×
Ad

ವಿಶ್ವಕಪ್ ಕಬಡ್ಡಿ; ಪೊಲೆಂಡ್, ಇಂಗ್ಲೆಂಡ್‌ಗೆ ಗೆಲುವು

Update: 2016-10-14 23:52 IST

ಅಹ್ಮದಾಬಾದ್, ಅ.14: ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಇಂದು ಪೊಲೆಂಡ್ ಮತ್ತು ಇಂಗ್ಲೆಂಡ್ ಜಯ ಗಳಿಸಿವೆ.
ಬಿ’ ಗುಂಪಿನಲ್ಲಿ ಪೊಲೆಂಡ್ ತಂಡ ಅಮೆರಿಕವನ್ನು 79-2 ಅಂತರದಲ್ಲಿ ಮಣಿಸಿತು.
  ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಎ’ ಗುಂಪಿನಲ್ಲಿ ಅರ್ಜೆಂಟೀನವನ್ನು 68-28 ಅಂತರದಲ್ಲಿ ಸೋಲಿಸಿತು.
ಅಮೆರಿಕ ಮತ್ತು ಅರ್ಜೆಂಟೀನ ಆಡಿರುವ ಎರಡೂ ಪಂದ್ಯಗಳನ್ನು ಕಳೆದುಕೊಂಡಿದ್ದು, ಇನ್ನೂ ಗೆಲುವಿನ ಖಾತೆ ತೆರೆದಿಲ್ಲ.
ಪೊಲೆಂಡ್ ತಂಡ ಮೊದಲ ಗೆಲುವು ದಾಖಲಿಸಿದೆ.
ಶನಿವಾರ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ನ್ನು , ಬಿ’ ಗುಂಪಿನ ಪಂದ್ಯದಲ್ಲಿ ಜಪಾನ್ ತಂಡ ಇರಾನ್‌ನ್ನು ಎದುರಿಸಲಿದೆ.
·    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News