ಜಾಗತೀಕರಣ ಮತ್ತು ಭಾಷಾನುವಾದ

Update: 2016-10-12 17:11 GMT


ಬಹುಭಾಷಾ ಸಮುದಾಯಗಳು ಸಾಂವಿಧಾನಿಕ ನೆಲೆಯಲ್ಲಿ ಜೀವಿಸಿರುವ ನಮ್ಮ ವಿಶಾಲ ದೇಶದಲ್ಲಿ ಅವರವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ಉಚಿತ ಸೌಲಭ್ಯ ದೊರೆಯಬೇಕೆಂಬುದು ಕ್ರಮಪ್ರಾಪ್ತವೆಂದು ಬೇರೆ ಹೇಳಬೇಕಿಲ್ಲ, ಅಷ್ಟೆ. ಅದುವೇ ಭಾರತೀಯ ಸಮ್ಮಿಶ್ರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸೂಕ್ತ ಉಪಾಯ, ಅದರಿಂದಲೇ ಭಾರತೀಯ ಸಾಹಿತ್ಯ- ಕಲೆಗಳ ವಿಕಸನಕ್ಕೆ ಭದ್ರ ತಳಪಾಯ!

 ಇದು ತುಂಬ ತಡವಾಗಿ ಹೊಳೆದ ವಿಚಾರವೆಂದು ಕೆಲವರಿಗೆನಿಸಲೂ ಬಹುದು. ಯಾವುದೇ ಆಲೋಚನೆಗೆ ಎರಡು ಬದಿಗಳಿದ್ದೇ ಇರುತ್ತವಲ್ಲ, ಒಂದು ನಾಣ್ಯಕ್ಕೆ ಎರಡು ಬದಿಗಳಿರುವಂತೆ! ಆದರೆ, ಆ ಮೂಲ ನಾಣ್ಯದ ಮೂಲ ಬೆಲೆ ಬದಲಾಗುವುದಿಲ್ಲ, ಹಾಗೆ....ಕಳೆದ ಕಾಲು ಶತಮಾನದಿಂದ ನಮ್ಮ ದೇಶದಲ್ಲಿ ಚಾಲ್ತಿ ಇರುವ ಜಾಗತೀಕರಣದ ವಿಚಾರ!
  ಈ ಜಾಗತೀಕರಣದ ಗಾಳಿ ಬಿರುಗಾಳಿಯಾಗಿ ನಮ್ಮದೆಲ್ಲವನ್ನು ಬುಡಮೇಲು ಮಾಡುವ ಮೊದಲು ನಮ್ಮ ಸಾಂಸ್ಕೃತಿಕ ಪರಂಪರೆ, ಭಾಷೆ, ಸಾಹಿತ್ಯ, ಜನಪದ ಜೀವನಕ್ರಮಗಳಲ್ಲಿ ಅಡಕಗೊಂಡಿರುವ ದೇಶೀಯತೆಯ ಬೇರುಗಳನ್ನು ಗಟ್ಟಿಗೊಳಿಸುವುದು ಇಂದಿನ ಗರಜೆಂಬುದನ್ನು ನಾವು ಮನಗಾಣಬೇಕಾಗಿದೆ. ಸುಮಾರು ಕಾಲು ಶತಮಾನದ ಹಿಂದೆ ನಮ್ಮವರೇ ಭಾರತದ ಬಾಗಿಲು ತೆರೆದು ಬರಮಾಡಿಕೊಂಡ ಜಾಗತೀಕರಣವನ್ನು ಈ ಹಂತದಲ್ಲಿ ಸಾರಾಸಗಟಾಗಿ ವಿರೋಸುವುದು ಕೂಡ ಆರೋಗ್ಯಪೂರ್ಣ ಲಕ್ಷಣವಲ್ಲವೆಂಬ ಎಚ್ಚರಿಕೆಯೂ ನಮಗೆ ಅಗತ್ಯವೇ. ಹಾಗೆ ಮಾಡಿದ್ದೇ ಆದರೆ, ಜಗತ್ತಿನ ದೃಷ್ಟಿಯಲ್ಲಿ ನಾವೇ ಹುಚ್ಚರೆನಿಸಬಹುದು. ಆದರೂ ಅದು ನಮ್ಮ ಮಾನಸಿಕ ನೆಲೆಯಲ್ಲಿ ಪೂರ್ತಿ ಪಚನಗೊಳ್ಳದ ಎಡವಟ್ಟು ಪರಿಕಲ್ಪನೆಯಾಗಿ ಜೀವ ತಿನ್ನುತ್ತಿರುವುದೇನು ಸುಳ್ಳಲ್ಲ. ಅಂತೆಯೇ, ನಮಗೆ ಜಾಗತೀಕರಣವೇ ಅಗತ್ಯವಿರಲಿಲ್ಲ, ಬಿಟ್ಟೇನೆಂದರೆ ಬಿಡದ ಮಾಯೆಯಾಗಿ ಅದು ನಮ್ಮ ಬೆಂಬತ್ತಿದೆಯೆಂದು ನಾವು ಗೊಣಗುತ್ತಲೇ ಇರುತ್ತೇವೆ.

ಈ ಮಹಾಮಾಯೆಯ ವಿಷಯ ಬಂದಾಗಲೆಲ್ಲ, ನಾವು 12ನೆಯ ಶತಮಾನದ ಅಘೋಷಿತ ’ಸೀ ಸ್ವಾತಂತ್ರ್ಯವಾದಿ’ ಅಕ್ಕಮಹಾದೇವಿಯಕ್ಕನ ಒಂದು ವಚನವನ್ನು ನೆನಪಿಸಿಕೊಳ್ಳಬೇಕು. ‘ಹಾವಿನ ಹಲ್ಲು ಕಳೆದು ಹಾವನಾಡಿಸಬಲ್ಲಡೆ, ಹಾವಿನ ಸಂಗವೇ ಲೇಸು ಕಂಡಯ್ಯಾ’ ಎಂದಲ್ಲವೇ ಆಕೆ ಸೂಚಿಸಿದ್ದು? ಇತರ ಸಾಮಾಜಿಕ ಸಂದರ್ಭಗಳಂತೂ ಸರಿಯೇ ಸರಿ, ಈ ಜಾಗತೀಕರಣದ ಸಂದರ್ಭದಲ್ಲಿ ಅದು ಬಹಳೇ ಸೂಕ್ತವಾಗಿ ಅನ್ವಯಿಸುವ ಮಾತು.ಜಾಗತೀಕರಣದ ಅನಿಷ್ಟ ಪ್ರಭಾವಗಳನ್ನು ನಿಷ್ಕ್ರಿಯಗೊಳಿಸಿ, ಅದರಿಂದ ಸಾಧ್ಯವಾಗುವ ಪ್ರಯೋಜನಗಳ ಪ್ರಮಾಣ ಹೆಚ್ಚು ಹೆಚ್ಚಾಗಿ ನಮ್ಮ ಸಮಾಜದ ಸಮಗ್ರ ಪ್ರಗತಿಗೆ ಉಪಯೋಗವಾಗುವ ಹಾಗೆ ಪ್ರಯತ್ನಿಸುವುದು ನಮ್ಮ ಪ್ರಚಲಿತ ಬದುಕಿನ ಮುಂದಿರುವ ದೊಡ್ಡ ಸವಾಲು. ಇದರಲ್ಲಿ ನಾವು ಸೋತರೆ ಜಗತ್ತು ನಮ್ಮನ್ನು ನೋಡಿ ನಗುತ್ತದೆ. ಗೆದ್ದರೆ, ನಮ್ಮದು ಹೊಸದಕ್ಕೆ ಹೊಂದಿಕೊಳ್ಳುವ ಪ್ರಗತಿಶೀಲ ಪ್ರಜಾಸತ್ತೆ ಎಂದು ಮುಕ್ತ ಕಂಠದಿಂದ ಹೊಗಳುತ್ತದೆ.ಜಗತ್ತು ಹೊಗಳಲಿ, ಬಿಡಲಿ, ಜಾಗತೀಕರಣದ ಈ ಸಂದರ್ಭದಲ್ಲಿ ಇಂದಿನ ಯುವಜನಾಂಗ ಬದುಕಿನ ಬದಲಾವಣೆಗೆ ಹೇಗೆ ಮತ್ತು ಎಷ್ಟರ ಮಟ್ಟಿಗೆ ಹೊಂದಿಕೊಂಡಿದೆ ಹಾಗೂ ಆ ಹೊಂದಾಣಿಕೆಯೊಡನೆ ಎಷ್ಟರ ಮಟ್ಟಿಗೆ ಮುನ್ನಡೆ ಸಾಸುತ್ತಿದೆ ಎಂಬುದು ಬಲು ಮಹತ್ವದ ಮಾತು.

ನಾವೀಗ ಜಾಗತಿಕ ಗ್ರಾಮನಿವಾಸಿಗಳು. ಸಮಸ್ತ ಜಗತ್ತಿನ ಸುಖ-ದುಃಖದಲ್ಲಿ ಸಮಭಾಗಿಗಳು. ಜಗತ್ತಿನ ಜನಜೀವನದ ಪರಿಚಯವೇ ಇಲ್ಲದೆ ಪರಸ್ಪರ ಅನುಭವಗಳನ್ನು ಹಂಚಿಕೊಳ್ಳುವುದಾದರೂ ಹೇಗೆ? ಇಲ್ಲಿ ಬರುತ್ತದೆ ಪರಸ್ಪರ ಸಂವಹನದ ಪ್ರಶ್ನೆ; ಭಾಷೆಯ ಬಳಕೆಯ ಪ್ರಶ್ನೆ. ಜಗತ್ತಿನಲ್ಲಿ ಎಷ್ಟೆಲ್ಲ ಭಾಷೆಗಳಿವೆಯಲ್ಲ, ನಮಗೆ ಅವೆಲ್ಲಾ ಗೊತ್ತಾ? ಗೊತ್ತಿಲ್ಲವೆಂದಾದರೆ ಪರಸ್ಪರ ಸಂವಹನ ಹೇಗೆ ಸಾಧ್ಯ? ಇದೇ ನಮ್ಮ ಗೊಂದಲ.

ಜಾಗತೀಕರಣದಿಂದಾಗಿ ಇಂಗ್ಲಿಷ್ ಭಾಷೆಗೆ ಮೊದಲಿಗಿಂತಲೂ ಇತ್ತೀಚೆಗೆ ಅವಾಸ್ತವ ಮಹತ್ವ ಬಂದಿರುವುದನ್ನು ನಾವು ನಿತ್ಯವೂ ಅನುಭವಿಸುತ್ತಿದ್ದೇವೆ. ನಮ್ಮ ಬದುಕಿನ ಪ್ರತಿಯೊಂದು ಕ್ಷೇತ್ರದಲ್ಲೂ ಅದರ ಬಳಕೆ ಹೆಚ್ಚಾಗಿ, ಪ್ರಾದೇಶಿಕ ಭಾಷೆಗಳು ಮೆಲ್ಲಮೆಲ್ಲನೆ ಕರಗುತ್ತಿವೆ, ಸೊರಗುತ್ತಿವೆ ಎಂಬ ತೀಕ್ಷ್ಣ ಕಳವಳವೊಂದು ಪ್ರಮುಖವಾಗಿ ಪ್ರಾದೇಶಿಕ ಭಾಷೆಯನ್ನೇ ನೆಚ್ಚಿಕೊಂಡಿರುವ ನಮ್ಮ ಜನರಲ್ಲಿ ಹುಟ್ಟಿಕೊಂಡಿರುವುದು ಸ್ವಾಭಾವಿಕವೇ. ಒಂದು ದೃಷ್ಟಿಯಿಂದ ಜಗತ್ತಿನಲ್ಲಿ ಬಳಕೆಯಲ್ಲಿರುವ ಸಾವಿರಾರು ಭಾಷೆಗಳಲ್ಲಿ ಇಂಗ್ಲಿಷ್ ಭಾಷೆಯೇ ಅತಿ ಶ್ರೀಮಂತ ಭಾಷೆಯೆಂಬ ಪಟ್ಟವನ್ನೇರಿ ವಿಶ್ವವನ್ನಾಳುತ್ತಿದೆ! ಗರುಡನ ಬೆನ್ನೇರಿ ಕುಳಿತ ಗುಬ್ಬಿಯ ಹಾಡೇ ಲೋಕದ ಕಿವಿ ತುಂಬುವಂತಾಗಿದೆ! ಇಂದು ಇಂಗ್ಲಿಷ್ ಭಾಷೆಯ ಜ್ಞಾನವೊಂದಿದ್ದರೆ, ಜಗತ್ತಿನ ಯಾವುದೇ ಭಾಷಾಸಾಹಿತ್ಯ ಪ್ರಪಂಚದಲ್ಲಿ ನಾವು ಪ್ರವೇಶ ಪಡೆಯಬಹುದು. ಹೀಗಿದೆ ಇಂಗ್ಲಿಷಿನ ವಿಶ್ವವ್ಯಾಪೀ ಬಳಕೆಯ ಹಾಡು-ಪಾಡು. ಅದರಿಂದ ನಮ್ಮ ಪ್ರಾದೇಶಿಕ ಭಾಷೆಗಳಿಗೆ ಮಾತ್ರ ಇನ್ನಿಲ್ಲದ ಕೇಡು. ಇದಿಂದು ಭಾರತೀಯ ಸಮಾಜದ ನೆಮ್ಮದಿಯನ್ನು ಹಾಳ್ಗೆಡಿಸುತ್ತಿರುವ ವಿಚಿತ್ರ ಕೊರಗು.

ನಾವು ಈ ಕೊರಗಿಗೆ ಒಮ್ಮೆ ಮೈಮನವೊಡ್ಡಿದರೆ ತೀರಿ ಹೋಯ್ತು, ನಮ್ಮ ಭಾಷೆಗಳ ಕಾಲಿನ ಮೇಲೆ ನಾವೇ ಕಲ್ಲು ಚೆಲ್ಲಿದಂತಾಗದಿರದು. ನಿಜವೆಂದರೆ, ನಮ್ಮ ಸ್ವಕಲ್ಪಿತ ಕೊರಗಿನ ಕಾರಣದಿಂದ ಇಂಗ್ಲಿಷ್ ಭಾಷೆಯ ಬಳಕೆಯೇನೂ ಕಡಿಮೆಯಾಗುವುದಿಲ್ಲ. ಬದಲಾಗಿ, ನಾವೇ ನಮಗೆ ಅರಿವಿಲ್ಲದಂತೆ ಅದರ ಮೋಹಕ್ಕೆ ಒಳಗಾಗಿ ಅದರ ಬಳಕೆಯನ್ನು ಹೆಚ್ಚಿಸಲು ನೆರವಾದಂತಾಗಬಹುದು!. ಆ ಭಾಷೆಯ ಮೋಹಕತೆಯೇ ಅಂತಹದ್ದು! ಅದರ ಮಾಯಾಜಾಲವೇ ಅಂತಹದ್ದು! ಆ ಭಾಷೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಬಹಳಷ್ಟು ಉದ್ಯೋಗಾವಕಾಶಗಳಿರುವುದೂ ಆ ಮೋಹಕತೆಯ ಹಿಂದಿರುವ ಒಂದು ಮಹತ್ವದ ಗ್ರಹಿಕೆ. ಸ್ವಲ್ಪ ಮಟ್ಟಿಗೆ ಈ ಗ್ರಹಿಕೆಯಲ್ಲಿ ಸತ್ಯಾಂಶವೂ ಇಲ್ಲದಿಲ್ಲ. ಅಂತೆಯೇ ನಮ್ಮ ರಾಜ್ಯದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಕಲಿಕೆಯ ಬಗ್ಗೆ ಸರಕಾರ ಮತ್ತು ಖಾಸಗೀ ಶಿಕ್ಷಣವಲಯಗಳ ನಡುವೆ ಎಷ್ಟೆಲ್ಲಾ ವಾದ-ವಿವಾದಗಳು ನಡೆದಿವೆಯಲ್ಲ! ವಾಸ್ತವಿಕವಾಗಿ, ನಮ್ಮ ಮಕ್ಕಳಿಗೆ ಇಂದಿನ ಕಾಲದಲ್ಲಿ ಇಂಗ್ಲಿಷ್ ವಿದ್ಯೆಯಂತೂ ಬೇಕೇ ಬೇಕು.

ಅದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಶಿಕ್ಷಣ ಕ್ರಮದ ಯಾವ ಹಂತದಲ್ಲಿ, ಎಷ್ಟು ಮತ್ತು ಹೇಗೆ ಕಲಿಸಬೇಕು, ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಪರಿಣತಿಯೊಡನೆ ಇಂಗ್ಲಿಷಿನಲ್ಲೂ ವ್ಯಾವಹಾರಿಕ ಕೌಶಲ್ಯವನ್ನು ಹೇಗೆ ಸಾಸಬೇಕು-ಎಂಬುದೇ ವಿವಾದದ ಮುಖ್ಯ ಪ್ರಶ್ನೆಯಾಗಿದೆ. ಈ ಪ್ರಶ್ನೆಯನ್ನು ಶೈಕ್ಷಣಿಕ ಪರಿಣತರು ಹಾಗೂ ಭಾಷಾತಜ್ಞರು ಸೇರಿ ಬಿಡಿಸಬೇಕಲ್ಲದೆ ಸದಾ ಏಕಪಕ್ಷೀಯ ಆಲೋಚನೆಗಳಲ್ಲಿ ಮುಳುಗಿರುವ ಹಾಗೂ ತಮ್ಮ ಆಲೋಚನೆಯೇ ಸರಿಯೆಂದು ಸಾರುವ ರಾಜಕೀಯ ಪಕ್ಷಗಳಿಂದಲ್ಲ!. ಪ್ರಾಯಶಃ ಕಲಿಕೆಯ ಮಾಧ್ಯಮದ ವಿಷಯದಲ್ಲಿ ನಮ್ಮ ರಾಷ್ಟ್ರಪಿತ ಗಾಂೀಜಿಯವರ ವಿಚಾರವನ್ನೇ ಅಂತಿಮವಾಗಿ ಅಂಗೀಕರಿಸದೆ ವಿಯಿಲ್ಲ ಎನ್ನಬೇಕಾಗುತ್ತದೆ. ಬಹುಭಾಷಾ ಸಮುದಾಯಗಳು ಸಾಂವಿಧಾನಿಕ ನೆಲೆಯಲ್ಲಿ ಜೀವಿಸಿರುವ ನಮ್ಮ ವಿಶಾಲ ದೇಶದಲ್ಲಿ ಅವರವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ಉಚಿತ ಸೌಲಭ್ಯ ದೊರೆಯಬೇಕೆಂಬುದು ಕ್ರಮಪ್ರಾಪ್ತವೆಂದು ಬೇರೆ ಹೇಳಬೇಕಿಲ್ಲ, ಅಷ್ಟೆ. ಅದುವೇ ಭಾರತೀಯ ಸಮ್ಮಿಶ್ರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸೂಕ್ತ ಉಪಾಯ, ಅದರಿಂದಲೇ ಭಾರತೀಯ ಸಾಹಿತ್ಯ- ಕಲೆಗಳ ವಿಕಸನಕ್ಕೆ ಭದ್ರ ತಳಪಾಯ!

ಇಷ್ಟೆಲ್ಲ ಭಾರತೀಯ ಭಾಷೆಗಳ ಮಾಧ್ಯಮದ ಮೂಲಕವೇ ಸಾಸಬಹುದೆಂದರೆ, ಜಾಗತೀಕರಣದ ಪರಿಣಾಮವಾಗಿ ಬೆಳೆದ ಇಂಗ್ಲಿಷ್ ಭಾಷೆಯ ಬಳಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿದಂತಾಯಿತೇ? ಇಲ್ಲ, ಹಾಗಾಗುವುದೇ ಸಾಧ್ಯವಿಲ್ಲ. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿಯೇ ಅದರ ಹಾರಾಟವೂ ನಡೆದಿದೆ, ಏರಾಟವೂ ನಡೆದಿದೆ! ಇಲ್ಲಿ ಕನ್ನಡಿಗರಕ್ಕ ಅಕ್ಕಮಹಾದೇವಿಯ ವಚನವೇ ನಮ್ಮ ದಾರಿದೀಪವಾಗಬಲ್ಲುದು!


ಇಂಗ್ಲಿಷಿನಿಂದೇನೂ ಪ್ರಯೋಜನವಿಲ್ಲವೇ?
       ವ್ಯಾವಹಾರಿಕ ದೃಷ್ಟಿಯ ಮಾತು ಹಾಗಿರಲಿ, ಸಾಂಸ್ಕೃತಿಕ ದೃಷ್ಟಿಯಿಂದ ಇಂಗ್ಲಿಷ್ ಬಹಳಷ್ಟು ಪ್ರಯೋಜನಕಾರಿಯಾದ ಭಾಷೆಯಾಗಿದೆಯೆಂಬುದನ್ನೂ ನಾವಿಲ್ಲಿ ಗಮನಿಸಬೇಕು. ಸದ್ಯದ ಸಂದರ್ಭದಲ್ಲಿ ಮಾತ್ರವಲ್ಲದೆ, ಮೊದಲಿನಿಂದಲೂ ನಮ್ಮ ಪ್ರಾದೇಶಿಕ ಭಾಷಾಸಾಹಿತ್ಯ ಸಂವರ್ಧನೆಯಲ್ಲಿ ಇಂಗ್ಲಿಷ್ ಭಾಷೆಯ ಪಾತ್ರ ಗಣನೀಯವಾಗಿದ್ದುದು ಸುಳ್ಳಲ್ಲ.ಅಂತೆಯೇ ಆಧುನಿಕ ಭಾರತೀಯ ಪ್ರಾದೇಶಿಕ ಭಾಷೆ ಹಾಗೂ ಸಾಹಿತ್ಯಗಳ ಗತಿ-ಪ್ರಗತಿಗಳು ಬಹುಮಟ್ಟಿಗೆ ಇಂಗ್ಲಿಷ್ ಭಾಷೆಯ ಪ್ರಭಾವಕ್ಕೆ ಋಣಿಯಾಗಿರುವ ಸಂಗತಿಯನ್ನು ನಮ್ಮ ಪ್ರಾದೇಶಿಕ ಭಾಷಾಭಿಮಾನದ ತೀವ್ರತೆಯಿಂದ ತಳ್ಳಿ ಹಾಕುವುದೂ ಸುಲಭವಲ್ಲ. 20ನೆಯ ಶತಕದಲ್ಲಿ ನಮ್ಮ ಆಧುನಿಕ ಕನ್ನಡ ಕಾವ್ಯದ ನವೋದಯವಾದದ್ದೇ ಇಂಗ್ಲಿಷ್ ಕಾವ್ಯದ ಅನುವಾದ- ಭಾವಾನುವಾದಗಳಿಂದ. ಭಾರತದ ಯಾವ ಪ್ರಾದೇಶಿಕ ಭಾಷೆಯನ್ನು ನೋಡಿದರೂ ಈ ಸತ್ಯ ಸತ್ಯವಾಗಿಯೇ ಗೋಚರಿಸುತ್ತದೆ. ನಮ್ಮ ಪ್ರಾದೇಶಿಕ ಭಾಷೆಗಳ ಬಳಕೆಯಲ್ಲಿ ವೈವಿಧ್ಯ ಹಾಗೂ ವೈಪುಲ್ಯದ ಸೌಭಾಗ್ಯ ಪ್ರಾಪ್ತವಾದದ್ದೂ ಇಂಗ್ಲಿಷಿನ ಕೃಪೆಯಿಂದ. ಅಷ್ಟು ಮಾತ್ರವಲ್ಲದೆ, ಇಂಗ್ಲಿಷಿನಿಂದ ಹಾಗೂ ಇಂಗ್ಲಿಷಿನ ಮುಖಾಂತರ ಇತರ ವಿದೇಶೀಯ ಭಾಷೆಗಳಿಂದ ಭಾರತೀಯ ಭಾಷೆಗಳಲ್ಲಿ ನಡೆದ ಭಾಷಾಂತರ ಪ್ರಕ್ರಿಯೆಯಿಂದ ನಮ್ಮ ಪ್ರಾದೇಶಿಕ ಭಾಷಾಸಾಹಿತ್ಯಗಳ ವ್ಯಾಪಕತೆ ಹೆಚ್ಚಾಗಿ, ಗಣನೀಯ ಹೊಸತನ ಮೂಡಿ ಬಂದಿದೆಯೆಂದು ನಾವು ಒಪ್ಪಿಕೊಳ್ಳಲೇಬೇಕು.

ಆದರೆ, ಯಾವುದೇ ಭಾಷೆಯಲ್ಲಿ ಆಂತರಿಕ ಜೀವಸತ್ವವಿಲ್ಲದೆ, ಕೇವಲ ಇಂಗ್ಲಿಷಿನ ಪ್ರಭಾವದಿಂದಲೇ ಆ ಭಾಷೆ ಬೆಳೆಯಿತೆಂದು ಹೇಳುವುದು ಆಯಾ ಭಾಷೆಯ ಹುಟ್ಟು ಮತ್ತು ನೈಜ ಬೆಳವಣಿಗೆಯ ಅರಿವಿಲ್ಲದವರು ಆಡುವ ಮಾತೆನಿಸಬಹುದು. ಈವರೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಸಂಪಾದಿಸಿದ ನಮ್ಮ ಕನ್ನಡ ಭಾಷೆಗೂ, ಇದರ ಅರ್ಧದಷ್ಟು ಪ್ರಶಸ್ತಿಗಳಲ್ಲೇ ಸಮಾಧಾನ ಹೊಂದಬೇಕಾದ ಇತರ ಕೆಲ ಭಾಷೆಗಳಿಗೂ ಹೋಲಿಸಿದಾಗ ಈ ಆಂತರಿಕ ಜೀವಸತ್ವ-ತತ್ವದ ಸೂಕ್ಷ್ಮ ಅರ್ಥವಾದೀತು.

ಹಾಗೆ ನೋಡಿದರೆ, ಇಂಗ್ಲಿಷ್ ಭಾಷೆ ವಿವಿಧ ದೇಶಗಳ ಸಾಂಸ್ಕೃತಿಕ ವಿನಿಮಯ ಪ್ರಕ್ರಿಯೆಯ ಪ್ರಮುಖ ಸಾಧನವೇ ಹೌದು. ನಮ್ಮ ಪ್ರಾದೇಶಿಕ ಭಾಷೆಗಳು ಸಾಕಷ್ಟು ಸಮೃದ್ಧವಾಗುವ ವರೆಗೆ ಇಂಗ್ಲಿಷ್ ಭಾಷೆಯ ಮೂಲಕವೇ ವಿಶ್ವದ ಜ್ಞಾನಭಂಡಾರದ ಬೀಗವನ್ನು ತೆರೆದು ನೋಡಬಹುದು; ನಮಗೆ ಬೇಕೆನಿಸಿದಾಗ ಬೇಕಾದುದನ್ನು, ಬೇಕಾದಷ್ಟನ್ನು ಪಡೆದುಕೊಳ್ಳಬಹುದು. ನಮಗೆ ಪರಿಚಿತವಾಗಿರುವ ಜಾಗತಿಕ ಸಾಹಿತ್ಯವೆಲ್ಲ ಇಂಗ್ಲಿಷಿನ ಮೂಲಕವಾಗಿಯೇ ಬಂದದ್ದು. ಭಾರತೀಯ ಭಾಷೆಯ ಕೃತಿಗಳನ್ನೇ ನಾವು ಇಂಗ್ಲಿಷಿನ ಮೂಲಕವಾಗಿ ಅನುವಾದಿಸಿಕೊಳ್ಳುತ್ತಿರುವಾಗ ಭಾರತದ ಹೊರಗಿನ ಭಾಷೆ-ಸಾಹಿತ್ಯಗಳನ್ನೂ ಇಂಗ್ಲಿಷಿನ ಮೂಲಕವಾಗಿ ಪಡೆಯುವುದು ಆಶ್ಚರ್ಯದ ಸಂಗತಿಯೇನಲ್ಲ (ಸಂಪದ, ಪುಟ-104) ಎಂದು ಡಾ.ಹಾ.ಮಾ.ನಾಯಕರು ಹೇಳಿದ ಮಾತು ಕೂಡ ಇಂಗ್ಲಿಷ್ ಭಾಷೆಯ ಮಧ್ಯಸ್ಥಿಕೆಯ ಮಹತ್ವವನ್ನೇ ಎತ್ತಿ ತೋರಿಸುತ್ತದೆ. ಆದರೆ, ಅನುವಾದದ ಮೂಲ ಭಾಷೆಯನ್ನು ಚೆನ್ನಾಗಿ ಅಧ್ಯಯನಗೈದು ನೇರವಾಗಿ ಮೂಲ ಭಾಷೆಯಿಂದಲೇ ತಮ್ಮ ಭಾಷೆಗೆ ತರ್ಜುಮೆ ಮಾಡಿಕೊಳ್ಳುವ ಸಾಹಸದ ಉದಾಹರಣೆಗಳೂ ಉಂಟು. ಕಳೆದ ದಶಕದ ಕೊನೆಯಲ್ಲಿ ತೀರಿ ಹೋದ ಭಾರತದ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾದ ಮೊದಲ ಚೀನೀಯ ಸಂಸ್ಕೃತ ವಿದ್ವಾಂಸರಾದ ಜಿ ಝಿಯನ್ಲಿನ್ ಅವರು ತಮ್ಮ ದೇಶದ 5,000 ವರ್ಷಗಳ ಸಂಸ್ಕೃತಿ ಸದಾ ಶ್ರೀಮಂತವಾಗಿ ಉಳಿದಿರುವುದಕ್ಕೆ ತಮ್ಮ ದೇಶದ ಸಾಹಿತಿಗಳೂ. ವಿದ್ವಾಂಸರೂ ಭಾರತ ಮತ್ತು ಇತರ ಹೊರದೇಶಗಳಿಂದ ಚೀನಾ ಭಾಷೆಯಲ್ಲಿ ಮಾಡಿಕೊಂಡ ಅನುವಾದ ಕ್ರಿಯೆಯೇ ಕಾರಣವೆಂದು ಹೇಳುತ್ತಿದ್ದರೆಂಬುದು ನಮಗಿಲ್ಲಿ ಅತ್ಯಂತ ಪ್ರಸ್ತುತ ಅಂಶವೆಂದೇ ಹೇಳಬೇಕು.

ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತದ ಹಲವೊಂದು ಮಹತ್ವದ ಸಾಹಿತ್ಯ ಕೃತಿಗಳ ನೇರ ಅನುವಾದದ ಮೂಲಕವೇ ಅವರು ಭಾರತ-ಚೀನಾಗಳ ನಡುವೆ ಸಾಂಸ್ಕೃತಿಕ ತಿಳುವಳಿಕೆಯನ್ನು ಹೆಚ್ಚಿಸಲು ಕಾರಣರಾದರೆಂದೇ ಅವರಿಗೆ ಭಾರತ ಸರಕಾರದವರು ಪದ್ಮಭೂಷಣದಂಥ ಉನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ! ಅವರು ನೇರವಾಗಿ ಸಂಸ್ಕೃತಭಾಷೆಯಿಂದಲೇ ಚೀನೀ ಭಾಷೆಗೆ ಅನುವಾದ ಮಾಡಿಕೊಂಡದ್ದು ನಿಜವಾದರೂ, ಇಲ್ಲಿ ಅವರು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡಿಕೊಂಡು ಅಂತಾರಾಷ್ಟ್ರೀಯ ತಿಳುವಳಿಕೆಯನ್ನು ಸಾಸಲೆತ್ನಿಸಿದರೆಂಬ ಸಂಗತಿಯತ್ತ ನಮ್ಮ ಗಮನ ಹರಿಸಬೇಕಾದದ್ದು ಮಹತ್ವದ ಸಂಗತಿಯಾಗಿದೆ. ಜಗತ್ತಿನ ಮಹತ್ವದ ಕೃತಿಗಳೆಲ್ಲ ಇಂಗ್ಲಿಷ್ ಭಾಷೆಯಲ್ಲಿ ಸಿಗುವುದರಿಂದ ಅದರ ಜ್ಞಾನವನ್ನು ಈ ಭಾಷಾನುವಾದ ಕಾರ್ಯಕ್ಕೆ ತೊಡಗಿಸಿ ನಮ್ಮ ಸಾಹಿತ್ಯ-ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳಲು ಭಾರತೀಯ ಸಾಹಿತಿಗಳೂ ಪ್ರಯತ್ನಿಸಬೇಕಾದುದು ಶ್ರೇಯಸ್ಕರ. ಜಾಗತೀಕರಣದ ಹಿನ್ನೆಲೆಯಲ್ಲಿ, ಹೊರದೇಶಗಳಿಂದ ಉದ್ಯೋಗ -ದಂಧೆಗಳ, ಸರಕು - ಸಾಮಾನುಗಳ ವಿನಿಮಯದಲ್ಲಿ ಮಾತ್ರ ತೃಪ್ತಿಪಟ್ಟುಕೊಳ್ಳದೆ, ಸಾಹಿತ್ಯ,ಕಲೆ, ವೈಜ್ಞಾನಿಕ ವಿಚಾರಗಳ ವಿನಿಮಯವನ್ನೂ ಮಾಡಿಕೊಳ್ಳಬೇಕು. ಒಂದರಿಂದ ಆರ್ಥಿಕ ಪ್ರಗತಿಗೆ ನೆರವಾದರೆ, ಮತ್ತೊಂದರಿಂದ ಸಾಂಸ್ಕೃತಿಕ ಪರಿವರ್ತನೆಗೆ ನೆರವಾದಂತಾಗುವುದು! ನಮ್ಮ ಭಾಷೆ-ಸಂಸ್ಕೃತಿಗಳ ಅಭಿಮಾನದ ಅಂಚಿನಲ್ಲಿನಲ್ಲಿರುವ ಇಂಗ್ಲಿಷ್ ಭಾಷೆಯ ದ್ವೇಷವನ್ನು ಬದಿಗಿರಿಸಿ, ನಮ್ಮ ದೇಶದ ಹಿತದ ದೃಷ್ಟಿಯಿಂದ ಈ ದ್ವಿಮುಖ ಪ್ರಯೋಜನಗಳನ್ನು ಸಹಜವಾಗಿ ಸಾಸಬಹುದಲ್ಲವೇ? ಇದಲ್ಲವೆ ‘ಹಾವಿನ ಹಲ್ಲ ಕಳೆದು ಹಾವಿನ ಸಂಗ ಬೆಳೆಸುವ’ ವಿಧಾನ? ಇದಲ್ಲವೇ ಶಾಂತ ಚಿತ್ತದಿಂದ ಧೇನಿಸಿದರೆ ವಿಶ್ವಮಾನವತೆಯ ಅನಿವಾರ್ಯ ಸೋಪಾನ?
ಸಾಹಿತ್ಯ-ಸಂಸ್ಕೃತಿಗಳ ಸಮುಚಿತ ವಿನಿಮಯ

 ಇಲ್ಲಿ ಮುಖ್ಯವಾಗಿ ನೆನಪಿಡಬೇಕಾದ ಸಂಗತಿಯೆಂದರೆ, ಇಂದಿನ ಜಾಗತೀಕರಣದ ಸಂದರ್ಭದಲ್ಲಿ ದೇಶ ವಿದೇಶಗಳ ನಡುವೆ ಕೇವಲ ಉದ್ಯೋಗ-ವ್ಯವಹಾರಗಳ ವಿನಿಮಯ ನಡೆದರೆ ಸಾಲದು, ನಮ್ಮ ಭಾಷೆ ಮತ್ತು ಸಾಹಿತ್ಯಗಳ ಮೂಲ ಬೇರುಗಳನ್ನು ಗಟ್ಟಿಯಾಗಿರಿಸಿಕೊಂಡೇ ಹೊರದೇಶಗಳ ಸಾಹಿತ್ಯ-ಸಂಸ್ಕೃತಿಗಳ ಸಮುಚಿತ ವಿನಿಮಯವೂ ನಡೆಯಬೇಕೆಂಬುದು. ವಿಶ್ವದ ವಿವಿಧ ದೇಶ-ಪ್ರದೇಶಗಳ ಜೀವನ ಪರಿಚಯವೂ ನಾಳಿನ ಪೀಳಿಗೆಗೆ ಆಗಬೇಕು. ಈ ಉದ್ದೇಶ-ಸಾಧನೆಗಾಗಿ ಮುಖ್ಯವಾಗಿ ಇಂಗ್ಲಿಷ್ ಭಾಷೆಯನ್ನೇ ಒಂದು ಸೇತುವೆಯಾಗಿಸಿ, ವಿವಿಧ ಪ್ರಾದೇಶಿಕ ಭಾಷೆಗಳ ಪರಸ್ಪರ ಆದಾನ-ಪ್ರಧಾನ ಕ್ರಿಯೆ ನಡೆಯಬೇಕಾದದ್ದು ತುಂಬಾ ಮಹತ್ವದ್ದೆಂದು ಬೇರೆ ಹೇಳಬೇಕಿಲ್ಲ.ಅದರಿಂದಾಗಿ, ದೇಶ-ವಿದೇಶಗಳ ನಡುವೆ ಹಾಗೂ ನಮ್ಮ ವಿಶಾಲ ದೇಶದ ವಿವಿಧ ಪ್ರದೇಶಗಳ ನಡುವೆ ಸಾಂಸ್ಕೃತಿಕ ಸಮನ್ವಯ ಸಾಸಿದ ಹಾಗಾಗುತ್ತದೆ.

ನಮ್ಮ ದೇಶದ ರಾಜಧಾನಿಯಲ್ಲಿರುವ ಕೇಂದ್ರ ಸಾಹಿತ್ಯ ಅಕಾಡಮಿ ಹಾಗೂ ರಾಷ್ಟ್ರೀಯ ಗ್ರಂಥ ಸಂಸ್ಥೆ (ಎನ್.ಬಿ.ಟಿ.) ಈ ಕಾರ್ಯವನ್ನು ಮಾಡುತ್ತಲೇ ಇವೆ. ಆದರೆ, ಈ ಸಂಸ್ಥೆಗಳಿಂದ ಪ್ರಕಟವಾದ ಅನುವಾದಿತ ಗ್ರಂಥಗಳ ಕನ್ನಡ ಭಾಷೆ ಸಮಾಧಾನಕರವಾಗಿರುವುದಿಲ್ಲವೆಂದು ಆಗಾಗ ಅಸಮಾಧಾನದ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಅನುವಾದಿತ ಕೃತಿಗಳೂ ಮೂಲ ಕೃತಿಗಳಂತೆ ಸಹಜ ಸ್ವಾಭಾವಿಕ ಶೈಲಿಯಲ್ಲಿರದೆ ಹೋದರೆ ಅನುವಾದ ಕ್ರಿಯೆಯ ಉದ್ದೇಶ ಸಂಪೂರ್ಣ ಸಲವಾಗುವುದಿಲ್ಲ. ಕೇವಲ ಸಾಹಿತ್ಯಕೃತಿಗಳ ಅನುವಾದವಲ್ಲ, ವಿಶ್ವದಲ್ಲಿ ಪ್ರಚಲಿತವಿರುವ ಆಧುನಿಕ ಜ್ಞಾನ-ವಿಜ್ಞಾನಗಳ, ಪ್ರಯೋಗ-ಪರಿಣತಿಗಳ ಅನೇಕ ತರದ ಗ್ರಂಥಗಳನ್ನು ನಾವು ಅನುವಾದಿಸಿಕೊಳ್ಳುವುದೂ ಅಗತ್ಯವಾಗಿದೆ. ಇಂದಿನ ಕಾಲದಲ್ಲಿ ನಮ್ಮ ಬಹುಶ್ರುತ ಜ್ಞಾನದ ಸೀಮೆಯನ್ನು ವಿಸ್ತರಿಸಿಕೊಳ್ಳದಿದ್ದರೆ, ನಾವು ಜಗತ್ತಿನಲ್ಲಿ ಕುಬ್ಜರಾಗಿ ಕಾಣಬಹುದು.ನಮ್ಮ ಸ್ಥಾನ-ಮಾನಗಳ ಹೊರತಾಗಿ,ಅಂತಾರಾಷ್ಟ್ರೀಯ ನೆಲೆಯಲ್ಲಿ ಪರಸ್ಪರ ತಿಳುವಳಿಕೆ ಹೆಚ್ಚಿಸುವಲ್ಲಿಯೂ ವ್ಯಾಪಕವಾದ ಅನುವಾದ-ಪ್ರಕ್ರಿಯೆ ಬಹಳಷ್ಟು ಸಹಾಯಕಾರಿಯಾಗಬಲ್ಲುದು.

ಇಂತಹ ಅನುವಾದ ಕಾರ್ಯದಿಂದಾಗಿ ನಮಗೆ ಹತ್ತಿರದ ಹಾಗೂ ಹತ್ತಿರವಿರದ ಪ್ರದೇಶಗಳ ಜನಜೀವನದ ಪರೋಕ್ಷ ಪರಿಚಯವಾಗಿ ಈ ವಿಶಾಲ ಪ್ರಪಂಚವೇ ಒಂದು ’ಮಹಾಮನೆ’ ಎಂಬ ಭಾವನೆ ನಿಧಾನವಾಗಿಯಾದರೂ ಮೊಳಕೆಯೊಡೆದು ಬೆಳೆಯಬಹುದಾಗಿದೆ. ಅದಕ್ಕಾಗಿ ವಿವಿಧ ಭಾಷೆಗಳ ವೈವಿಧ್ಯಪೂರ್ಣ ಕೃತಿಗಳ ಅನುವಾದ ತುಂಬಾ ಅಗತ್ಯವಾಗಿದೆಯೆಂದು ಪದೇ ಪದೇ ನೆನಪಿಸಿಕೊಂಡು ಕಾರ್ಯಪ್ರವೃತ್ತರಾಗುವುದು ಅತ್ಯವಶ್ಯವಾಗಿದೆ. ಇಂದಿನ ಜಾಗತೀಕರಣದ ಸಂದರ್ಭದಲ್ಲಿಯಂತೂ ಇದು ಅಗತ್ಯವಾಗಿ ನಡೆಯಬೇಕಾದ ಕಾರ್ಯ.
  
ಅಂತೆಯೇ ಈಗೀಗ ಕೆಲವು ಖಾಸಗೀ ಪ್ರಕಾಶಕರೂ ಈ ದಿಸೆಯಲ್ಲಿ ಸಮರ್ಥ ಸಾಹಿತಿಗಳ ಸಹಾಯದಿಂದ ಹೊಸ ಹೆಜ್ಜೆಯಿಡುತ್ತಿದ್ದಾರೆ. ಆದರೆ, ಅವರಿಗೆ ತಮ್ಮ ವ್ಯಾವಹಾರಿಕ ಅನುಕೂಲತೆ ಹಾಗೂ ಆರ್ಥಿಕ ಲಾಭಾಂಶಗಳೇ ಮುಖ್ಯವೆಂಬುದೂ ಸಹಜವಾಗಿಯೇ ಒಪ್ಪಬೇಕಾದ ಮಾತು.

ಭಾರತೀಯ ಭಾಷಾಬಾಂಧವ್ಯ
           
ಈವರೆಗೆ ಇಂಗ್ಲಿಷ್ ಭಾಷೆಯ ಮುಖಾಂತರ ನಮ್ಮ ಪ್ರಾದೇಶಿಕ ಭಾಷೆಗಳ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳುವ ಮಾತಾಯಿತು. ಇನ್ನು, ನಮ್ಮ ಭಾರತೀಯ ಭಾಷೆ-ಭಾಷೆಗಳ ನಡುವೆಯೂ ಈ ಅನುವಾದ-ಪ್ರಕ್ರಿಯೆ ಬೆಳೆದಷ್ಟೂ ವಿವಿಧ ರಾಜ್ಯಗಳಲ್ಲಿ ಒಂದು ಬಗೆಯ ಸಾಂಸ್ಕೃತಿಕ ಸಮನ್ವಯವನ್ನು ಸಾಸಬಹುದೆಂಬ ವಿಚಾರ. ಈ ಭಾಷಾ ಬಾಂಧವ್ಯ ತತ್ಕಾಲ ಕಂಡು ಬರುವ ಪರಿಣಾಮವೇನೂ ಅಲ್ಲ. ತತ್ಕಾಲ ಪರಿಣಾಮಸಾಧನೆಗೆ ಸಾಹಿತ್ಯವೊಂದು ಸಾಧನವೇ ಅಲ್ಲ. ಸಾಹಿತ್ಯದಿಂದ ಮನುಷ್ಯನ ಹೃನ್ಮನಗಳಲ್ಲಿ ನಡೆಯುವ ಒಂದು ಬಗೆಯ ರಾಸಾಯನಿಕ ಕ್ರಿಯೆ ಬಲು ನಿಧಾನ ಗತಿಯದು. ಹೊಸ ವಿಚಾರಗಳ ಬೀಜ ಬೇಗ ಮೊಳೆಯುವುದಿಲ್ಲ, ಮೊಳೆತ ಬಳಿಕ ಬೇಗ ಒಣಗಿಯೂ ಹೋಗುವುದಿಲ್ಲ. ಮಾನಸಿಕ ಪ್ರಗತಿ-ಪರಿವರ್ತನೆಯ ಅಮೂರ್ತ ಸಂಯೋಜನೆಯ ದಾರಿ ಸಾಹಿತ್ಯದ್ದು. ಅನುವಾದ ಸಾಹಿತ್ಯದ ದಾರಿಯೂ ಭಿನ್ನವಲ್ಲ.ನಮ್ಮ ನೆರೆಹೊರೆಯ ಭಾಷೆಗಳಿಂದ ಈಗಾಗಲೇ ಹಲವು ಕೃತಿಗಳು ಕನ್ನಡದಲ್ಲಿ ಅನುವಾದಗೊಂಡಿವೆಯಾದರೂ ಈ ಕೆಲಸ ನಿರಂತರವಾಗಿ ನಡೆಯಬೇಕೆಂಬ ಉದ್ದೇಶದಿಂದಲೇ ಕರ್ನಾಟಕ ಸರಕಾರದವರು ಅನುವಾದ ಅಕಾಡಮಿಯೊಂದನ್ನು ಸ್ಥಾಪಿಸಿದ್ದಾರೆ.

ಖಾಸಗಿ ಪ್ರಕಾಶಕರೂ ಲೇಖಕರ ಸ್ವತಂತ್ರ ಕೃತಿಗಳ ಜೊತೆಗೆ, ಅನುವಾದಿತ ಕೃತಿಗಳನ್ನೂ ಪ್ರಕಟಿಸುತ್ತಿರುತ್ತಾರೆ. ಸೂಕ್ಷ್ಮವಾಗಿ ಗಮನಿಸಿದಲ್ಲಿ, ಈ ಅನುವಾದ ಕ್ರಿಯೆಯಿಂದ ನಮ್ಮ ವಿವಿಧ ಪ್ರದೇಶಗಳ ಜನಜೀವನದ ವಿಶಿಷ್ಟ ರೀತಿ-ರಿವಾಜುಗಳ ಪರಿಚಯವಾಗುವುದಲ್ಲದೆ, ಭಾರತೀಯ ಸಂಸ್ಕೃತಿಯಲ್ಲಿ ಅಡಕಗೊಂಡಿರುವ ಸಮಾನಾಂಶಗಳೂ ಓದುಗರ ಗಮನಕ್ಕೆ ಬರುತ್ತವೆ. ಅದರಿಂದ ರಾಜ್ಯ-ರಾಜ್ಯಗಳ ಜನಸಾಮಾನ್ಯರ ನಡುವೆ ಪ್ರೀತಿ-ಗೌರವಗಳು ಬೆಳೆಯುವುದೂ ಸಾಧ್ಯ. ಉದಾಹರಣೆಗೆ, ನಮ್ಮ ಕರ್ನಾಟಕ-ಮಹಾರಾಷ್ಟ್ರಗಳ ರಾಜಕೀಯ ಪುಢಾರಿಗಳು ಗಡಿ-ವಿವಾದದ ನೆಪದಿಂದ ಆಗಾಗ ಸಡ್ಡು ಹೊಡೆಯುತ್ತ, ಸಲ್ಲದ ಸದ್ದು ಮಾಡುತ್ತ ಮಲ್ಲಯುದ್ಧಕ್ಕಿಳಿದರೂ, ಎರಡೂ ರಾಜ್ಯಗಳ ಸಾಮಾನ್ಯಜನರು ತಣ್ಣಗೇ ಇರುತ್ತಾರೆ! ಯಾಕೆಂದರೆ ಕರ್ನಾಟಕ-ಮಹಾರಾಷ್�

Writer - ಡಾ.ಬಿ.ಎ.ಸನದಿ

contributor

Editor - ಡಾ.ಬಿ.ಎ.ಸನದಿ

contributor

Similar News