ಐಎಸ್‌ಎಸ್‌ಎಫ್ ವಿಶ್ವಕಪ್: ಜಿತು ರಾಯ್‌ಗೆ ಬೆಳ್ಳಿ
Update: 2016-10-06 23:06 IST
ಮುಂಬೈ, ಅ.6: ರಿಯೋ ಒಲಿಂಪಿಕ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಭಾರತದ ಶೂಟರ್ ಜಿತು ರಾಯ್ ಇಟಲಿಯಲ್ಲಿ ಗುರುವಾರ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ 50 ಮೀ. ಪುರುಷರ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
29ರ ಪ್ರಾಯದ ರಾಯ್ ಫೈನಲ್ ಸುತ್ತಿನಲ್ಲಿ ಒಟ್ಟು 188.8 ಅಂಕವನ್ನು ಗಳಿಸಿ ಬೆಳ್ಳಿ ಜಯಿಸಿದರು. ಕೇವಲ 1.8 ಅಂಕದಿಂದ ಚಿನ್ನ ವಂಚಿತರಾದರು. 190.6 ಅಂಕ ಗಳಿಸಿದ ಚೀನಾದ ವೀ ಪಾಂಗ್ ಚಿನ್ನ ಜಯಿಸಿದರು.
170.3 ಅಂಕ ಗಳಿಸಿದ ಇಟಲಿಯ ಗಿಯೊರ್ಡಾನೊ ಕಂಚಿನ ಪದಕ ಗೆದ್ದುಕೊಂಡರು.