ಇಸ್ರೋದಿಂದ ಮತ್ತೊಂದು ಐತಿಹಾಸಿಕ ಸಾಧನೆ; ಪಿಎಸ್‌ಎಲ್‌ವಿ ಸಿ35 ಎಂಟು ಉಪಗ್ರಹಗಳು ಉಡಾವಣೆ

Update: 2016-09-26 05:20 GMT

ಚೆನ್ನೈ, ಸೆ.26:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ  ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು,  ಧ್ರುವೀಯ ಉಪಗ್ರಹ ಉಡಾವಣಾ ವಾಹನ– ಪಿಎಸ್‌ಎಲ್‌ವಿ ಸಿ35 ಒಟ್ಟು ಎಂಟು ಉಪಗ್ರಹಗಳನ್ನು ಹೊತ್ತು ಇಂದು ಬೆಳಗ್ಗೆ ಆಗಸಕ್ಕೆ ಹಾರಿದೆ.
ಆಂಧ್ರದ ಶ್ರೀಹರಿ ಕೋಟಾದ ಸತೀಶ್‌ ಧವನ್ ಬಾಹ್ಯಾಕೇಶ ಕೇಂದ್ರದಿಂದ ಒಂದೇ ರಾಕೆಟ್ ನಲ್ಲಿ  ಎಂಟು ಉಪಗ್ರಹ ಗಳನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ.

ಬೆಳಗ್ಗೆ ಸುಮಾರು 9.12ಕ್ಕೆ ಸರಿಯಾಗಿ 3 ಸ್ವದೇಶಿ ಹಾಗೂ 5 ವಿದೇಶಿ ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ ರಾಕೆಟ್ ಯಶಸ್ವಿಯಾಗಿ ಆಗಸಕ್ಕೆ ಹಾರಿತು.

ಒಂದೇ ರಾಕೆಟ್‌ನಲ್ಲಿ ಬೇರೆ ಬೇರೆ ಉಪಗ್ರಹಗಳನ್ನು ಭಿನ್ನ ಕಕ್ಷೆಗಳಿಗೆ ಸೇರಿಸುವುದರಿಂದ ಕಾರ್ಯಾಚರಣೆಯ ವೆಚ್ಚ ಕಡಿಮೆಯಾಗಲಿದೆ ಮತ್ತು ಸಮಯವೂ ಉಳಿತಾಯವಾಗಲಿದೆ ಎಂಬ ಉದ್ದೇಶದೊಂದಿಗೆ ಉಪಗ್ರಹಗಳನ್ನು ಒಟ್ಟಿಗೆ ಉಡಾಯಿಸಲಾಗಿದೆ.ಎಂಟು ಉಪಗ್ರಹಗಳಲ್ಲಿ ಸಾಗರ ಮತ್ತು ಹವಾಮಾನ ಅಧ್ಯಯನದ ಉದ್ದೇಶದ ‘ಸ್ಕಾಟ್‌ಸ್ಯಾಟ್‌–1’ ಪ್ರಮುಖವಾದುದು. 

ಇದೇ ವೇಳೆ ಬೆಂಗಳೂರಿನ ಪಿಇಎಸ್‌ ಕಾಲೇಜಿನ 250 ವಿದ್ಯಾರ್ಥಿಗಳು   ನಿರ್ಮಿಸಿರುವ  ’ಪಿಐಎಸ್‌ಎಟಿ ’ ಉಪಗ್ರಹ  ಉಡಾವಣೆಯಾಗಿದೆ. ವಿದ್ಯಾರ್ಥಿಗಳು ನಿರ್ಮಿಸಿದ ಪಿ ಸ್ಯಾಟ್‌ ನ್ಯಾನೊ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪ್ರೊಫೆಸರ‍್ ಗಳು  ಸಂಭ್ರಮದಿಂದ ತೇಲಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News