ದಕ್ಷಿಣ ಕೊರಿಯಾದಲ್ಲಿ ಭೂಕಂಪ

Update: 2016-09-12 13:09 GMT

ಸಿಯೋಲ್ , ಸೆ.12 : ದಕ್ಷಿಣ ಕೊರಿಯಾದ ನೈಋತ್ಯ ಪ್ರದೇಶದಲ್ಲಿ  ಸೋಮವಾರ 5.3 ರಿಕ್ಟರ್ ತೀವ್ರತೆಯ ಭೂಕಂಪ ಸಂಭವಿಸಿದೆ  ಎಂದು ದೇಶದ ಹವಾಮಾನ ಇಲಾಖೆ ತಿಳಿಸಿದೆ. 

ಸಿಯೋಲ್ ನಿಂದ ಸುಮಾರು 371 ಕಿಲೋಮೀಟರ್ ದೂರದಲ್ಲಿರುವ ಎಂಗ್ಜು ಎಂಬಲ್ಲಿಗೆ ದಕ್ಷಿಣದಲ್ಲಿ 8 ಕಿಮೀ ದೂರದಲ್ಲಿ ಭೂಕಂಪದ ಕೇಂದ್ರ ಎಂದು ಗುರುತಿಸಲಾಗಿದೆ ಎಂದು ಬೂಸಾನ್ ಪ್ರಾದೇಶಿಕ ಹವಾಮಾನ ಆಡಳಿತ ಹೇಳಿದೆ. ಎಂಗ್ಸಾಂಗ್ ಪ್ರಾಂತ್ಯದಾದ್ಯಂತ ಕಂಪನದ ಅನುಭವವಾಗಿದೆ ಎಂದು ಹೇಳಲಾಗಿದೆ. 

ಈ ಪ್ರದೇಶದಲ್ಲಿ ಮನೆಗಳು ಕಂಪಿಸಿರುವ ಬಗ್ಗೆ ನಿವಾಸಿಗಳು ಹೇಳಿದ್ದಾರೆ. ಆದರೆ ಯಾವುದೇ ಪ್ರಾಣ ಅಥವಾ ಸೊತ್ತಿನ ಹಾನಿ ಆಗಿರುವ ವರದಿಗಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News