ರಾತ್ರಿ ಸುಖನಿದ್ದೆಗೆ ಇಲ್ಲಿವೆ 10 ಸುಲಭ ಸೂತ್ರಗಳು

Update: 2016-09-27 10:44 GMT

ಮಕ್ಕಳು ನಗುಮುಖದ ಮೂಲಕ ಬೆಳಗಿನ ಜಾವ ಏಳುವುದನ್ನು ನೋಡಿದ್ದೀರಾ? ಅವರೇನೂ ನಗುವುದಿಲ್ಲ. ಆದರೆ ಒಳ್ಳೇ ರಾತ್ರಿಯ ನಿದ್ದೆಯ ನಂತರ ಖುಷಿಯಾಗಿ ನಗುಮೊಗದಿಂದ ಏಳುತ್ತಾರೆ. ನೀವೂ ಮಕ್ಕಳಂತೆ ಖುಷಿಯಾಗಿ ಏಳಬಹುದು. ಇಲ್ಲಿದೆ 10 ಸಲಹೆಗಳು.

1. ಬೆಳಕಿಲ್ಲ, ಭಯವೂ ಬೇಡ

ಬಹಳಷ್ಟು ಮಂದಿಗೆ ಮಲಗುವಾಗ ಕೋಣೆಯಲ್ಲಿ ಸ್ವಲ್ಪ ಬೆಳಕಿರಬೇಕು. ಮಧ್ಯರಾತ್ರಿಯಲ್ಲಿ ಏಳಬೇಕಾದಾಗ ಸುತ್ತಮುತ್ತಲು ಚೆನ್ನಾಗಿ ಕಾಣಬೇಕು ಎನ್ನುವುದು ಅವರ ಉದ್ದೇಶ. ಆದರೆ ಕತ್ತಲೆ ಇರುವ ಕೋಣೆಗಳು ನಿಮ್ಮ ದೇಹದಲ್ಲಿ ನಿದ್ದೆಗೆ ಕಾಣವಾಗುವ ಮೆಲಟನಿನ್ ಸಂಗ್ರಹವನ್ನು ಹೆಚ್ಚಿಸಿ ಕೋಣೆಯನ್ನು ಇನ್ನಷ್ಟು ಕತ್ತಲಾಗಿಸುತ್ತದೆ ಮತ್ತು ಬೆಳಕಿದ್ದರೆ ಈ ಹಾರ್ಮೋನ್ ಪ್ರಮಾಣ ಕಡಿಮೆಯಾಗಿಸುತ್ತದೆ. ಕೋಣೆಯಲ್ಲಿ ಮಂದ ಬೆಳಕನ್ನು ಹಾಕುವ ಬದಲಾಗಿ ಪಕ್ಕದ ಕೋಣೆಯಲ್ಲಿ ಬೆಳಕು ಹಾಕಿ ಅಥವಾ ಕೈ ಪಕ್ಕ ಫ್ಲಾಷ್ ಲೈಟ್ ಇಟ್ಟುಕೊಳ್ಳಿ. ಹೊರಗಿನ ಬೆಳಕನ್ನು ಒಳ ಬಾರದಂತೆ ತಡೆಯಲು ದಪ್ಪ ಕರ್ಟೈನ್ ಬಳಸಿ.

2. ಲಯವಿರಲಿ

ಒಂದು ರೀತಿಯ ನಿದ್ದೆಯ ಪ್ಯಾಟರ್ನ್ ಇರುವುದು ಉತ್ತಮ ನಿದ್ದೆ ಮಾಡುವುದಕ್ಕೆ ಅಗತ್ಯ. ನಿದ್ದೆಗೆ ಒಂದು ಸಮಯ ಹಾಕಿಕೊಂಡು, ನಿದ್ದೆ ಬಾರದೇ ಇದ್ದರೂ ಮಲಗಿ. ಏಳುವುದಕ್ಕೂ ಇದು ಅನ್ವಯಿಸುತ್ತದೆ. ವಯಸ್ಕರಾಗಿ ಕನಿಷ್ಠ ಏಳು ಗಂಟೆಗಳ ನಿದ್ದೆ ನಿತ್ಯವೂ ಬೇಕು. ಹೀಗಾಗಿ ರಾತ್ರಿ 10ಕ್ಕೆ ಮಲಗಿ ಬೆಳಗ್ಗೆ 6ಕ್ಕೆ ಏಳಬೇಕು. ಮೊದಲ ಕೆಲ ದಿನ ಸ್ವಲ್ಪ ಬೇಗನೇ ಮಲಗಿ ದೇಹವನ್ನು ಸಮಯಕ್ಕೆ ಹೊಂದಿಸಿಕೊಳ್ಳಬಹುದು.

3. ಸಣ್ಣ ವಿಶ್ರಾಂತಿ ಸಾಕು

ವಾರಾಂತ್ಯಗಳಿಗೂ ನಿದ್ದೆಯ ಸಮಯ ಅನ್ವಯಿಸುತ್ತದೆ. ಸಂಶೋಧನೆ ಪ್ರಕಾರ ಬೇಗನೇ ಅಥವಾ ತಡವಾಗಿ ದಿನಕ್ಕೆ ಎರಡು ಬಾರಿ ಮಲಗಿದರೂ ನಿಮ್ಮ ನಿದ್ದೆಯ ರೀತಿ ಬದಲಾಗುತ್ತದೆ. ಸುಸ್ತಾಗಿ ಇಡೀ ವಾರ ಇದೇ ಅನುಭವವಿರುತ್ತದೆ. ನಿದ್ದೆ ಬರುವಂತಿದ್ದರೆ ಮಧ್ಯಾಹ್ನ ಸಣ್ಣ ವಿಶ್ರಾಂತಿ ತೆಗೆದುಕೊಳ್ಳಬಹುದು. ಮಲಗುವ ಸಮಯಕ್ಕಿಂತ 5-6 ಗಂಟೆ ಮೊದಲೇ ಎದ್ದುಬಿಡಿ.

4. ನಿತ್ಯವೂ ವ್ಯಾಯಾಮ

ನಿತ್ಯವೂ ವ್ಯಾಯಾಮ ಮಾಡುವುದು ಒತ್ತಡವನ್ನು ನಿವಾರಿಸಿ ಸ್ನಾಯುಗಳು ರಿಲ್ಯಾಕ್ಸ್ ಆಗಲು ನೆರವಾಗುತ್ತದೆ. ಇದರಿಂದ ಒಳ್ಳೇ ನಿದ್ದೆಯಾಗುತ್ತದೆ. ಆದರೆ ವ್ಯಾಯಾಮವನ್ನು ನಿದ್ದೆಗಿಂತ 3-4 ಗಂಟೆ ಮೊದಲೇ ಮಾಡಬೇಕು. ಬೆಳಗಿನ ಜಾವ ವ್ಯಾಯಾಮ ಮಾಡುವುದೂ ಇದೇ ಕಾರಣಕ್ಕೆ ಉತ್ತಮ.

5. ಫೋನ್‌ಗಳು ಅಥವಾ ಲ್ಯಾಪ್‌ಟಾಪ್‌ಗಳ ಜೊತೆ ನಿದ್ದೆ ಬೇಡ

ಫೋನ್ ಸ್ಕ್ರೀನ್‌ಗಳು, ತಡರಾತ್ರಿ ಟಿವಿ ನೋಡುವುದು ಅಥವಾ ಲ್ಯಾಪ್‌ಟಾಪ್‌ಗಳು ನಿಮ್ಮನ್ನು ತಡರಾತ್ರಿಯವರೆಗೆ ಎದ್ದಿರುವಂತೆ ಮಾಡುತ್ತದೆ. ನಿಮ್ಮ ಫೋನ್ ಮತ್ತು ಇತರ ಡಿವೈಸ್‌ಗಳನ್ನು ಕನಿಷ್ಠ 30 ನಿಮಿಷಗಳ ಮೊದಲೇ ತೆಗೆದಿಡಿ. ಫೋನ್ ನೊಟಿಫಿಕೇಶನ್ ನಿದ್ದೆಯಿಂದ ನಿಮ್ಮನ್ನು ಎಚ್ಚರಿಸದಂತೆ ಗಮನಹರಿಸಿ.

6. ನಿದ್ದೆಗೆ ನೆರವಾಗುವ ಫೋನ್ ಆಪ್‌ಗಳು

ಫೋನಿನಲ್ಲಿರುವ ಎಲ್ಲವೂ ಕೆಟ್ಟದಲ್ಲ. ನಿದ್ದೆಗೆ ನೆರವಾಗುವ ಸಂಗೀತ ಅಥವಾ ಧ್ವನಿಗಳನ್ನು ಡೌನ್‌ಲೋಡ್ ಮಾಡಬಹುದು. ಕೆಲವು ನಿದ್ದೆಗೆಂದೇ ಮಾಡಿರುವ ಧ್ವನಿಯನ್ನು ಬಳಸಬಹುದು.

7. ಮಲಗುವ ಮೊದಲು ಕಾರ್ಬೋಹೈಡ್ರೇಟ್ ಅಥವಾ ಕೆಫೈನ್ ಸೇವಿಸಬೇಡಿ

ಬಹಳಷ್ಟು ದಕ್ಷಿಣ ಭಾರತೀಯರು ರಾತ್ರಿ ಅನ್ನ ಅಥವಾ ಗೋಧಿ ತಿನ್ನುತ್ತಾರೆ. ಆದರೆ ಮಲಗುವ ಮೊದಲು ಇದರ ಸೇವನೆ ನಿದ್ದೆಗೆ ಸಮಸ್ಯೆ ಒಡ್ಡುತ್ತದೆ. ಕಾರ್ಬೋಹೈಡ್ರೇಟ್ ತಕ್ಷಣವೇ ನಿದ್ದೆ ಬರುವಂತೆ ಮಾಡಿದರೂ ರಾತ್ರಿಯಿಡೀ ವಿಶ್ರಾಂತಿಯಿಲ್ಲದ ನಿದ್ದೆ ತರುತ್ತದೆ. ಕಾಫಿ ಮತ್ತು ಇತರ ಕೆಫೈನ್ ಮೂಲಗಳಾದ ಎನರ್ಜಿ ಪಾನೀಯಗಳು ನಿದ್ದೆಗೆ ಸಮಸ್ಯೆ ಒಡ್ಡುತ್ತವೆ.

8. ಒಂದು ಗ್ಲಾಸ್ ಬಿಸಿ ಹಾಲು

 ಮಲಗುವ ಮೊದಲು ಹಾಲು ಕುಡಿಯುವುದು ಉತ್ತಮ ನಿದ್ದೆಗೆ ಅಗತ್ಯ. ಅದು ನಮ್ಮ ಮಾನಸಿಕ ನಂಬಿಕೆಯೋ ಅಥವಾ ವಿಜ್ಞಾನವೋ, ಒಟ್ಟಾರೆ ಬಿಸಿ ಹಾಲು ನಿದ್ದೆಗೆ ಸಹಕಾರಿ. ಹಾಲು ಸ್ವಲ್ಪ ಬಿಸಿಯಾಗಿರಲಿ, ಬಹಳ ಬಿಸಿ ಬೇಡ. ಸಾಧ್ಯವಾದಲ್ಲಿ ಸ್ವಲ್ಪ ಸಕ್ಕರೆ ಹಾಕಬಹುದು.

9. ಮಲಗುವಾಗ ಸ್ನಾನ

ಮಲಗುವ ಕೆಲವು ನಿಮಿಷಗಳ ಮೊದಲು ಸ್ನಾನ ಮಾಡಿದರೆ ನಿಮ್ಮ ಮನಸ್ಸು ಮತ್ತು ದೇಹಗಳೆರಡೂ ರಿಲ್ಯಾಕ್ಸ್ ಆಗಿ ಚೆನ್ನಾಗಿ ನಿದ್ದೆ ಬರುತ್ತದೆ. ಸ್ವಚ್ಛವಾಗಿರುವುದು ಮತ್ತು ಉತ್ತಮ ನಿದ್ದೆ ಬರುವ ನಡುವೆ ಸಂಬಂಧವಿದೆ. ಇದು ಮಕ್ಕಳಿಗೆ ಮಾತ್ರವಲ್ಲ, ನಿಮಗೂ ಅನ್ವಯಿಸುತ್ತದೆ.

10. ಸೂರ್ಯ ನಿಮ್ಮನ್ನು ಎಬ್ಬಿಸಲಿ

ಹಿಂದೆ ಹೇಳಿದಂತೆ ಬೆಳಕು, ಮುಖ್ಯವಾಗಿ ಸೂರ್ಯನ ಬೆಳಕು ಮೆಲಟನಿನ್ ಹಾರ್ಮೋನ್ ಕಡಿಮೆ ಮಾಡುತ್ತದೆ ಮತ್ತು ನಿಮ್ಮನ್ನು ಎಬ್ಬಿಸುತ್ತದೆ. ನಿಮ್ಮ ಬೆಳಗಿನ ಕಾಫಿ ಅಥವಾ ಚಹಾವನ್ನು ಬಾಲ್ಕನಿಯಲ್ಲಿ ಕುಡಿದರೆ ಅಥವಾ ಕಿಟಕಿಗಳ ಬಳಿ ಹೊರಗೆ ನೋಡುತ್ತಾ ಕುಡಿದರೆ ಉತ್ತಮ. ಕನಿಷ್ಟ 15 ನಿಮಿಷ ಸೂರ್ಯನ ಬೆಳಕಿಗೆ ಮೈಯೊಡ್ಡಿ. ಸೂರ್ಯ ನಿಮ್ಮಲ್ಲಿನ ಜಡತ್ವವನ್ನು ಹೊರಗೋಡಿಸಲಿ. ಇಂತಹ ಬೆಳಗು ಎಲ್ಲರಿಗೂ ಉತ್ಸಾಹಪೂರ್ಣವಾಗಿರುತ್ತದೆ.

ಕೃಪೆ: http://gulfnews.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News