×
Ad

ಕಾವೇರಿ ಜಲನಿರ್ವಹಣಾ ಮಂಡಳಿ ರಚನೆಗೆ ರೈತ ಒಕ್ಕೂಟದ ಆಗ್ರಹ

Update: 2016-10-06 20:51 IST

ಚೆನ್ನೈ,ಅ.6: ತಕ್ಷಣವೇ ಕಾವೇರಿ ಜಲ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಕೇಂದ್ರವನ್ನು ಆಗ್ರಹಿಸಿರುವ ರೈತರ ಒಕ್ಕೂಟವೊಂದು, ತನ್ನ ಬೇಡಿಕೆಯ ಬಗ್ಗೆ ಒತ್ತಾಯಿ ಸಲು ಎರಡು ದಿನಗಳ ರೈಲು ತಡೆ ಸೇರಿದಂತೆ ಪ್ರತಿಭಟನೆಯನ್ನು ನಡೆಸುವುದಾಗಿ ಹೇಳಿದೆ.

ಒಕ್ಕೂಟವು ಗುರುವಾರ ಇಲ್ಲಿ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಡಿಎಂಕೆ, ಬಿಜೆಪಿ, ಎಂಡಿಎಂಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಪಾಲ್ಗೊಂಡಿದ್ದವು. ಮಂಡಳಿ ರಚನೆಗಾಗಿ ಕೇಂದ್ರವನ್ನು ಒತ್ತಾಯಿಸಿ ಅ.17 ಮತ್ತು 18ರಂದು ನಿರಂತರ ರೈಲು ತಡೆಯನ್ನು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಾಮಾನ್ಯವಾಗಿ ರೈಲು ತಡೆ ಸಂದರ್ಭಗಳಲ್ಲಿ ನಾವು ಬಂಧನಕ್ಕೊಳಗಾಗುತ್ತೇವೆ. ಆದರೆ ಈ ಬಾರಿ ಅದು ನಿರಂತರವಾಗಿ ನಡೆಯಲಿದ್ದು, ಹಳಿಗಳ ಮೇಲೆ ಧರಣಿ ಕುಳಿತು,ಆಹಾರವನ್ನು ಸಿದ್ಧಪಡಿಸಿ ಅಲ್ಲಿಯೇ ಉಳಿಯಲಿದ್ದೇವೆ ಎಂದು ಒಕ್ಕೂಟದ ಸಂಚಾಲಕ ದೈವಶಿಖಾಮಣಿ ತಿಳಿಸಿದರು.

ರಾಜಭವನೆದುರು ಪ್ರತಿಭಟನೆ ನಡೆಸುವುದನ್ನೂ ನಾವು ಪರಿಶೀಲಿಸುತ್ತಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News