ಜಪಾನ್‌ಗೆ ಅಪ್ಪಳಿಸಿದ ಬಿರುಗಾಳಿ

Update: 2016-08-31 18:26 GMT

ಟೋಕಿಯೊ, ಆ. 31: ಪ್ರಬಲ ಬಿರುಗಾಳಿ ಮತ್ತು ಪ್ರವಾಹ ಅಪ್ಪಳಿಸಿದ ಬಳಿಕ ಉತ್ತರ ಜಪಾನ್‌ನ ವೃದ್ಧಾಶ್ರಮವೊಂದರಲ್ಲಿ ವಾಸಿಸುತ್ತಿದ್ದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದರು.

‘‘ಮೃತರ ಗುರುತುಗಳನ್ನು ಖಚಿತಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ’’ ಎಂದು ಇವಟೆ ರಾಜ್ಯದ ಪೊಲೀಸ್ ಮುಖ್ಯಸ್ಥ ಶುಕೊ ಸಕಮೊಟೊ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

ಇವೈಝುಮಿ ಪಟ್ಟಣದಲ್ಲಿರುವ ವೃದ್ಧಾಶ್ರಮದ ಒಳಗೆ ಒಂಬತ್ತು ಶವಗಳು ಪತ್ತೆಯಾಗಿರುವುದನ್ನು ಅವರು ಖಚಿತಪಡಿಸಿದರು. ಈ ಪಟ್ಟಣಕ್ಕೆ ಬಿರುಗಾಳಿಯ ಜೊತೆಗೇ ಪ್ರವಾಹ ಅಪ್ಪಳಿಸಿತ್ತು.

ಪ್ರವಾಹದಿಂದ ವೃದ್ಧಾಶ್ರಮದ ನಿವಾಸಿಗಳನ್ನು ರಕ್ಷಿಸಲು ಪೊಲೀಸರು ಅಲ್ಲಿಗೆ ತೆರಳಿದಾಗ ಮೃತದೇಹಗಳು ಅವರನ್ನು ಸ್ವಾಗತಿಸಿತು ಎನ್ನಲಾಗಿದೆ.

ವೃದ್ಧಾಶ್ರಮವು ಮಣ್ಣು ಮತ್ತು ಅವಶೇಷಗಳಡಿ ಅರ್ಧ ಹುದುಗಿದೆ.

ಬಿರುಗಾಳಿ ‘ಲಯನ್‌ರಾಕ್’ ಮಂಗಳವಾರ ಸಂಜೆ ಉತ್ತರ ಜಪಾನ್‌ಗೆ ಅಪ್ಪಳಿಸಿತ್ತು. ಇದರ ಪರಿಣಾಮವಾಗಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಕ್ಕೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News