ಪಾಕಿಸ್ತಾನಕ್ಕೆ ಚೀನಾದಿಂದ 8 ಸಬ್‌ಮರೀನ್ ಮಾರಾಟ

Update: 2016-08-31 18:27 GMT

ಇಸ್ಲಾಮಾಬಾದ್, ಆ. 31: ಬೃಹತ್ ಶಸ್ತ್ರಾಸ್ತ್ರ ರಫ್ತು ವ್ಯವಹಾರವೊಂದರಲ್ಲಿ, ಚೀನಾವು ಪಾಕಿಸ್ತಾನಕ್ಕೆ ಕನಿಷ್ಠ ಎಂಟು ದಾಳಿ ಸಬ್‌ಮರೀನ್‌ಗಳನ್ನು ಮಾರಾಟ ಮಾಡಲಿದೆ.

ಭಾರತದ ‘ಸ್ಕಾರ್ಪಿನ್’ ಸಬ್‌ಮರೀನ್‌ಗಳ ವಿವರಗಳು ಆಸ್ಟ್ರೇಲಿಯದ ಪತ್ರಿಕೆಯೊಂದರಲ್ಲಿ ಬಹಿರಂಗಗೊಂಡಿರುವ ನಡುವೆಯೇ, 500 ಕೋಟಿ ಡಾಲರ್ ಚೀನಾ-ಪಾಕ್ ರಕ್ಷಣಾ ವ್ಯವಹಾರ ನಡೆದಿದೆ.

ಚೀನಾವು ಪಾಕಿಸ್ತಾನ ನೌಕಾಪಡೆಗೆ ಯಾವ ಮಾದರಿಯ ಸಬ್‌ಮರೀನ್‌ಗಳನ್ನು ಪೂರೈಸುವುದು ಎನ್ನುವುದು ಖಚಿತವಾಗಿಲ್ಲ.

ಮೊದಲ ನಾಲ್ಕು ಸಬ್‌ಮರೀನ್‌ಗಳನ್ನು 2023ರ ಕೊನೆಯ ವೇಳೆಗೆ ಪಾಕಿಸ್ತಾನ ಪಡೆದುಕೊಳ್ಳುವ ನಿರೀಕ್ಷೆ ಇದೆ. ಉಳಿದ ನಾಲ್ಕು ಸಬ್‌ಮರೀನ್‌ಗಳನ್ನು 2028ರ ವೇಳೆಗೆ ಕರಾಚಿಯಲ್ಲಿ ನಿರ್ಮಿಸಲಾಗುವುದು.

ಚೀನಾವು ಪಾಕಿಸ್ತಾನದ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರನಾಗಿದೆ.

ಭಾರತವು ಕೇವಲ 13 ಹಳೆಯ ಸಬ್‌ಮರೀನ್‌ಗಳನ್ನು ಹೊಂದಿದೆ. ಅವುಗಳ ಪೈಕಿ ಯಾವುದೇ ಸಮಯದಲ್ಲಿ ಕಾರ್ಯಾಚರಣೆಗೆ ಲಭ್ಯವಿರುವುದು ಆರು ಮಾತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News