ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲೇ ದಾಖಲೆ ಬಿಡುಗಡೆಗೊಳಿಸುವೆ: ಜೂಲಿಯನ್ ಅಸಾಂಜ್

Update: 2016-10-05 05:15 GMT

 ಬರ್ಲಿನ್, ಅ.5: ನವೆಂಬರ್ ಎಂಟಕ್ಕೆ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗಿಂತ ಮೊದಲೇ ಆಯುಧ ವ್ಯಾಪಾರ, ಗೂಗಲ್‌ನ ಸರ್ವಯಲನ್ಸ್, ಅಮೆರಿಕ ಚುನಾವಣೆ ಮುಂತಾದವುಗಳಿಗೆ ಸಂಬಂಧಿಸಿದ ನಿರ್ಣಯ ವಿವರಗಳನ್ನು ಬಹಿರಂಗಪಡಿಸುವೆ ಎಂದು ವೀಕಿಲೀಕ್ಸ್‌ನ ಸಂಸ್ಥಾಪಕ ಜೂಲಿಯನ್ ಅಸಾಂಜ್ ಹೇಳಿದ್ದಾರೆಂದು ವರದಿಯಾಗಿದೆ.

ವೀಕಿಲೀಕ್ಸ್ ಸ್ಥಾಪನೆಗೊಂಡು ಹತ್ತನೆ ವರ್ಷ ಆಚರಿಸುವ ಭಾಗವಾಗಿ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತಾ ಈ ವಿಷಯವನ್ನು ಹೇಳಿದ್ದಾರೆ.

ಮುಂದಿನ ಹತ್ತು ವಾರಗಳಲ್ಲಿ ನಿರ್ಣಯ ದಾಖಲೆಗಳನ್ನು ಬಿಡುಗಡೆಲಾಗುವುದು. ವೀಕಿಲೀಕ್ಸ್ ಕ್ರಮ ಯಾರಿಗೂ ಸಹಾಯಕವಾಗುವುದಕ್ಕಾಗಿರುವುದಲ್ಲ. ಡೋನಾಲ್ಡ್ ಟ್ರಂಪ್ ಮತ್ತು ಹಿಲರಿ ಕ್ಲಿಂಟನ್‌ರಲ್ಲಿ ನನಗೆ ಸಹತಾಪ ಮಾತ್ರ ಇದೆ ಎಂದು ಅಸಾಂಜ್ ಈ ಸಂದರ್ಭದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

    ಅಸಾಂಜ್ ಲಂಡನ್‌ನ ಇಕ್ವಾಡಾರ್ ರಾಯಭಾರಿ ಕಚೇರಿಯಲ್ಲಿ ಕುಳಿತು ವೀಡಿಯೊ ಕಾನ್ಫೆರನ್ಸ್ ಮೂಲಕ ಬರ್ಲಿನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತಾಡಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News