×
Ad

ಬ್ರಿಟನ್‌: ಭಾರತೀಯರಿಗೆ ಸಂಕಷ್ಟ

Update: 2016-10-05 22:00 IST

ಲಂಡನ್, ಅ. 5: ಐರೋಪ್ಯ ಒಕ್ಕೂಟೇತರ ದೇಶಗಳಿಂದ ‘‘ಕೆಲಸ ಮತ್ತು ಅಧ್ಯಯನ ಮಾರ್ಗ’’ಗಳ ಮೂಲಕ ಬ್ರಿಟನ್‌ಗೆ ಬರುವ ವಲಸಿಗರನ್ನು ನಿಯಂತ್ರಿಸುವ ಕಾರ್ಯಕ್ರಮಗಳನ್ನು ಬ್ರಿಟನ್ ಮಂಗಳವಾರ ಪ್ರಕಟಿಸಿದೆ.


ಈ ಕಾರ್ಯಕ್ರಮಗಳಿಂದಾಗಿ ಭಾರತ ಮುಂತಾದ ದೇಶಗಳಿಂದ ವೃತ್ತಿಪರರನ್ನು ನೇಮಿಸಲು ಬ್ರಿಟನ್‌ನ ಕಂಪೆನಿಗಳಿಗೆ ಕಷ್ಟವಾಗುತ್ತದೆ ಎನ್ನಲಾಗಿದೆ.
ವಲಸೆಯನ್ನು ತಡೆಯಲು ಸಾಧ್ಯವಿರುವ ಆಯ್ಕೆಗಳನ್ನು ತಾನು ಪರಿಶೀಲಿಸುತ್ತಿರುವುದಾಗಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕನ್ಸರ್ವೇಟಿವ್ ಪಕ್ಷದ ವಾರ್ಷಿಕ ಸಮ್ಮೇಳನದಲ್ಲಿ ಗೃಹ ಕಾರ್ಯದರ್ಶಿ ಆ್ಯಂಬರ್ ರೂಡ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News