×
Ad

ಯಾದವ ಸೋದರರಿಗೆ 25 ವರ್ಷ ಜೈಲುಶಿಕ್ಷೆ

Update: 2016-10-03 23:44 IST

ಹೊಸದಿಲ್ಲಿ, ಅ.3: 2002ರ ನಿತೀಶ್ ಕಟಾರಿಯಾ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ಪ್ರಮುಖ ದೋಷಿಗಳಾದ ವಿಕಾಸ್ ಯಾದವ್ ಮತ್ತು ಆತನ ಸೋದರ ಸಂಬಂಧಿ ವಿಶಾಲ್ ಯಾದವ್ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ತಲಾ 25 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಸಿ.ನಾಗಪ್ಪನ್ ಅವರನ್ನೊಳಗೊಂಡ ಪೀಠವು ಇನ್ನೋರ್ವ ದೋಷಿ ಸುಖದೇವ್ ಪೆಹಲ್ವಾನ್‌ಗೆ 20 ವರ್ಷಗಳ ಜೈಲುಶಿಕ್ಷೆಯನ್ನು ಪ್ರಕಟಿಸಿತು.
ಕೊಲೆ ಮತ್ತು ಸಾಕ್ಷನಾಶದ ಆರೋಪದಲ್ಲಿ ವಿಕಾಸ್ ಮತ್ತು ವಿಶಾಲ್‌ಗೆ 25 ವರ್ಷ ಮತ್ತು ಐದು ವರ್ಷಗಳ ಪ್ರತ್ಯೇಕ ಜೈಲುಶಿಕ್ಷೆಗಳನ್ನು ವಿಧಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ತೀರ್ಪನ್ನು ಪರಿಷ್ಕರಿಸಿದ ಪೀಠವು ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಆದೇಶಿಸಿತು.
ಇದೇ ವೇಳೆ ಪೆಹಲ್ವಾನ್‌ಗೆ ವಿಧಿಸಲಾಗಿದ್ದ 25 ವರ್ಷಗಳ ಜೈಲುಶಿಕ್ಷೆಯನ್ನು 20 ವರ್ಷಗಳಿಗೆ ತಗ್ಗಿಸಿತು.
ಕಟಾರಾ ‘ಗೌರವ ಹತ್ಯೆ’ಗಾಗಿ ಯಾದವ್ ಸೋದರರಿಗೆ ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಉಚ್ಚ ನ್ಯಾಯಾಲಯವು 25 ವರ್ಷಗಳಿಗೆ ಹೆಚ್ಚಿಸಿತ್ತು. ಇದನ್ನು ಪ್ರಶ್ನಿಸಿ ಯಾದವ ಸೋದರರು ಮೇಲ್ಮನವಿ ಸಲ್ಲಿಸಿದ್ದರು.
ಯಾದವ ಸೋದರರು ಮತ್ತು ಪೆಹಲ್ವಾನ್ ತಪ್ಪಿತಸ್ಥರೆಂಬ ಕೆಳ ನ್ಯಾಯಾಲಯದ ತೀರ್ಪನ್ನು 2015, ಆ.17ರಂದು ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯವು, ಈ ದೇಶದಲ್ಲಿ ‘ಅಪರಾಧಿಗಳು ಮಾತ್ರ ನ್ಯಾಯಕ್ಕಾಗಿ ಕೂಗುತ್ತಿದ್ದಾರೆ’ ಎಂದು ಬಣ್ಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News