ಎಎಪಿ ಶಾಸಕ ಭಾರ್ತಿ ಬಂಧನ, ಜಾಮೀನು
Update: 2016-09-22 23:13 IST
ಹೊಸದಿಲ್ಲಿ, ಸೆ.22: ಎಐಐಎಂಎಸ್‌ನ ಆವರಣಗೋಡೆ ವಿವಾದ ಪ್ರಕರಣದಲ್ಲಿ ಇಂದು ಬಂಧಿಸಲಾಗಿದ್ದ ಎಎಪಿ ನಾಯಕ ಸೋಮನಾಥ ಭಾರ್ತಿಯವರಿಗೆ ದಿಲ್ಲಿಯ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿದೆ. ಶಾಸಕ ನ್ಯಾಯದಿಂದ ಪರಾರಿಯಾಗುವ ಸಾಧ್ಯತೆಯಿಲ್ಲ ಹಾಗೂ ಅವರು ಪರಿಹಾರಕ್ಕೆ ಅರ್ಹರೆಂದು ಅದು ಹೇಳಿದೆ.
ಭಾರ್ತಿಯವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೆಂಬ ದಿಲ್ಲಿ ಪೊಲೀಸರ ಮನವಿಯನ್ನು ತಿರಸ್ಕರಿಸಿದ ನಗರ ದಂಡಾಧಿಕಾರಿ ಅನುಜ್ ಅಗರ್ವಾಲ್, ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಇಂದು ಅಪರಾಹ್ನ ಭಾರ್ತಿಯವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.