×
Ad

ಕಾಶ್ಮೀರದಲ್ಲಿ ಇಂಗ್ಲಿಷ್ ಪತ್ರಿಕೆಗೆ ನಿಷೇಧ

Update: 2016-10-03 23:40 IST

ಶ್ರೀನಗರ, ಅ.3: ಜಮ್ಮು-ಕಾಶ್ಮೀರದ ಪ್ರಮುಖ ಆಂಗ್ಲಭಾಷೆಯ ದಿನಪತ್ರಿಕೆ ಕಶ್ಮೀರ್ ರೀಡರ್ ಪ್ರಕಟಿಸದಂತೆ ಸರಕಾರ ನಿಷೇಧಿಸಿದೆ. ಅಕ್ರಮವನ್ನು ಪ್ರೇರೇಪಿಸುವಂತಹದ್ದು ಮತ್ತು ಶಾಂತಿಯನ್ನು ಕೆಡಿಸುವಂತಹ ವರದಿಗಳನ್ನು ಪತ್ರಿಕೆ ಪ್ರಕಟಿಸುತ್ತಿದೆ ಎಂದು ಆರೋಪಿಸಿ ಸರಕಾರ ಈ ಕ್ರಮವನ್ನು ಕೈಗೊಂಡಿದೆ. ಪತ್ರಿಕೆಯನ್ನು ಪ್ರಕಟಿಸಬಾರದು ಎಂದು ಶ್ರೀನಗರ್ ಡೆಪ್ಯುಟಿ ಕಮಿಶನರ್ ಡಾ. ಫಾರುಕ್ ಅಹ್ಮದ್ ಲೋನ್ ಪ್ರಿಂಟರ್, ಪಬ್ಲಿಶರ್ ಮತ್ತು ಮಾಲಕರಿಗೆ ನೋಟಿಸ್ ಕಳುಹಿಸಿದ್ದಾರೆಂದು ವರದಿಯಾಗಿದೆ.

2010ರಲ್ಲಿ ಕಶ್ಮೀರ್ ರೀಡರ್ ಪ್ರಕಟವಾಗಲು ಆರಂಭವಾಗಿತ್ತು. ಶ್ರೀನಗರದಿಂದ ಪ್ರಕಟಗೊಳ್ಳುವ ಅತ್ಯಂತ ಹೆಚ್ಚು ಪ್ರಸಾರವಿರುವ ಐದು ಪತ್ರಿಕೆಗಳಲ್ಲಿ ರೀಡರ್ ಕೂಡಾ ಒಂದಾಗಿದೆ. ಸರಕಾರದ ಕ್ರಮವನ್ನು ಪತ್ರಿಕೆಯ ಮಾಲಕ ಮತ್ತು ಸಂಪಾದಕರಾದ ಹಾಜಿ ಹಯಾತ್ ಮುಹಮ್ಮದ್ ಭಟ್ ಖಂಡಿಸಿದ್ದಾರೆ. ಆರೋಪ ನಿರಾಧಾರವಾದುದು. ನಾವು ವಸ್ತುನಿಷ್ಠ ಸತ್ಯಸಂಧವಾದ ವರದಿಗಳನ್ನು ಮಾತ್ರ ಪ್ರಕಟಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News