ವೆಸ್ಟರ್ನ್ ಯೂನಿಯನ್ ಹಣ ಪಡೆಯಲು ಹಿಂದೂ ಹೆಸರೇ ಬೇಕೆ?

Update: 2016-09-01 18:36 GMT

ಹೊಸದಿಲ್ಲಿ, ಸೆ.1: ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ನಟಿ ಹೆಝೆಲ್ ಕೀಚ್ ಅವರ ಜೋಡಿ ಅನುರೂಪ. ಕಳೆದ ನವೆಂಬರ್ ತಿಂಗಳಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವ ಅವರು ಈ ಡಿಸೆಂಬರ್ ತಿಂಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆಂದು ಹೇಳಲಾಗುತ್ತಿದೆ. ಇತ್ತೀಚೆಗೆ ವೈರ್ ಟ್ರಾನ್ಸ್‌ಫರ್ ಹಣ ವರ್ಗಾವಣೆಗೆ ಹೆಝೆಲ್ ಮುಂದಾದಾಗ ಅದರ ಪ್ರಯೋಜನವನ್ನು ಅಧಿಕಾರಿಯೊಬ್ಬರು ಅವರಿಗೆ ನಿರಾಕರಿಸಿ ಜನಾಂಗ ಭೇದ ಮಾಡಿದ್ದಾರೆಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಈ ಬಗ್ಗೆ ಹೆಝೆಲ್ ಟ್ವಿಟರ್‌ನಲ್ಲಿ ಹೇಳಿಕೊಂಡಾಗಲೇ ಇದು ಹೊರ ಜಗತ್ತಿಗೆ ತಿಳಿದು ಬಂದಿದ್ದು.‘‘ನನ್ನ ಹೆಸರು ‘ಹಿಂದೂ’ ಹೆಸರಿನಂತಿರಲಿಲ್ಲವೆಂಬ ಕಾರಣ ನೀಡಿ ತನಗೆ ಹಣ ನೀಡಲು ನಿರಾಕರಿಸಿದ ವೆಸ್ಟರ್ನ್ ಯೂನಿಯನ್‌ನ ಜೈಪುರದ ಪೀಯೂಶ್ ಶರ್ಮ ಇಲ್ಲಿಯ ತನಕ ಮಾಡಿದ ಅತ್ಯಂತ ಹೆಚ್ಚು ಜನಾಂಗ ಭೇದ ಮಾಡುವ ವ್ಯಕ್ತಿ’’ ಎಂದು ಹೆಝೆಲ್ ಟ್ವೀಟ್ ಮಾಡಿದ್ದರು. ‘‘ಈ ಜನರ ಧೋರಣೆಯಿಂದ ನನಗೆ ಅಸಹ್ಯವಾಗುತ್ತದೆ’’ ಎಂಬರ್ಥ ನೀಡುವ ಹಲವಾರು ಟ್ವೀಟ್‌ಗಳನ್ನು ಆಕೆ ಮಾಡಿದ್ದಾರೆ. ಆಕೆಯ ಭಾವೀ ಪತಿ ಯುವರಾಜ್ ಸಿಂಗ್ ಕೂಡ ಆಕೆಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, ‘‘ವೆಸ್ಟರ್ನ್ ಯೂನಿಯನ್‌ನಿಂದ ಆದ ವರ್ತನೆಯಿಂದ ಆಘಾತಕಾರಿಯಾಗಿದೆ. ನಾವೆಲ್ಲರೂ ಮನುಷ್ಯರು ಎನ್ನುವುದಷ್ಟೆ ಸಾಕಾಗದೇ? ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News