ಕಾಬೂಲ್‌ನಲ್ಲಿ ಅವಳಿ ಆತ್ಮಹತ್ಯಾ ಬಾಂಬ್‌ ಸ್ಫೋಟ; 24 ಸಾವು, 91 ಮಂದಿಗೆ ಗಾಯ

Update: 2016-09-05 16:54 GMT

ಕಾಬೂಲ್‌, ಸೆ.5: ಇಬ್ಬರು ತಾಲಿಬಾನ್‌ ಮಾನವ ಬಾಂಬರ್‌ಗಳು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಬಳಿ ಬಾಂಬ್‌ ಸ್ಫೋಟಿಸಿದ ಪರಿಣಾಮವಾಗಿ 24 ಮಂದಿ ಮೃತಪಟ್ಟು, 91 ಮಂದಿ ಗಾಯಗೊಂಡ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
ಇಬ್ಬರು ಮಾನವ ಬಾಂಬರ್‌ಗಳು  ತಮ್ಮನ್ನು ತಾವು ಸ್ಫೋಟಿಸಿಕೊಂಡು ಹತರಾದರು.
ರಕ್ಷಣಾ ಸಚಿವಾಲಯವನ್ನು ಗುರಿಯಾಗಿರಿಸಿ ಮೊದಲ ದಾಳಿ ನಡೆದಿತ್ತು. ಎರಡನೆ ದಾಳಿ ಪೊಲೀಸರನ್ನು ಗುರಿಯಾಗಿರಿಸಿ ನಡೆದಿದೆ ಎಂದು ತಾಲಿಬಾನ್‌ ವಕ್ತಾರ ಝಾಬಿವುಲ್ಲಾ ಮುಜಾಹಿದ್‌ ಟ್ವೀಟ್‌ ಮಾಡಿದ್ದಾನೆ.
ಘಟನೆಯಲ್ಲಿ ಗಾಯಗೊಂಡು ಕಾಬೂಲ್‌ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಪೈಕಿ ಹಲವರ   ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News