ವಿಕಿ ಡೋನರ್‌ಗಳಾಗುತ್ತಿದ್ದಾರೆ ಕಾಲೇಜು ವಿದ್ಯಾರ್ಥಿಗಳು!
ಭೋಪಾಲ್: ಹೆಚ್ಚುವರಿ ಪಾಕೆಟ್ ಮನಿಗಾಗಿ ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ಕಂಡುಕೊಂಡ ಹೊಸ ವಿಧಾನ ಯಾವುದು ಗೊತ್ತೇ? ತಮ್ಮ ವೀರ್ಯದಾನ ಮಾಡುವುದು. ವೀರ್ಯದಾನದ ವಿಧಾನದ ಬಗ್ಗೆ ಮಾಹಿತಿ ಕೇಳಿ ದಿನಕ್ಕೆ ಐದರಿಂದ ಏಳು ಕರೆಗಳು ಬರುತ್ತಿವೆ ಎಂದು ಬಂಜೆತನ ಚಿಕಿತ್ಸಾ ತಜ್ಞ ವೈದ್ಯರು ಹೇಳುತ್ತಾರೆ.
"ಪ್ರತಿ ಬಾರಿ ವೀರ್ಯದಾನಕ್ಕೆ 2000 ರೂಪಾಯಿವರೆಗೂ ಸಂಪಾದಿಸಬಹುದು. ಆದರೆ ನೀವು ವಾಸಿಸುವ ನಗರಗಳಿಗೆ ಅನುಗುಣವಾಗಿ ಇದು 1000 ಅಥವಾ 500 ರೂಪಾಯಿ ಕೂಡಾ ಇರಬಹುದು ಎಂದು ತಜ್ಞರು ಹೇಳುತ್ತಾರೆ.
ಮಧ್ಯಪ್ರದೇಶದಲ್ಲಿ ವೀರ್ಯಬ್ಯಾಂಕ್‌ಗಳು ಇಲ್ಲದಿರುವುದರಿಂದ ಇಂಥ ಕರೆ ಮಾಡಿದವರಿಗೆ ಮುಂಬೈ ಅಥವಾ ದೆಹಲಿಯಲ್ಲಿ ವೀರ್ಯದಾನ ಮಾಡುವಂತೆ ತಜ್ಞರು ಸೂಚಿಸುತ್ತಾರೆ. ಇಂಥ ಬ್ಯಾಂಕ್‌ಗಳಲ್ಲಿ ಪಡೆದ ವೀರ್ಯವನ್ನು ಶೀಥಲೀಕರಿಸಿ ಸಂಗ್ರಹಿಸಿ ಇಡಲಾಗುತ್ತದೆ.
ಶೇಕಡ 90ರಷ್ಟು ದಾನಿಗಳು ಕಾಲೇಜು ಹುಡುಗರು. ಐದು ವರ್ಷದ ಹಿಂದಿನವರೆಗೂ ಜನ ತಮ್ಮ ಕುಟುಂಬದವರ ವೀರ್ಯವನ್ನೇ ಪಡೆಯಲು ಇಷ್ಟಪಡುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಜನ ಮುಕ್ತವಾಗಿ ಈ ಬಗ್ಗೆ ಮಾತನಾಡುತ್ತಾರೆ ಎಂದು ಡಾ.ರೊಮಿಕಾ ಕಪೂರ್ ಹೇಳುತ್ತಾರೆ. ಅರ್ಹ ದಾನಿಗಳನ್ನು ಗುರುತಿಸಲು ಪ್ರತಿ ಆರು ತಿಂಗಳಿಗೊಮ್ಮೆ ರಕ್ತಪರೀಕ್ಷೆ ಹಾಗೂ ಎಚ್‌ಐವಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಕಪೂರ್ ಹೇಳುತ್ತಾರೆ.
ವೀರ್ಯದಾನಕ್ಕೆ ಮುನ್ನ ಕುಟುಂಬದ ಹಿನ್ನೆಲೆಯ ತಪಾಸಣೆ, ವೀರ್ಯ ವಿಶ್ಲೇಷಣೆ ಹಾಗೂ ವೈದ್ಯಕೀಯ ಹಾಗೂ ವಂಶವಾಹಿ ಪರೀಕ್ಷೆಗಳಿಗೆ ಒಳಪಡಬೇಕಾಗುತ್ತದೆ.