ಹಾಜಿಗಳಲ್ಲೇ ಹಿರಿಯಜ್ಜ 120 ವರ್ಷದ ಶೇಖ್ ಸುಲೈಮಾನ್

Update: 2016-09-11 11:37 GMT

ಪ್ರತೀ ವರ್ಷ ಹಜ್ ಪ್ರವಾಸಿಗರ ಬಗ್ಗೆ ಹಲವು ವಿಶಿಷ್ಟ ಸುದ್ದಿಗಳು ಓದಲು ಸಿಗುತ್ತದೆ. ಈ ವರ್ಷ ಅಂತಹ ವಿಶೇಷ ವ್ಯಕ್ತಿ ಸುಲೈಮಾನ್. 120 ವರ್ಷದ ಚೀನೀ ಮುಸ್ಲಿಂ ಸುಲೈಮಾನ್ ಅವರು ಮೆಕ್ಕಾಗೆ ಸೈಕಲಿನಲ್ಲೇ ಪ್ರವಾಸ ಹೋಗಿದ್ದಾರೆ. ಲೆಬನಾನಿನಿಂದ ಮೆಕ್ಕಾಗೆ ತೆರಳಿರುವ ಮತ್ತೊಬ್ಬ ವ್ಯಕ್ತಿ ಶೇಖ್ ಸುಲೈಮಾನ್ ಘನಿ ತಮ್ಮ ಫೇಸ್‌ಬುಕ್ ಪೋಸ್ಟಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.
ಅಲ್ಲಾಹ್ ಎಲ್ಲರನ್ನೂ ತಮ್ಮ ಮನೆಗೆ ಹೇಗೆ ಕರೆಸಿಕೊಳ್ಳುತ್ತಾನೆ ಎನ್ನುವುದನ್ನು ಇಂತಹ ಕತೆಗಳೇ ನಮಗೆ ಹೇಳಿ ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ, ಘನಿ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ ಸೈಕಲ್ ಸವಾರ ಹಿರಿಯಜ್ಜ ಸುಲೈಮಾನ್ ಜೊತೆ ಮಾತುಕತೆಯೂ ಇದೆ. ತಮ್ಮ ಜೀವನದ ಅತ್ಯುತ್ತಮ ಪ್ರಯಾಣವನ್ನು ಪೂರ್ಣಗೊಳಿಸುವ ಶಕ್ತಿ ಮತ್ತು ಉತ್ಸಾಹ ಹಿರಿಯಜ್ಜನ ಮಾತಿನಲ್ಲಿ ಕಾಣಿಸುತ್ತದೆ.
ನಮ್ಮ ಹಿರಿಯ ಸಹೋದರನ ಪ್ರಾರ್ಥನೆಯನ್ನು ಅಲ್ಲಾಹ್ ಈಡೇರಿಸಲಿ. ಎಲ್ಲಾ ರೀತಿಯ ತೊಂದರೆಗಳಿಂದ ಅವರನ್ನು ರಕ್ಷಿಸಿ ಅಲ್ಲಾಹ್‌ಗೆ ಪ್ರಿಯವಾದ ಹಾದಿಯಲ್ಲಿ ನಡೆಯಲು ಪ್ರೇರೇಪಿಸಲಿ.

ಕೃಪೆ: http://muslimcouncil.org.hk/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News