ಅತ್ಯಾಚಾರಿಗೆ ಸಾವೇ ಸರಿಯಾದ ಶಿಕ್ಷೆ: ನಟಿ ಮಂಜುವಾರಿಯರ್

Update: 2016-09-16 10:03 GMT

ತಿರುವನಂತಪುರಂ,ಸೆಪ್ಟಂಬರ್ 16: ಸೌಮ್ಯಾ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ತೀರ್ಪಿನ ವಿರುದ್ಧ ಕಟುವಾದ ಪ್ರತಿಕ್ರಿಯೆಯನ್ನು ಮಳೆಯಾಳಂ ಸಿನೆಮಾ ರಂಗದ ಖ್ಯಾತ ನಟಿ ಮಂಜುವಾರಿಯರ್ ನೀಡಿದ್ದಾರೆ ಎಂದು ವರದಿಯಾಗಿದೆ. ಗೋವಿಂದಚಾಮಿಯ ಗಲ್ಲುಶಿಕ್ಷೆ ರದ್ದು ಪಡಿಸಿದ ಸುಪ್ರೀಂಕೋರ್ಟಿನ ಕ್ರಮದಲ್ಲಿ ನಿರಾಸೆ ಮತ್ತು ಈ ತೀರ್ಪಿನಿಂದ ಉಂಟಾಗಬಹುದಾದ ಪ್ರತ್ಯಾಘಾತಗಳ ಬಗ್ಗೆ ಮಂಜುವಾರಿಯರ್ ಆತಂಕ ವ್ಯಕ್ತಪಡಿಸಿದ್ದಾರೆ. ಹೆಣ್ಣನ್ನು ಬಲಿಪಡೆಯುವವನಿಗೆ ಮರಣವೇ ತೀರ್ಪುಆಗಬೇಕು ಎಂದು ಮಂಜು ಹೇಳಿದ್ದಾರೆ. ಅದು ಕೊರಳಿಗೆ ನೇಣು ಹಾಕುವ ಮೂಲಕವೇ ಆಗಬೇಕೆಂದಿಲ್ಲ. ಅವನ ಶಿಕ್ಷಾ ಜೀವನ ಮರಣಕ್ಕೆ ಸಮಾನವಾದರೆ ಸಾಕು. ರಿಯಾಯತಿಯೇ ಇಲ್ಲದ ಏಕಾಂತ ಜೈಲುವಾಸದಂತಂಹ ವ್ಯವಸ್ಥೆಗಳನ್ನು ಯೋಚಿಸಬೇಕಾಗಿದೆ. ಅದಕ್ಕಾಗಿ ಕಾನೂನು ವ್ಯವಸ್ಥೆಗೆ ತಿದ್ದುಪಡಿ ತರಬೇಕಾಗಿದೆ ಎಂದು ಮಂಜುವಾರಿಯರ್ ಬಲವಾಗಿ ಆಗ್ರಹಿಸಿದ್ದಾರೆ. ಮಂಜುವಾರಿಯರ್‌ರ ಫೇಸ್‌ಬುಕ್‌ನ ಪೂರ್ಣರೂಪ ಹೀಗಿದೆ.

   " ಜೀವನ ಹಲವು ಬಾರಿ ಸೋಲಿಸಿದ್ದರಿಂದ ಕಲಿಕೆಯನ್ನು ನಿಲ್ಲಿಸಬೇಕಾಗಿ ಬಂದ ಮತ್ತು ಒಂದು ಸಣ್ಣ ಮನೆ ಆಗಬೇಕೆಂಬ ಸಾಮಾನ್ಯ ಕನಸಿಗಾಗಿ ಹಸಿವು ಮರೆತು ಕೆಲಸಮಾಡಬೇಕಾಗಿಬಂದ ಓರ್ವ ಹೆಣ್ಣು ಮಗಳು. ತನ್ನ ದಾರಿಕಾಯುತ್ತಿರುವ ಅಮ್ಮನ ಹತ್ತಿರ ಹೋಗುವ ಪ್ರಯಾಣದಲ್ಲಿ ಏಕಾಂತವಾದ ರೈಲಿನ ಕೋಣೆಯಿಂದ ಅವಳು ದಾರಿ ಬದಿಗೆಎಸೆಯಲ್ಪಡುತ್ತಾಳೆ. ಅಲ್ಲಿ ಅವನ ಉಗುರು ಮತ್ತು ಹಲ್ಲುಗಳಿಂದ ಆಕೆಯನ್ನು ತಿವಿಯಲಾಗುತ್ತದೆ. ಆರನೆ ದಿವಸ ಆಸ್ಪತ್ರೆಯಲ್ಲಿ ಅವಳು ಇಲ್ಲವಾಗುತ್ತಾಳೆ. ಅವನಿಂದ ಮಾನಭಂಗಕ್ಕೊಳಗಾದ ಅವಳು ಮೃತಳಾಗಿರುವುದು ಸತ್ಯವೇ. ಒಂದು ಗಂಡುಪ್ರಾಣಿ ಅದಕ್ಕೆ ಕಾರಣವಾಗಿರುವುದೂ ಸತ್ಯವೇ. ಹಾಗಾದರೆ, ಅವನಿಗಿರುವ ಶಿಕ್ಷೆ ಏನು? ಈಗ ನಮ್ಮ ನ್ಯಾಯವ್ಯವಸ್ಥೆ ಮೊದಲು ವಿಧಿಸಿದ್ದನ್ನೇ ಮತ್ತೆ ತಿದ್ದಿ ಬರೆದಿದೆ.

ಹೆಣ್ಣಿನ ಗೌರವವನ್ನು ಸೀಳಿಹಾಕುವವನಿಗೆ ಏನು ಶಿಕ್ಷೆಯೆಂಬ ಬಗ್ಗೆ ಇರುವ ಅಸ್ಪಷ್ಟತೆ ಸೌಮ್ಯಾ ಕೊಲೆಪ್ರಕರಣದಲ್ಲಿ ಪರಮೋಚ್ಚ ನ್ಯಾಯಪೀಠದ ತೀರ್ಪಿನಲ್ಲಿ ಸ್ಪಷ್ಟವಾಗಿದೆ.ಏಳುವರ್ಷ ಎಂಬ ಊಹಾಪೋಹದಲ್ಲಿ ಆರಂಭವಾಗಿ ಕೊನೆಗದು ಆಜೀವಾವಧಿ ಶಿಕ್ಷೆಯೆಂಬ ವಾರ್ತೆಗಳು ಬಂದವು. ಆಗಲೂ ಅದು ಜೀವನದ ಕೊನೆಯವರೆಗೆ ಇರುವ ಶಿಕ್ಷೆಯೇ ಎಂದು ಖಚಿತವಾಗಿ ಹೇಳಲು ನಮಗೆ ಸಾಧ್ಯವಾಗುವುದಿಲ್ಲ. ಅಥವಾ ಒಂದುವೇಳೆ ಹಾಗೆಯೇ ಇದೆ ಎಂದಾದರೆ ಭವಿಷ್ಯದಲ್ಲಿ ಯಾವುದಾದರೊಂದು ಸರಕಾರಕ್ಕೆ ಆ ಶಿಕ್ಷೆಯಲ್ಲಿ ರಿಯಾಯತಿ ಪ್ರಕಟಿಸಬಹುದೆಂಬವಿಷಯವೂ ಪ್ರಶ್ನಾರ್ಥಕವಾಗಿ ನಗುತ್ತಿದೆ.

ಇದುವೇ ಕೊನೆಯಲ್ಲಿ ಜಿಶಾ ಕೊಲೆಪ್ರಕರಣದಲ್ಲಿ ಸಂಭವಿಸಲಿದೆಯೇ ಎಂದು ಎಲ್ಲರಿಗೂ ಸಂದೇಹವಾಗಿದೆ. ಗಲ್ಲುಶಿಕ್ಷೆಗೆ ಎರಡು ಪಾರ್ಶ್ವಗಳಿರುವುದರಿಂದ ಮಾನಭಂಗದ ಕೇಸುಗಳಲ್ಲಿ ಜೀವನದಾದ್ಯಂತ ಯಾವುದೇ ರಿಯಾಯತಿ ಸೌಲಭ್ಯಗಳನ್ನು ನೀಡದೆ ಏಕಾಂತವಾದ ಕಠಿಣ ಜೈಲುಶಿಕ್ಷೆ ಎಂಬ ವ್ಯವಸ್ಥೆಯನ್ನು ಈಗಿನ ಕಾನೂನಿಗೆ ತಿದ್ದುಪಡಿ ಮಾಡಿ ತರಬೇಕಾಗಿದೆ ಅಲ್ಲವೇ? ನಿರ್ಭಯ ಪ್ರಕರಣದ ಬಳಿಕ ಶಿಕ್ಷೆಯ ನಿಯಮಗಳಲ್ಲಿ ಮಾಡಿರುವ ತಿದ್ದುಪಡಿಗಳು ಕೂಡಾ ಸಮಾಧಾನ ನೀಡುವಂತೆ ಆಗಿಲ್ಲ ಎಂಬುದನ್ನು ಸೌಮ್ಯಾ ಪ್ರಕರಣದ ತೀರ್ಪು ತೋರಿಸಿಕೊಡುತ್ತಿದೆ.

ಹೆಣ್ಣನ್ನು ಬಲಿಪಡೆಯುವವನಿಗೆ ಸಾಯುವವರೆಗೆ ಶಿಕ್ಷೆ ನೀಡುವ ತೀರ್ಪು ಆಗಬೇಕು. ಅದು ಕೊರಳಿಗೆ ಉರುಳು ಹಾಕಿಯೇ ಆಗಬೇಕೆಂದಿಲ್ಲ. ಅವನ ಉಳಿದ ಜೀವನ ಮರಣಸಮಾನವಾದರೆ ಸಾಲದೇ? ಯಾವುದೇ ತಿದ್ದುಪಡಿಗೂ ಸಾಧ್ಯತೆಯಿಲ್ಲದ ಇಂತಹ ಒಂದು ಅಂತಿಮ ತೀರ್ಪಿಗೆ ನಾವು ಯಾವಾಗ ನಮ್ಮ ಕಾನೂನನ್ನು ಏಕೀಕರಿಸುವುದು?"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News