×
Ad

ಗುಜರಾತ್‌ನಲ್ಲಿ ಆಪ್ ಮುಖಂಡನ ಬಂಧನ

Update: 2016-10-16 23:29 IST

ಸೂರತ್, ಅ.16: ದಿಲ್ಲಿಯ ಆಪ್ ಶಾಸಕ ಹಾಗೂ ಗುಜರಾತ್‌ನಲ್ಲಿ ಪಕ್ಷದ ಉಸ್ತುವಾರಿಯಾಗಿರುವ ಗುಲಾಬ್ ಸಿಂಗ್ ಅವರನ್ನು ಸೂರತ್‌ನಲ್ಲಿ ಇಂದು ಬೆಳಗಿನ ಜಾವ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ರ್ಯಾಲಿಗೆ ಕೆಲವೇ ಗಂಟೆಗಳ ಮುನ್ನ ಬಂಧಿಸಲಾಗಿದೆ. ಸಿಂಗ್ ಪೊಲೀಸರಿಂದ ಬಂಧಿಸಲ್ಪಟ್ಟ 14ನೇ ಆಪ್ ಶಾಸಕರಾಗಿದ್ದಾರೆ.

ದಿಲ್ಲಿಯಿಂದ ಬಂದಿದ್ದ ಪೊಲೀಸ್ ತಂಡವು ಸಿಂಗ್ ಇಲ್ಲಿಯ ಉಮ್ರಾ ಪೊಲೀಸ್ ಠಾಣೆಯಲ್ಲಿ ಶರಣಾದ ಬಳಿಕ ಅವರನ್ನು ಬಂಧಿಸಿತು. ದಿಲ್ಲಿಯ ಪ್ರವಾಸೋದ್ಯಮ ಸಚಿವ ಹಾಗೂ ಆಪ್ ನಾಯಕ ಕಪಿಲ್ ಮಿಶ್ರಾ ಅವರು ಸಿಂಗ್ ಜೊತೆಯಲ್ಲಿದ್ದರು.
  ತನ್ನ ಸಹಚರರು ಭಾಗಿಯಾಗಿರುವ ಹಫ್ತಾ ವಸೂಲಿ ಪ್ರಕರಣದ ತನಿಖೆಯಲ್ಲಿ ಸಹಕರಿಸಲು ವಿಫಲರಾಗಿದ್ದಕ್ಕೆ ನ್ಯಾಯಾಲಯವು ಸಿಂಗ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಸಿಂಗ್ ಅವರ ಚಾಲಕನನ್ನು ಆತನ ಸಹಚರನ ಜೊತೆಗೆ ಕಳೆದ ತಿಂಗಳು ದಿಲ್ಲಿಯಲ್ಲಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News