×
Ad

ಮುಂದಿನ ವರ್ಷದ ಎ.1ರಿಂದ ಜಿಎಸ್‌ಟಿ ಜಾರಿಗೊಳಿಸಲು ಬದ್ಧ:ಸಚಿವ ಮೇಘ್ವಾಲ್

Update: 2016-09-22 22:45 IST

ಹೊಸದಿಲ್ಲಿ,ಸೆ.22: ಉದ್ಯಮ ನಿರ್ವಹಣೆಯನ್ನು ಸುಲಭಗೊಳಿಸಲು ಜಿಎಸ್‌ಟಿ ಪ್ರಮುಖ ಸಾಧನವಾಗಿದೆ ಎಂದು ಗುರುವಾರ ಇಲ್ಲಿ ಒತ್ತಿ ಹೇಳಿದ ಕೇಂದ್ರ ಸಹಾಯಕ ವಿತ್ತ ಸಚಿವ ಅರ್ಜುನ ರಾಮ್ ಮೇಘ್ವಾಲ್ ಅವರು, ಮುಂದಿನ ವರ್ಷದ ಎ.1ರಿಂದ ನೂತನ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲು ಸರಕಾರವು ಶಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಎಸ್‌ಟಿಯನ್ನು ಜಾರಿಗೊಳಿಸಲು ಮುಂದಿನ ವರ್ಷದ ಎ.1ರ ದಿನಾಂಕವನ್ನು ನಿಗದಿಗೊಳಿಸಲಾಗಿದೆ ಮತ್ತು ಅದನ್ನು ಸಾಧಿಸಲು ನಾವು ಬದ್ಧರಾಗಿದ್ದೇವೆ ಎಂದು ಅಸೋಚಾಮ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದರು.

ಜಿಎಸ್‌ಟಿ ದರ, ಪ್ರದೇಶ ಆಧಾರಿತ ವಿನಾಯಿತಿ, ದರಗಳ ವಿವಿಧ ಹಂತಗಳು ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಜಿಎಸ್‌ಟಿ ಮಂಡಳಿಯು ರಾಜ್ಯಗಳೊಡನೆ ಚರ್ಚಿಸಿ ನಿರ್ಧರಿಸಲಿದೆ ಎಂದರು.

ಕೇಂದ್ರ ವಿತ್ತಸಚಿವರ ಅಧ್ಯಕ್ಷತೆಯ ಜಿಎಸ್‌ಟಿ ಮಂಡಳಿಯು ಮೊದಲ ಬಾರಿಗೆ ಇಂದು ಸಭೆ ಸೇರಿದೆ. ಎರಡು ದಿನಗಳ ಸಭೆಯು ಜಿಎಸ್‌ಟಿಗೆ ಸಂಬಂಧಿಸಿದ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News