ಟರ್ಕಿ: ನ್ಯಾಯಾಧೀಶರು, ಪ್ರಾಸಿಕ್ಯೂಟರ್‌ಗಳ ವಿರುದ್ಧ ಬಂಧನ ವಾರಂಟ್

Update: 2016-10-14 18:35 GMT

ಅಂಕಾರ, ಅ. 14: ಅಮೆರಿಕದಲ್ಲಿ ನೆಲೆಸಿರುವ ಧಾರ್ಮಿಕ ಮುಖಂಡ ಫತೇವುಲ್ಲಾ ಗುಲೇನ್ ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪದಲ್ಲಿ ಟರ್ಕಿ ಶುಕ್ರವಾರ 189 ನ್ಯಾಯಾಧೀಶರು ಮತ್ತು ಪ್ರಾಸಿಕ್ಯೂಟರ್‌ಗಳ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಗುಲೇನ್ ಬೆಂಬಲಿಗರು ಬಳಸುವ ‘ಬೈಲಾಕ್’ ಎಂಬ ಎನ್‌ಕ್ರಿಪ್ಟಡ್ ಸಂದೇಶ ಆ್ಯಪೊಂದನ್ನು ಅವರು ಬಳಸುತ್ತಿದ್ದಾರೆ ಎಂದು ವಾರಂಟ್‌ಗಳಲ್ಲಿ ಹೇಳಲಾಗಿದೆ.
ಜುಲೈ 15ರಂದು ನಡೆದ ವಿಫಲ ಸೇನಾ ಕ್ರಾಂತಿಯ ರೂವಾರಿ ಗುಲೇನ್ ಎಂಬುದಾಗಿ ಟರ್ಕಿ ಸರಕಾರ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News