×
Ad

ವಿಳಾಸವೇ ಇಲ್ಲದೆ ಈ ಪತ್ರ ಸರಿಯಾದ ವಿಳಾಸಕ್ಕೆ ತಲುಪಿತು. ಹೇಗೆ ನೋಡಿ

Update: 2016-09-07 17:05 IST

ಐಸ್‌ಲ್ಯಾಂಡ್ ಬಹಳಷ್ಟು ವಿಷಯಗಳಿಗೆ ಪ್ರಸಿದ್ಧ. ಸುಂದರ ಸ್ಥಳಗಳು, ಜ್ವಾಲಾಮುಖಿಗಳು, ಬಿಸಿ ನೀರಿನ ಬುಗ್ಗೆಗಳು, ಚಿಲುಮೆಗಳು ಮತ್ತು ಲಾವಾ ಹೊಲಗಳು. ಈ ಪಟ್ಟಿಗೆ ಇನ್ನೂ ಕೆಲವನ್ನು ಸೇರಿಸಬಹುದು. ಅಲ್ಲಿ ವಿಶ್ವದ ಅತ್ಯುತ್ತಮ ಅಂಚೆ ಸೇವೆ ಇದೆ. ಇಲ್ಲಿನ ಅಂಚೆ ಸೇವೆಗೆ ಪತ್ರಗಳನ್ನು ತಲುಪಿಸಲು ವಿಳಾಸವೇ ಬೇಕೆಂದಿಲ್ಲ. ಸ್ಥಳದ ನಕ್ಷೆಯನ್ನು ಬರೆದು ಪತ್ರ ಹಾಕಿದರೆ ಅಂಚೆ ಸೇವೆ ಅದನ್ನು ಸರಿಯಾದ ಸ್ಥಳಕ್ಕೆ ತಲುಪಿಸಿದೆ.

ಈ ಪತ್ರವನ್ನು ದೇಶದ ದೊಡ್ಡ ನಗರಿಯಾದ ರಾಜಧಾನಿ ರೇಕ್ಜಾವಿಕ್‌ನಲ್ಲಿ ಬರೆಯಲಾಗಿತ್ತು. ಸ್ಥಳದ ವಿಳಾಸವನ್ನು ನೆನಪಿಟ್ಟುಕೊಂಡಿರದ ಲೇಖಕ ತನ್ನ ಸೃಜನಶೀಲತೆ ಬಳಸಿ ಪಶ್ಚಿಮ ಐಸ್‌ಲ್ಯಾಂಡಿನ ಹ್ವಾಮ್ಸ್ವೈಟ್‌ನಲ್ಲಿರುವ ಹೊಲವೊಂದಕ್ಕೆ ಹೋಗುವ ನಕ್ಷೆಯನ್ನು ಪತ್ರದ ಮೇಲೆ ಬರೆದ. ಅದರಲ್ಲಿ ಗುರಿಯನ್ನು ಕೆಂಪು ಬಣ್ಣದಲ್ಲಿ ಸೂಚಿಸಲಾಗಿತ್ತು. ನಕ್ಷೆಯ ಜೊತೆಗೆ ಅಂಚೆ ಸೇವೆಗೆ ಕೆಲವು ಕ್ಲೂಗಳು ಇದ್ದವು. ದೇಶ: ಐಸ್‌ಲ್ಯಾಂಡ್, ನಗರ: ಬೌರಡಲೂರ್. ಹೆಸರು: ಐಸ್‌ಲ್ಯಾಂಡಿಕ್/ಡ್ಯಾನಿಷ್ ದಂಪತಿ ಇರುವ ಕುದುರೆ ಹೊಲ ಮತ್ತು ಮೂವರು ಮಕ್ಕಳು ಮತ್ತು ಬಹಳಷ್ಟು ಕುರಿಗಳು! ಈ ಪತ್ರವನ್ನು ಪಡೆದ ಅದೃಷ್ಟವಂತರು ರೆಬೆಕಾ ಕ್ಯಾಥರೀನ್ ಕಾಡು ಆಸ್ಟನ್‌ಫೀಲ್ಡ್! ರೆಡಿಟ್ ಬಳಕೆದಾರ ಈ ಪತ್ರದ ಚಿತ್ರವನ್ನು ಅಂತರ್ಜಾಲಕ್ಕೆ ಹಾಕಿದ ಕಾರಣ ವಿಷಯ ಬೆಳಕಿದೆ ಬಂದಿದೆ. ಈಗ ಈ ಚಿತ್ರ ಅಂತರ್ಜಾಲದಲ್ಲಿ ವೈರಲ್ ಆಗಿದೆ. ವೇಗದ ಇಮೇಲ್ ಮತ್ತು ತಕ್ಷಣದ ಸಂದೇಶಗಳ ನಡುವೆ ವಿಳಾಸ ಗೊತ್ತಿರದ ಒಂದು ಪತ್ರವನ್ನು ತಲುಪಿಸಲು ಅಂಚೆ ಇಲಾಖೆ ಪಟ್ಟ ಶ್ರಮ ನಿಜಕ್ಕೂ ಹೃದಯಸ್ಪರ್ಶಿ.

ಕೃಪೆ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News