ಮನೆಯಲ್ಲಿ ಇಲಿಗಳ ಕಾಟದಿಂದ ಮುಕ್ತರಾಗುವುದು ಹೇಗೆ?
ಇಲಿ ಕಾಟ ಅನುಭವಿಸದವರು ಯಾರಿದ್ದಾರೆ? ಆಹಾರ ಧಾನ್ಯ, ಬಟ್ಟೆ, ಕಾಗದದಿಂದ ಹಿಡಿದು ಎಲ್ಲವನ್ನೂ ಚಲ್ಲಾಪಿಲ್ಲಿಯಾಗಿ ಮಾಡುವ ಈ ಮೂಷಕ ಕಾಟವನ್ನು ಸಹಿಸಲಾಗದೇ ಸೋತುಹೋಗುವ ಮಹಿಳೆಯರು ಸಾಕಷ್ಟು ಮಂದಿ. ಆರೋಗ್ಯಕ್ಕೂ ಇದು ಮಾರಕ. ಇದರಿಂದ ಮುಕ್ತರಾಗುವ ಬಗೆ?
* ಇಲಿಗಳ ವಾಸಕ್ಕೆ ಪ್ರಶಸ್ತ ತಾಣ ಅಡುಗೆಮನೆ. ಅಡುಗೆಮನೆಯ ಕಪಾಟು ಅಥವಾ ಎಲ್ಲೂ ರಂದ್ರಗಳಿಲ್ಲದಂತೆ ಖಚಿತಪಡಿಸಿಕೊಳ್ಳಿ. ಆಹಾರಧಾನ್ಯವನ್ನು ಲೋಹದ ಅಥವಾ ಗಾಜಿನ ಪಾತ್ರೆಗಳಲ್ಲಿ ಮುಚ್ಚಳವನ್ನು ಮುಚ್ಚಿ ಭದ್ರವಾಗಿಡಿ.
* ಉಳಿದ ಆಹಾರ ಪದಾರ್ಥಗಳನ್ನು ಟೇಬಲ್ ಮೇಲೆಯೇ ಉಳಿಸಬೇಡಿ. ಏಕೆಂದರೆ ಅದಕ್ಕಾಗಿ ಇಲಿಗಳು ನಿಮ್ಮ ಮೇಜಿನ ಮೇಲೂ ದಾಳಿ ಮಾಡಲು ಸಮರ್ಥ.
* ಡಸ್ಟ್‌ಬಿನ್ ಕೂಡಾ ಭದ್ರವಾಗಿ ಮಚ್ಚಿರಿ. ಏಕೆಂದರೆ ತೆರೆದ ಡಸ್ಟ್‌ಬಿನ್‌ನ ವಾಸನೆ ಇಲಿಗಳನ್ನು ಆಕರ್ಷಿಸುತ್ತದೆ.
* ಅಡುಗೆ ಮನೆಯ ಕೌಂಟರ್, ಸಿಂಕ್, ಟೇಬಲ್ ಶುಭ್ರವಾಗಿಡಿ. ರಾತ್ರಿ ಮಲಗುವ ವೇಳೆ ಸಿಂಕ್‌ನಲ್ಲಿ ಪಾತ್ರೆಗಳು ರಾಶಿ ಬಿದ್ದಿರುವುದು ಬೇಡ ಅಥವಾ ಸ್ಟೌ ಮೇಲೆ ಪಾತ್ರೆಗಳಲ್ಲಿ ಆಹಾರ ಇಡಬೇಡಿ.
5. ಸಾಧ್ಯವಾದರೆ ನೈಸರ್ಗಿಕವಾಗಿ ಇಲಿ ನಿಯಂತ್ರಣಕ್ಕೆ ಬೆಕ್ಕು ಅಥವಾ ನಾಯಿ ಸಾಕಿ.
6. ಇಲ್ಲದಿದ್ದರೆ ಇಲಿ ಬೋನು ತಂದಿಟ್ಟುಕೊಳ್ಳಿ.