×
Ad

ಐಸಿಸ್ ನೆಲೆಗಳ ಮೇಲೆ ಸೇನಾ ದಾಳಿ

Update: 2016-10-15 22:40 IST

ಕೈರೋ (ಈಜಿಪ್ಟ್), ಅ. 15: ಸಿನಾಯಿ ಪರ್ಯಾಯ ದ್ವೀಪದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ಶನಿವಾರ ದಾಳಿ ನಡೆಸಿರುವುದಾಗಿ ಈಜಿಪ್ಟ್ ಸೇನೆ ಹೇಳಿದೆ. ಐಸಿಸ್ ತಪಾಸಣಾ ಠಾಣೆಯೊಂದರ ಮೇಲೆ ದಾಳಿ ನಡೆಸಿ 12 ಸೈನಿಕರನ್ನು ಹತ್ಯೆ ಮಾಡಿದ ಬಳಿಕ ಈ ದಾಳಿ ನಡೆದಿದೆ. ಉತ್ತರದ ಸಿನಾಯಿ ಐಸಿಸ್ ಉಗ್ರರ ಭದ್ರ ಕೋಟೆಯಾಗಿದೆ. ಈಜಿಪ್ಟ್‌ನಲ್ಲಿ ಮುಹಮ್ಮದ್ ಮುರ್ಸಿ ನೇತೃತ್ವದ ಮುಸ್ಲಿಮ್ ಬ್ರದರ್‌ಹುಡ್ ಸರಕಾರವನ್ನು ಸೇನೆ ಪದಚ್ಯುತಗೊಳಿಸಿದ ಬಳಿಕ ಐಸಿಸ್ ಉಗ್ರರು ನೂರಾರು ಸೈನಿಕರು ಮತ್ತು ಪೊಲೀಸರನ್ನು ಕೊಂದಿದ್ದಾರೆ.

ಐಸಿಸ್ ಶುಕ್ರವಾರ ನಡೆಸಿದ ದಾಳಿಯಲ್ಲಿ, ಮೋರ್ಟಾರ್‌ಗಳು ಮತ್ತು ರಾಕೆಟ್‌ಗಳನ್ನು ನಾರ್ತ್ ಸಿನಾಯಿ ರಾಜ್ಯದ ರಾಜಧಾನಿ ಅಲ್-ಅರಿಶ್‌ನ ಪಶ್ಚಿಮದಲ್ಲಿರುವ ಸೇನಾ ಠಾಣೆಯೊಂದರ ಮೇಲೆ ಹಾರಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ತನ್ನ ಯುದ್ಧ ವಿಮಾನಗಳು ಶನಿವಾರ ಮುಂಜಾನೆ ಹಲವಾರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿವೆ ಎಂದು ಸೇನೆ ತಿಳಿಸಿದೆ. ಸಶಸ್ತ್ರ ಭಯೋತ್ಪಾದಕರ ಅಡಗುದಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ಸೇನೆ, ಹಲವಾರು ಭಯೋತ್ಪಾದಕರನ್ನು ಕೊಲ್ಲಲಾಗಿದೆ ಹಾಗೂ ಅವರ ಶಸ್ತ್ರಾಸ್ತ್ರಗಳನ್ನು ನಾಶಪಡಿಸಲಾಗಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News