" ಇದು ಸಾಜಿದ್ ಖಾನ್ ಗೆ ಆಸ್ಕರ್ ಸಿಕ್ಕಿದಂತೆ ! "
ಕತ್ರಿನಾ ಕೈಫ್ ಭಾರತೀಯ ಸಿನಿಮಾಗೆ ನೀಡಿದ ಕೊಡುಗೆಗಾಗಿ ಆಕೆಗೆ ಸ್ಮಿತಾ ಪಾಟೀಲ್ ಸ್ಮರಣಾರ್ಥ ಪ್ರಶಸ್ತಿ ನೀಡುವುದಾಗಿ ಇತ್ತೀಚೆಗೆ ಘೋಷಿಸಲಾಗಿದೆ. ಪ್ರಶಸ್ತಿ ಸಿಕ್ಕರೆ ಕತ್ರಿನಾ ಹಿಂದೆ ಈ ಪ್ರಶಸ್ತಿ ಪಡೆದ ಮಹಾನ್ ತಾರೆಯರಾಗಿರುವ ತನ್ವಿ ಅಜ್ಮಿ, ಶ್ರೀದೇವಿ, ಮನೀಷಾ ಕೊಯ್ರಿಲಾ, ಉರ್ಮಿಳಾ ಮಾತೋಂಡ್ಕರ್, ತಬು, ವಿದ್ಯಾ ಬಾಲನ್, ಐಶ್ವರ್ಯಾ ರೈ ಬಚ್ಚನ್, ಕರೀನಾ ಕಪೂರ್ ಖಾನ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಸಾಲಿಗೆ ಸೇರಲಿದ್ದಾರೆ.
ಕತ್ರಿನಾ ಒಂದು ದಶಕಕ್ಕೂ ಹೆಚ್ಚು ಕಾಲ ಬಾಲಿವುಡ್‌ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅವರ ಹೊಸ ಸಿನಿಮಾ ‘ಬಾರ್ ಬಾರ್ ದೇಖೋ’ ಇತ್ತೀಚೆಗೆ ಬಿಡುಗಡೆಯಾಗಿ ಮೂಲೆ ಸೇರಿದೆ. ಈ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡುವ ಸರ್ಕಾರೇತರ ಸಂಘಟನೆ ಪ್ರಿಯದರ್ಶಿನಿ ಅಕಾಡೆಮಿಯ ನಿರ್ಧಾರ ತಪ್ಪು. ಅಲ್ಲದೆ ಮಥನ್, ಭೂಮಿಕಾ ಮತ್ತು ಅರ್ತ್ ಮೊದಲಾದ ಸಿನಿಮಾಗಳಲ್ಲಿ ಮನೋಜ್ಞ ಅಭಿನಯ ನೀಡಿರುವ ಸ್ಮಿತಾ ಪಾಟೀಲ್ ಅವರಂತಹ ಅದ್ಭುತ ಕಲಾವಿದೆಯ ನೆನಪಲ್ಲಿ ಈ ಪ್ರಶಸ್ತಿಯನ್ನು ಕತ್ರಿನಾಗೆ ಕೊಡುವುದು ದೊ್ಡ ಅವಹೇಳನೆ ಎಂದು ಟೀಕಿಸಲಾಗಿದೆ.
ಅಭೂತಪೂರ್ವ ಅಭಿಮಾನಿಗಳಿದ್ದರೂ ಕತ್ರಿನಾಳ ಹೆಸರು ಪ್ರಶಸ್ತಿಗೆ ಸೂಚಿಸಿದಾಗ ಟ್ವಿಟ್ಟರ್‌ನಲ್ಲಿ ಆಕೆಯ ಪರವಾಗಿ ಮಾತನಾಡುವವರಿಗಿಂತ, ತಮಾಷೆ ಮಾಡಿದವರೇ ಹೆಚ್ಚಾಗಿದ್ದಾರೆ. ಕತ್ರಿನಾಳ ಅಭಿನಯವನ್ನು ಟೀಕಿಸುವವರಂತೂ ತಮ್ಮ ಮಾತನ್ನು ಸ್ಪಷ್ಟವಾಗಿ ಮುಂದಿಟ್ಟಿದ್ದಾರೆ.
ಕೆಲವರು ಕತ್ರಿನಾ ಈ ಪ್ರಶಸ್ತಿ ಸ್ವೀಕರಿಸುವುದೆಂದರೆ ಸಾಜಿದ್ ಖಾನ್‌ಗೆ ಆಸ್ಕರ್ ಕೊಟ್ಟಿರುವುದಕ್ಕೆ ಸಮ ಎಂದಿದ್ದಾರೆ. ಇನ್ನು ಕೆಲವರು, “500 ವರ್ಷದ ಹಿರಿಯ ವೃದ್ಧೆ ಕತ್ರಿನಾ ಕೈಫ್ ಮುಖಕ್ಕಿಂತ ಉತ್ತಮ ಭಾವನೆ ಪ್ರಕಟಿಸಬಹುದು”, “ಈ ನಡುವೆ ಕತ್ರಿನಾ ಕೈಫ್ ಯಾರು ಸ್ಮಿತಾ ಪಾಟೀಲ್ ಎಂದು ಗೂಗಲ್‌ನಲ್ಲಿ ಹುಡುಕುತ್ತಿರಬಹುದು” “ಫರ್ದೀನ್ ಖಾನ್‌ಗೆ ಫಿಲಂಫೇರ್ ಅತ್ಯುತ್ತಮ ಚೊಚ್ಚಲ ನಟನ ಪ್ರಶಸ್ತಿ ಸಿಕ್ಕಿರುವಾಗ, ಕತ್ರಿನಾಗೆ ಈ ಪ್ರಶಸ್ತಿ ಸಿಕ್ಕಿದ್ದು ಅಚ್ಚರಿಯಲ್ಲ”, “ಸ್ಮಿತಾ ಪಾಟೀಲ್ ಸಮಾಧಿಯಿಂದ ಎದ್ದು ಬಂದು ಕತ್ರಿನಾಗೆ ಪ್ರಶಸ್ತಿ ನೀಡಿ ತನ್ನ ಹೆಸರು ಹಾಳು ಮಾಡಿದವರ ಮೇಲೆ ದಾಳಿ ಮಾಡಲಿದ್ದಾರೆ” ಮೊದಲಾದ ಟೀಕೆಗಳು ಟ್ವಿಟ್ಟರ್‌ನಲ್ಲಿ ಓಡುತ್ತಿವೆ.
ಕೃಪೆ: movies.ndtv.com