×
Ad

19 ವರ್ಷಗಳ ಬಳಿಕ ಅರುಂಧತಿ ವಿರಚಿತ ಎರಡನೆ ಪುಸ್ತಕ

Update: 2016-10-03 23:39 IST

ಹೊಸದಿಲ್ಲಿ,ಅ.3: ಖ್ಯಾತ ಲೇಖಕಿ ಅರುಂಧತಿ ರಾಯ್ ಅವರು ತನ್ನ ಬೂಕರ್ ಪ್ರಶಸ್ತಿ ಕಾದಂಬರಿ ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಪ್ರಕಟಗೊಂಡ 19 ವರ್ಷಗಳ ಬಳಿಕ ಕೊನೆಗೂ ತನ್ನ ಎರಡನೆ ಕಾದಂಬರಿಯ ಬಿಡುಗಡೆಯನ್ನು ಪ್ರಕಟಿಸಿದ್ದಾರೆ. 2017, ಜೂನ್‌ನಲ್ಲಿ ಅವರ ನೂತನ ಕೃತಿಯು ಓದುಗರ ಕೈ ಸೇರಲಿದೆ.

ಹ್ಯಾಮಿಷ್ ಹ್ಯಾಮಿಲ್ಟನ್ ಯುಕೆ ಮತ್ತು ಪೆಂಗ್ವಿನ್ ಇಂಡಿಯಾ ಪ್ರಕಾಶನದಲ್ಲಿ ಈ ನೂತನ ಕೃತಿ ‘ದಿ ಮಿನಿಸ್ಟ್ರಿ ಆಫ್ ಅಟ್‌ಮೋಸ್ಟ್ ಹ್ಯಾಪಿನೆಸ್’ ಹೊರಬರಲಿದೆ.
‘ದಿ ಮಿನಿಸ್ಟ್ರಿ ಆಫ್ ಅಟ್‌ಮೋಸ್ಟ್ ಹ್ಯಾಪಿನೆಸ್’ ನಲ್ಲಿನ ಹುಚ್ಚು ಮನಸ್ಸುಗಳು ಹೊರಜಗತ್ತಿನಲ್ಲಿ ಕಾಲಿರಿಸಲು ಮಾರ್ಗವನ್ನು ಕಂಡುಕೊಂಡಿವೆ. ನನಗೆ ಪ್ರಕಾಶಕರು ದೊರಕಿದ್ದಾರೆ ಎಂದು ರಾಯ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News