ಟ್ರಂಪ್‌ರಿಂದ ನಾಟಕೀಯ ಮೆಕ್ಸಿಕೊ ಭೇಟಿ

Update: 2016-08-31 18:28 GMT

ವಾಶಿಂಗ್ಟನ್, ಆ. 31: ಮೆಕ್ಸಿಕೊ ಅಧ್ಯಕ್ಷರನ್ನು ತಾನು ಬುಧವಾರ ಭೇಟಿ ಮಾಡುವುದಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಕ್ರಮ ವಲಸಿಗರನ್ನು ಮಟ್ಟ ಹಾಕುವ ಪ್ರಸ್ತಾಪಗಳನ್ನು ಮಂಡಿಸುವ ಗಂಟೆಗಳ ಮೊದಲು ಟ್ರಂಪ್ ತನ್ನ ಮೆಕ್ಸಿಕೊ ಪ್ರವಾಸವನ್ನು ಘೋಷಿಸಿದರು. ಅವರ ಪ್ರಸ್ತಾಪಗಳು ಮೆಕ್ಸಿಕನ್ನರ ಭಾರೀ ಆಕ್ರೋಶಕ್ಕೆ ಗುರಿಯಾಗಿವೆ.

ಇದು ಟ್ರಂಪ್‌ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಅವಧಿಯಲ್ಲಿ ಅವಸರವಸರವಾಗಿ ಏರ್ಪಡಿಸಿದ ಎರಡನೆ ಮಹತ್ವದ ವಿದೇಶ ಪ್ರವಾಸವಾಗಿದೆ. ಜೂನ್ ತಿಂಗಳಲ್ಲಿ ಅವರು ಸ್ಕಾಟ್‌ಲ್ಯಾಂಡ್‌ನ ಗಾಲ್ಫ್ ಕೋರ್ಸ್‌ಗಳಿಗೆ ಭೇಟಿ ನೀಡಿದ್ದರು. ಆಗ ಬ್ರಿಟನ್ ‘ಬ್ರೆಕ್ಸಿಟ್’ ಜನಮತಗಣನೆಗೆ ತಯಾರಾಗುತ್ತಿತ್ತು.

ಮೆಕ್ಸಿಕೊ ಅಧ್ಯಕ್ಷ ಎನ್ರಿಕ್ ಪೆನ ನೀಟೊ ಜೊತೆಗಿನ ಅವರ ಭೇಟಿ ನಾಟಕೀಯವಾಗಿದ್ದು, ಪ್ರಚಾರ ಗಳಿಸಲು ಹೂಡಿದ ತಂತ್ರ ಎಂಬುದಾಗಿ ಭಾವಿಸಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಚುನಾವಣಾ ಸಮೀಕ್ಷೆಯಲ್ಲಿ ಟ್ರಂಪ್ ತನ್ನ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ಗಿಂತ ಹಿಂದೆ ಬಿದ್ದಿದ್ದ್ದು, ಈ ಕೊರತೆಯನ್ನು ನೀಗಿಸುವುದಕ್ಕಾಗಿ ಅವರು ಮೆಕ್ಸಿಕೊ ಭೇಟಿಯನ್ನು ಏರ್ಪಡಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News