ಕಾರ್‌ಬಾಂಬ್ ಸ್ಫೋಟ: 7 ಯೋಧರ ಸಾವು

Update: 2016-10-09 15:24 GMT

ಅಂಕಾರ,ಅ.9: ಆಗ್ನೇಯ ಟರ್ಕಿಯ ಗಡಿಪ್ರಾಂತದಲ್ಲಿರುವ ಪೊಲೀಸ್ ಠಾಣೆಯೊಂದರ ಸಮೀಪ ರವಿವಾರ ಕಾರ್ ಬಾಂಬೊಂದು ಸ್ಫೋಟಿಸಿ, ಕನಿಷ್ಠ ಆರು ಮಂದಿ ಟರ್ಕಿ ಯೋಧರು ಮೃತಪಟ್ಟಿದ್ದಾರೆ ಹಾಗೂ ನಾಗರಿಕರು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ.
   ಇರಾಕ್ ಹಾಗೂ ಇರಾನ್‌ನ ಗಡಿಯಲ್ಲಿರುವ ಹಕ್ಕಾರಿ ಪ್ರಾಂತ್ಯದಲ್ಲಿರುವ ಸೆಮಿದಿನ್ಲಿ ಪಟ್ಟಣದ ಪೊಲೀಸ್ ಠಾಣೆಯ ಬಳಿ ಈ ಸ್ಫೋಟ ಸಂಭವಿಸಿದೆ. ಈ ಪ್ರದೇಶದ ಕುರ್ದಿಷ್ ಪಾರ್ಟಿ (ಪಿಕೆಕೆ) ಉಗ್ರರು ಸಕ್ರಿಯರಾಗಿದ್ದು, ಸ್ಫೋಟದಲ್ಲಿ ಅವರ ಕೈವಾಡವಿರುವ ಸಾಧ್ಯತೆಯಿದೆಯೆಂದು ಭದ್ರತಾ ಮೂಲಗಳು ತಿಳಿಸಿವೆ.
 ಪೊಲೀಸ್ ಠಾಣೆಯ ಮುಂದೆ ರಸ್ತೆಯಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿರುವುದಾಗಿ ಡೊಗಾನ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
1984ರಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ತುರ್ಕಿಯಲ್ಲಿ ಬಂಡಾಯ ಆರಂಭಿಸಿರುವ ಪಿಕೆಕೆ ಪಕ್ಷವನ್ನು ಟರ್ಕಿ , ಅಮೆರಿಕ ಹಾಗೂ ಯುರೋಪ್ ಒಕ್ಕೂಟಗಳು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News