×
Ad

ಈ ಅಣಬೆ ಬೆಳೆದಿದ್ದು ಎಲ್ಲಿ ಎಂದು ಹೇಳಿ ನೋಡೋಣ ..

Update: 2016-09-30 15:42 IST

ಭಾರತೀಯ ರೈಲ್ವೇ ನಿರಂತರವಾಗಿ ನವೀಕರಣಗೊಳಿಸಿ ಉತ್ತಮ ಒಳಾಂಗಣವನ್ನು ನೀಡುವ ಭರವಸೆ ಕೊಡುತ್ತಾ ಇರುತ್ತದೆ. ಆದರೆ ರೈಲಿನಲ್ಲಿ ನಿತ್ಯವೂ ಪ್ರಯಾಣ ಮಾಡುವವರಿಗೆ ಇಂತಹ ಅಭಿವೃದ್ಧಿ ಕಾಣುವುದೇ ಇಲ್ಲ.

ಈಗ ಭಾರತೀಯ ರೈಲ್ವೇ ಹಿಂದೆಂದಿಗಿಂತಲೂ ಉತ್ತಮವಾಗಿದೆ ಎಂದು ನಾವು ಯೋಚಿಸುತ್ತಿರುವಾಗಲೇ ಯಾರೋ ಒಬ್ಬರು ಟ್ವಿಟರ್‌ನಲ್ಲಿ ಹಾಕಿದ ಫೋಟೋ ಬಹಳ ವೈರಲ್ ಆಗಿದೆ. ರೈಲಿನ ಒಳಗೆ ಆಕಸ್ಮಿಕವಾಗಿ ಅಣಬೆಗಳು ಬೆಳೆದ ಫೋಟೋವನ್ನು ಟ್ವಿಟರ್‌ಗೆ ಹಾಕಲಾಗಿದೆ.

ಭಾರತೀಯ ರೈಲ್ವೇ ಅತೀ ದೊಡ್ಡ ಕಂಪೆನಿಯಾಗಿದ್ದು ಅದನ್ನು ಸ್ವಚ್ಛವಾಗಿಡುವುದು ಮತ್ತು ಅಭಿವೃದ್ಧಿ ಸುಲಭದ ಮಾತಲ್ಲದೆ ಇದ್ದರೂ, ನೈರ್ಮಲ್ಯವನ್ನು ಕಾಪಾಡುವುದರಿಂದ ಸಾಕಷ್ಟು ರೋಗಗಳಿಂದ ತಪ್ಪಿಸಿಕೊಳ್ಳಬಹುದು.

ಆತ ಈ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕಿದ ಮೇಲೆ ಜನರು ರೈಲಿನ ನಂಬರನ್ನು ಕೇಳಿದ್ದಲ್ಲದೆ ಹಲವರು ಹಾಸ್ಯ ಚಟಾಕಿಗಳನ್ನೂ ಬಿಟ್ಟಿದ್ದಾರೆ.

ಅಭಿಷೇಕ್ ಗುರೇಜ್, “ಎಷ್ಟೊಂದು ಮಶ್ ರೂಮ್ ಎಲ್ಲರಿಗೂ ಇದೆ!” ಎಂದಿದ್ದಾರೆ. ಪ್ರಿನ್ಸ್ ಝುಕೋ, “ರೈಲಿನಲ್ಲಿ ಆಹಾರ ಸಿಗದೆ ಹಸಿವೆಯಿಂದ ದಿಕ್ಕು ತೋಚದಾಗ ಅವುಗಳ ಅಗತ್ಯ ಕಾಣಲಿದೆ. ನಿಮ್ಮ ಮತ್ತು ನರಮಾಂಸ ತಿನ್ನುವವರ ನಡುವಿನ ವಸ್ತು ಇದು” ಎಂದು ತಮಾಷೆ ಮಾಡಿದ್ದಾರೆ. ಸ್ಟುಪಿಡ್ ಕಾಮನ್ ಮ್ಯಾನ್ ಎಂದು ಹೆಸರಿಟ್ಟುಕೊಂಡಿರುವ ವ್ಯಕ್ತಿಯೊಬ್ಬರು “ಜೈವಿಕ ಪ್ರವಾಸ, ನಿಮಗೆ ಗೊತ್ತಿಲ್ಲವೆ!?” ಎಂದು ಚಟಾಕಿಯಾಡಿದ್ದಾರೆ.

ಆದರೆ ಈ ಫೋಟೋ ಹಾಕಿದವರು ಹೆಚ್ಚಿನ ವಿವರಗಳನ್ನು ತಿಳಿಸಿಲ್ಲ.

ಕೃಪೆ: http://www.indiatimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News