×
Ad

ಪಾಕಿಸ್ತಾನಿ ಅತಿಥಿಗಳ ಕ್ಷೇಮಕ್ಕೆ ಸರ್ವ ವ್ಯವಸ್ಥೆ

Update: 2016-10-03 23:43 IST

 ಹೊಸದಿಲ್ಲಿ,ಅ.3: ಉರಿ ಉಗ್ರ ದಾಳಿಯ ನಂತರ ಭಾರತ-ಪಾಕ್ ಸಂಬಂಧಗಳು ಹದಗೆಟ್ಟಿದ್ದರೂ ಅತಿಥಿ ದೇವೋ ಭವ ಸಿದ್ಧಾಂತಕ್ಕೆ ತಕ್ಕಂತೆ ಚಂಡೀಗಡದಲ್ಲಿ ನಡೆಯುವ ಗ್ಲೋಬಲ್ ಯೂತ್ ಪೀಸ್ ಫೆಸ್ಟ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ 20 ಮಂದಿ ಪ್ರತಿನಿಧಿಗಳ ತಂಡದ ಯೋಗಕ್ಷೇಮವನ್ನು ವಿಚಾರಿಸಿ ಅವರ ಕ್ಷೇಮಕ್ಕೆ ಸರ್ವ ಕ್ರಮಗಳನ್ನೂ ಕೈಗೊಳ್ಳುವ ಮೂಲಕ ವಿದೇಶಾಂಗ ಸಚಿವೆ ಸುಶ್ಮ್ಮಾ ಸ್ವರಾಜ್ ಭಾರತೀಯತೆ ಮೆರೆದಿದ್ದಾರೆ.

  ಪಾಕಿಸ್ತಾನದ 20 ಮಂದಿಯ ತಂಡದಲ್ಲಿ 19 ಮಂದಿ ಯುವತಿಯರೇ ಇದ್ದು ಈ ಪೀಸ್ ಫೆಸ್ಟ್ ಸಂಘಟಕರಾಗಿರುವ ಪ್ರಮೋದ್ ಶರ್ಮ ಅವರನ್ನು ಸಂಪರ್ಕಿಸಿದ ಸುಶ್ಮಾ ಪಾಕ್ ತಂಡಕ್ಕೆ ಎಲ್ಲಾ ಸೌಕರ್ಯಗಳಿವೆ ಎಂಬುದನ್ನು ಮನದಟ್ಟು ಮಾಡಿಕೊಂಡರಲ್ಲದೆ, ಪಾಕ್ ಪ್ರತಿನಿಧಿಗಳ ತಂಡದ ಮುಖ್ಯಸ್ಥೆ ಆಲಿಯಾ ಹೈದರ್ ಅವರನ್ನು ಸಂಪರ್ಕಿಸಿ ಅವರ ಯೋಗಕ್ಷೇಮ ಹಾಗೂ ಅವರ ತಂಡದ ಸದಸ್ಯರ ಯೋಗಕ್ಷೇಮ ವಿಚಾರಿಸಿದರು. ಆಲಿಯಾ ಭಾರತ-ಪಾಕಿಸ್ತಾನ ಮಿತ್ರತ್ವಕ್ಕೆ ಹೋರಾಡುವ ಆಗಾಝ್-ಎ-ದೋಸ್ತಿ ಎಂಬ ಸಂಘಟನೆಯ ಸಂಸ್ಥಾಪಕಿಯೂ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News