ಕೇರಳ : ಓಣಂ ಸಂದರ್ಭ ಆದ ಮದ್ಯ ಮಾರಾಟ ಎಷ್ಟು ಕೋಟಿಯದ್ದು?

Update: 2016-09-15 05:37 GMT

ತಿರುವನಂತಪುರಂ,ಸೆ.15: ಓಣಂಕಾಲದಲ್ಲಿ ಮದ್ಯಮಾರಾಟದಿಂದಾಗಿ ಕೇರಳ ರಾಜ್ಯದ ಆದಾಯದಲ್ಲಿ ಹೆಚ್ಚಳವಾಗಿದೆ ಎಂದು ವರದಿಯಾಗಿದೆ .ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಶೇ. 15.99 ರಷ್ಟು ಮದ್ಯದಿಂದ ಬರುವ ಆದಾಯದಲ್ಲಿ ಹೆಚ್ಚಳವಾಗಿದೆ. ಕಳೆದ ಎಂಟು ದಿವಸಗಳಲ್ಲಿ 409.55 ಕೋಟಿ ರೂಪಾಯಿಯ ಮದ್ಯವನ್ನು ಬಿವರೇಜ್ ಕಾರ್ಪೊರೇಷನ್ ಮಾರಿದೆ. ಕಳೆದವರ್ಷ ಇದೇ ಅವಧಿಯಲ್ಲಿ 353.08 ಕೋಟಿ ರೂಪಾಯಿ ಮದ್ಯಮಾರಾಟ ನಡೆದಿತ್ತು. ಈಸಲ ಈ ತಿಂಗಳ ಒಂದನೆ ತಾರೀಕಿನಿಂದ ಮೊನ್ನೆವರೆಗೆ ಈ ಹದಿಮೂರು ದಿವಸಗಳಲ್ಲಿ 532.34 ಕೋಟಿ ರೂಪಾಯಿ ಮದ್ಯವನ್ನು ಬಿವರೇಜ್ ಕಾರ್ಪೊರೇಷನ್ ಮಾರಾಟ ಮಾಡಿದೆ.

ಈ ಬಾರಿ ಉತ್ರಾಡ ದಿನದಲ್ಲಿ 58.01 ಕೋಟಿ ರೂಪಾಯಿ ಮದ್ಯಮಾರಾಟವಾಯಿತು. ಕಳೆದ ವರ್ಷ ಇದು 59 ಕೋಟಿ ರೂಪಾಯಿಯದ್ದಾಗಿತ್ತು. ಉತ್ರಾಡ ದಿವಸದಲ್ಲಿ ಅತಿಹೆಚ್ಚು ಮದ್ಯ ಮಾರಾಟ ಇರಿಂಙಲ ಕುಡಿಯಲ್ಲಿ ಆಗಿದೆ. ಓಣಂ ದಿನಗಳಲ್ಲಿ ಇಲ್ಲಿಯೇ ಒಟ್ಟು 53.84 ಲಕ್ಷರೂಪಾಯಿ ಮೊತ್ತದ ಮದ್ಯಮಾರಾಟವಾಗಿದೆ. ಕಳೆದ ವರ್ಷ ಅತ್ಯಂತ ಹೆಚ್ಚು ಮದ್ಯಮಾರಾಟವಾಗಿದ್ದು ಚಾಲಕ್ಕುಡಿಯಲ್ಲಾಗಿತ್ತು. ಈ ಬಾರಿ ಇಲ್ಲಿ 40 ಲಕ್ಷ ರೂಪಾಯಿಯ ಮದ್ಯಮಾರಾಟವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News