ಕಾವೇರಿ ನದಿ ವಿವಾದ ವಿಚಾರಣೆಗೆ ತ್ರಿಸದಸ್ಯ ಪೀಠ ರಚನೆ
Update: 2016-10-08 23:28 IST
ಬೆಂಗಳೂರು, ಅ.8: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋಟ್‌ನಲ್ಲಿ ಅಕ್ಟೋಬರ್ 18ರಂದು ನಡೆಯಲಿದ್ದು, ವಿಚಾರಣೆಗೆ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ರಚಿಸಲಾಗಿದೆ.
ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಅಮಿತವ್ ರಾಯ್ ಮತ್ತು ನ್ಯಾಯಮೂರ್ತಿ ಎಂ.ಕಾನ್ವಿಲ್ಕರ್ ಪೀಠದ ಸದಸ್ಯರಾಗಿದ್ದಾರೆ.
ಈ ವರೆಗೆ ವಿಚಾರಣೆಗೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಜೊತೆ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಸುತ್ತಿದ್ದ ಉದಯ್ ಲಲಿತ್ ಅವರು ಈ ಬಾರಿ ಪೀಠದಲ್ಲಿ ಇಲ್ಲ. ಹಲವು ವರ್ಷಗಳ ಕಾಲ ತಮಿಳುನಾಡು ಮುಖ್ಯಂಮತ್ರಿ ಜೆ. ಜಯಲಲಿತಾ ಪರ ವಕೀಲರಾಗಿದ್ದ ಉದಯ್ ಲಲಿತ್ ಕಾವೇರಿ ವಿಚಾರಣಾ ಸಮಿತಿಯ ದ್ವಿಸದಸ್ಯ ಪೀಠದಲ್ಲಿ ಒಬ್ಬರಾಗಿದ್ದರು. ಅವರನ್ನು ಈ ಪೀಠದಿಂದ ಬದಲಾಯಿಸಲಾಗಿದೆ.