ಮಕ್ಕಳಿಗೆ ಜೀವನ ಪರ್ಯಂತ ಕಾಯಿಲೆ
Update: 2016-09-13 23:54 IST
ವಾಶಿಂಗ್ಟನ್, ಸೆ. 13: ಬೇರೆಯವರು ಸೇದಿಬಿಟ್ಟ ಸಿಗರೆಟನ್ನು ಮಕ್ಕಳು ಸೇವಿಸಿದರೆ ಜೀವನಪರ್ಯಂತ ಹೃದಯ, ಶ್ವಾಸಕೋಶ ಮತ್ತು ಇತರ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
‘‘ಸಿಗರೆಟ್ ಹೊಗೆಯನ್ನು ಮಕ್ಕಳು ಸೇವಿಸುವುದು ಅವರ ದೀರ್ಘಾವಧಿ ಹೃದಯ ಆರೋಗ್ಯಕ್ಕೆ ಕಂಟಕವಾಗಿರುತ್ತದೆ ಹಾಗೂ ಅವರ ಆಯುಷ್ಯವನ್ನು ಕಡಿಮೆಗೊಳಿಸಬಹುದು’’ ಎಂದು ಅಮೆರಿಕದ ಚಿಲ್ಡ್ರನ್ಸ್ ಮರ್ಸಿ ಹಾಸ್ಪಿಟಲ್ ಆ್ಯಂಡ್ ಕ್ಲಿನಿಕ್ಸ್‌ನ ಪ್ರೊಫೆಸರ್ ಗೀತಾ ರಘುವೀರ್ ಹೇಳುತ್ತಾರೆ.