×
Ad

ಕೇರಳದ ಶಂಕಿತ ಐಸಿಸ್ ಉಗ್ರ ತಮಿಳುನಾಡಿನಲ್ಲಿ ಸೆರೆ

Update: 2016-10-03 23:42 IST

ತಿರುನೆಲ್ವೇಲಿ(ತ.ನಾ.), ಅ.3: ಕೇರಳದ ಐಸಿಸ್ ಉಗ್ರನೊಬ್ಬನೊಂದಿಗೆ ಸಂಬಂಧವಿರುವ ಶಂಕೆಯ ಮೇಲೆ 31ರ ಹರೆಯದ ವ್ಯಕ್ತಿಯೊಬ್ಬನನ್ನು ತಮಿಳುನಾಡಿನ ತಿರುನೆಲ್ವೇಲಿಯಿಂದ ರಾಷ್ಟ್ರೀಯ ತನಿಖೆ ಸಂಸ್ಥೆಯು(ಎನ್‌ಐಎ) ಸೋಮವಾರ ಬಂಧಿಸಿದೆ.

ಅದು ರವಿವಾರ ಕೇರಳದ ಬೆಟ್ಟವೊಂದರ ಮೇಲಿನ ಪ್ರಾರ್ಥನಾ ಮಂದಿರದಲ್ಲಿ ಸಭೆ ನಡೆಸುತ್ತಿದ್ದ 6 ಮಂದಿಯನ್ನು ಬಂಧಿಸಿತ್ತು. ಅವರು ಪ್ರಮುಖ ವ್ಯಕ್ತಿಗಳು ಹಾಗೂ ಸಾರ್ವಜನಿಕ ಸ್ಥಳಗಳ ಮೇಲೆ ದಾಳಿ ನಡೆಸುವ ಪಿತೂರಿ ರೂಪಿಸುತ್ತಿದ್ದರೆಂದು ಎನ್‌ಐಎ ಆರೋಪಿಸಿತ್ತು.
ಸುಹಾನಿ ಎಂಬ ಹೆಸರಿನ ಈ ವ್ಯಕ್ತಿ ಕೇರಳದ ತೋಡಪುಝದಲ್ಲಿ 20ಕ್ಕೂ ಹೆಚ್ಚು ವರ್ಷಗಳಿಂದ ನೆಲೆಸಿದ್ದನು. ಆತ ರಾಜ್ಯದ ಐಸಿಸ್ ಸಂಪರ್ಕವಿರುವ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿದ್ದನು. ಎನ್‌ಐಎ, ಕೇರಳದಲ್ಲಿ ಸುಹಾನಿಯ ಸಂಪರ್ಕವಿದ್ದ ಕೆಲವು ಮಂದಿ ಐಸಿಸ್ ಸಹವರ್ತಿಗಳನ್ನು ಬಂಧಿಸಿದ ಬಳಿಕ ಆತ ತೋಡಪುಝದಿಂದ ಪಲಾಯನ ಮಾಡಿ ತಿರುನೆಲ್ವೇಲಿಗೆ ಬಂದಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಅಂಗಡಿಯೊಂದರಲ್ಲಿ ಕೆಲಸ ಮಾಡು ತ್ತಿದ್ದ ಸುಹಾನಿಯನ್ನು ಖಡೇರ್‌ಮೊಯ್ದೀನ್ ಪಲ್ಲಿವಾಸಲ್ ಸ್ಟ್ರೀಟ್‌ನ ಆತನ ಮನೆಯಿಂದ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಕೇರಳಕ್ಕೆ ತರ ಲಾಗಿದೆಯೆಂದು ಪೊಲೀಸರು ಹೇಳಿದ್ದಾರೆ.
ಐಸಿಸ್‌ನೊಂದಿಗೆ ಸಂಬಂಧ ವಿದ್ದು ದಕ್ಕಾಗಿ ರವಿವಾರ ಬಂಧಿಸಲಾಗಿದ್ದ 6 ಮಂದಿ, ಸುಹಾನಿ ತಮ್ಮ ಸಹವರ್ತಿ ಯಾಗಿದ್ದಾನೆ. ಎನ್‌ಐಎ ತಮ್ಮನ್ನು ಬಂಧಿಸಿದ ಬಳಿಕ ಆತ ತಮಿಳು ನಾಡಿಗೆ ಪರಾರಿಯಾಗಿದ್ದಾನೆಂದು ತಪ್ಪೊಪ್ಪಿಕೊಂಡಿದ್ದರು.
 ಆ ಆರು ಮಂದಿ ದೀಪಾವಳಿಯ ವೇಳೆ ದಕ್ಷಿಣ ಭಾರತದಲ್ಲಿ ಭಯೋ ತ್ಪಾದಕ ದಾಳಿಗಳನ್ನು ನಡೆಸಲು ಪ್ರಮುಖ ವ್ಯಕ್ತಿಗಳು, ಸಾರ್ವಜನಿಕ ಸ್ಥಳಗಳು ಸ್ಫೋಟಕ ಹಾಗೂ ಇತರ ವಸ್ತುಗಳ ಸಂಗ್ರಹ ಇತ್ಯಾದಿಗಳ ಕುರಿತಾಗಿ ಬೆಟ್ಟದ ಮೇಲಿನ ಪ್ರಾರ್ಥನಾ ಮಂದಿರದಲ್ಲಿ ಸಂಚು ರೂಪಿಸುತ್ತಿದ್ದರು. 24ರಿಂದ 30ರ ವಯೋಮಾನದ ಅವರನ್ನು ಹಾಗೂ ಅವರ ನಿವಾಸಗಳನ್ನು ಶೋಧಿಸಿದಾಗ ಇಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಆಕ್ಷೇಪಾರ್ಹ ವಸ್ತುಗಳು ಪತ್ತೆ ಯಾಗಿವೆಯೆಂದು ಎನ್‌ಐಎ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News