ಸುದ್ದಿ ಸೋರಿಕೆ ಬಗ್ಗೆ ಪಾಕ್ ಸೇನೆ ಕಳವಳ

Update: 2016-10-14 18:32 GMT

ಇಸ್ಲಾಮಾಬಾದ್, ಅ. 14: ಭಯೋತ್ಪಾದನೆಯನ್ನು ಹೇಗೆ ನಿಭಾಯಿಸಬೇಕು ಎಂಬ ವಿಷಯದ ಬಗ್ಗೆ ಚರ್ಚಿಸಲು ಕಳೆದ ವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಾಗರಿಕ ಮತ್ತು ಸೇನಾ ಅಧಿಕಾರಿಗಳ ನಡುವೆ ನಡೆದ ಮಾತಿನ ಚಕಮಕಿ ಸೋರಿಕೆಯಾಗಿರುವ ಬಗ್ಗೆ ಪಾಕಿಸ್ತಾನಿ ಸೇನೆಯ ಉನ್ನತ ನಾಯಕತ್ವ ಇಂದು ‘‘ಗಂಭೀರ ಕಳವಳ’’ ವ್ಯಕ್ತಪಡಿಸಿದೆ.
ರಾವಲ್ಪಿಂಡಿಯ ಸೇನಾ ಪ್ರಧಾನ ಕಚೇರಿಯಲ್ಲಿ ಇಂದು ನಡೆದ ಸೇನಾಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ವಹಿಸಿದರು.
‘‘ಪ್ರಧಾನಿ ನಿವಾಸದಲ್ಲಿ ನಡೆದ ಮಹತ್ವದ ಭದ್ರತಾ ಸಭೆಯೊಂದರ ಬಗ್ಗೆ ತಪ್ಪು ಹಾಗೂ ಕಲ್ಪಿತ ಸುದ್ದಿ ಪೂರೈಕೆಯಾದ ಬಗ್ಗೆ ಸಭೆಯಲ್ಲಿ ಭಾಗವಹಿಸಿದವರು ಕಳವಳ ವ್ಯಕ್ತಪಡಿಸಿದರು’’ ಎಂದು ಸೇನೆ ನೀಡಿದ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News