ ಕಷ್ಟವಾಗಿರುವ ಥೈಲಾಂಡ್ ಗೆ ಪ್ರವೇಶಿಸುವ ಮುಸ್ಲಿಂ ಪ್ರವಾಸಿಗರಿಗೆ ಇಂಥ ಹಲಾಲ್ ಹೊಟೇಲ್ ತೃಪ್ತಿ ನೀಡಲಿದೆ. “ಇದು ಉತ್ತಮ ಅನುಭವ. ಇಲ್ಲಿನ ಮೊದಲ ಹಲಾಲ್ ಹೊಟೇಲ್ ಇದು. ಅದ್ಭುತವಾಗಿದೆ ಎನ್ನುತ್ತಾರೆ” ಫಝಲ್.

ಬೆಳೆಯುತ್ತಿರುವ ಮುಸ್ಲಿಂ ಪ್ರವಾಸಿ ಮಾರುಕಟ್ಟೆಯ ಲಾಭವನ್ನು ಪಡೆದುಕೊಳ್ಳಲು ಥೈಲಾಂಡ್ ಕಳೆದ ವರ್ಷ ಮೊಬೈಲ್ ಅಪ್ಲಿಕೇಶನ್ ಒಂದನ್ನು ಹೊರತಂದಿದ್ದು, ಅದರಲ್ಲಿ ಮುಸ್ಲಿಂ ಸ್ನೇಹಿ ಆಕರ್ಷಣೆಗಳು ಮತ್ತು ಹಲಾಲ್ ಆಹಾರ ತಾಣಗಳ ವಿವರಗಳನ್ನು ಪ್ರವಾಸಿಗರು ಪಡೆದುಕೊಳ್ಳಬಹುದಾಗಿದೆ.

ಥೈಲಾಂಡ್ನ ದಕ್ಷಿಣ ಭಾಗವು ಮುಸ್ಲಿಂ ದೇಶವಾದ ಮಲೇಷ್ಯಾದ ಗಡಿಯನ್ನು ಹಂಚಿಕೊಂಡಿದೆ. ಬಹಳಷ್ಟು ಮಲೇಷ್ಯಾ ಪ್ರಜೆಗಳು ಸಣ್ಣ ಪ್ರವಾಸಗಳಿಗಾಗಿ ಥೈಲಾಂಡ್ಗೆ ಬರುತ್ತಾರೆ. ದಕ್ಷಿಣ ಭಾಗದಲ್ಲಿ ಸ್ವಲ್ಪ ಮಟ್ಟಿಗಿನ ಉಗ್ರ ಕೃತ್ಯಗಳು, ಬಾಂಬ್ ದಾಳಿಗಳಿಂದಾಗಿ ಮಲೇಷ್ಯಾ ಪ್ರವಾಸಿಗರಿಂದ ತುಂಬಿಕೊಂಡ ಗಡಿ ಪಟ್ಟಣಗಳ ಉದ್ಯಮಕ್ಕೆ ತೊಂದರೆಯಾಗಿದೆ. ಹೆಚ್ಚು ಪ್ರವಾಸಿಗರ ನೆಲೆಯಾಗಿರುವ ಬ್ಯಾಂಕಾಕಿನ ದಕ್ಷಿಣ ಭಾಗದಲ್ಲಿ ಸರಣಿ ಬಾಂಬ್ ದಾಳಿಗಳು ನಡೆದು ನಾಲ್ಕು ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿರುವುದು ಉಗ್ರವಾದ ಹರಡುವ ಆತಂಕ ತಂದಿದೆ. ಪ್ರವಾಸಿ ಇಲಾಖೆಯ ಮಾಹಿತಿ ಪ್ರಕಾರ 2014ಕ್ಕೆ ಹೋಲಿಸಿದಲ್ಲಿ 2015ರಲ್ಲಿ ಥೈಲಾಂಡ್ಗೆ ಶೇ. 10ರಷ್ಟು ಮಧ್ಯ್ರಾಚ್ಯದ ಪ್ರವಾಸಿಗರ ಸಂಖ್ಯೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News