ಸ್ಪೇಸ್ ಎಕ್ಸ್ ಉಡಾವಣಾ ಕೇಂದ್ರದಲ್ಲಿ ಸ್ಫೋಟ

Update: 2016-09-01 18:42 GMT

ಕೇಪ್ ಕ್ಯಾನವರಲ್ (ಫ್ಲೋರಿಡ), ಸೆ. 1: ಖಾಸಗಿ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್ ಎಕ್ಸ್’ನ ಉಡಾವಣಾ ಸ್ಥಳದಲ್ಲಿ ಗುರುವಾರ ನಡೆದ ದೈನಂದಿನ ರಾಕೆಟ್ ಪರೀಕ್ಷೆಯ ವೇಳೆ ಭಾರೀ ಸ್ಫೋಟವೊಂದು ಸಂಭವಿಸಿದೆ.

ತನ್ನ ಮಾನವರಹಿತ ರಾಕೆಟ್‌ನ ಪರೀಕ್ಷಾರ್ಥ ಹಾರಾಟವನ್ನು ಸ್ಪೇಸ್ ಎಕ್ಸ್ ನಡೆಸುತ್ತಿದ್ದಾಗ ಬೆಳಗ್ಗೆ ಸುಮಾರು 9 ಗಂಟೆಗೆ ಸ್ಫೋಟ ಸಂಭವಿಸಿದೆ ಎಂದು ನಾಸಾ ಹೇಳಿದೆ. ಕೇಪ್ ಕ್ಯಾನವರಲ್‌ನಲ್ಲಿರುವ ವಾಯು ಪಡೆ ನಿಲ್ದಾಣದಿಂದ ಶನಿವಾರ ನಡೆಯಬೇಕಾಗಿದ್ದ ಉಡಾವಣೆಗೆ ಸಂಬಂಧಿಸಿ ಪರೀಕ್ಷೆ ನಡೆಯುತ್ತಿತ್ತು. ಸ್ಫೋಟದಿಂದಾಗಿ ಹಲವು ಮೈಲಿಗಳ ದೂರದಲ್ಲಿದ್ದ ಕಟ್ಟಡಗಳು ಕಂಪಿಸಿದವು. ಹಲವು ನಿಮಿಷಗಳ ಕಾಲ ಸರಣಿ ಸ್ಫೋಟಗಳು ಸಂಭವಿಸಿದವು. ಆಕಾಶವನ್ನು ಕಪ್ಪು ಹೊಗೆ ಆವರಿಸಿತು. ಸಾವು-ನೋವಿನ ಬಗ್ಗೆ ತಕ್ಷಣಕೆ ವರದಿಗಳು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News