‘ಕಾರಿಡಾರ್’ ಕಾಶ್ಮಿರ ನೀತಿ ಬದಲಿಸಿಲ್ಲ: ಚೀನಾ

Update: 2016-08-31 18:30 GMT

ಬೀಜಿಂಗ್, ಆ. 31: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನಿಂದಾಗಿ ಚೀನಾದ ಸುದೀರ್ಘ ಕಾಶ್ಮೀರ ನೀತಿಯು ಬದಲಾಗಿಲ್ಲ ಎಂದು ಚೀನಾದ ವಿದೇಶ ಸಚಿವಾಲಯ ಬುಧವಾರ ಹೇಳಿದೆ.

ಕಾಶ್ಮೀರ ವಿವಾದವನ್ನು ಭಾರತ ಮತ್ತು ಪಾಕಿಸ್ತಾನಗಳು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಬೇಕು ಎನ್ನವುದು ಚೀನಾದ ನೀತಿಯಾಗಿದೆ.ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವ 4,600 ಕೋಟಿ ಡಾಲರ್ ವೆಚ್ಚದ ಕಾರಿಡಾರ್ ಯೋಜನೆಯನ್ನು ತ್ವರಿತವಾಗಿ ಮುಕ್ತಾಯಗೊಳಿಸಲು ಚೀನಾ ಬಯಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News