ಆರೋಪಿ ಚಾಲಕನ ಖುಲಾಸೆಗೆ ನ್ಯಾಯಾಲಯ ನಕಾರ
Update: 2016-10-16 23:33 IST
ಮುಂಬೈ, ಅ.16: ಎರಡು ವರ್ಷಗಳ ಹಿಂದೆ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವರಾಗಿದ್ದ ಗೋಪಿನಾಥ ಮುಂಢೆಯವರ ಕಾರಿಗೆ ತನ್ನ ವಾಹನವನ್ನು ಢಿಕ್ಕಿ ಹೊಡೆಸಿ, ಅವರ ಸಾವಿಗೆ ಕಾರಣನಾಗಿದ್ದನೆಂದು ಅರೋಪಿಸಲಾಗಿರುವ ಚಾಲಕ ನೊಬ್ಬನ ವಿಚಾರಣೆಯನ್ನು ಮುಂದುವರಿಸಲು ನಗರ ನ್ಯಾಯಾಲಯವೊಂದು ನಿರ್ಧರಿಸಿದೆ.
ಪ್ರಕರಣದಲ್ಲಿ ಚಾಲಕ ಗುರ್ವಿಂದರ್ ಸಿಂಗ್, ಎಂಬಾತನನ್ನು ಖುಲಾಸೆಗೊಳಿಸಲು ನಿರಾಕರಿಸಿರುವ ವಿಶೇಷ ನ್ಯಾಯಾಧೀಶ ಗುರುದೀಪ್ ಸಿಂಗ್, ಆತನ ವಿರುದ್ಧ ನಿರ್ಲಕ್ಷದ ಚಾಲನೆ ಹಾಗೂ ಕೊಲೆಯಲ್ಲದ ಮಾನವ ಹತ್ಯೆ ಸಹಿತ ಆರೋಪಗಳ ವಿಚಾರಣೆ ನಡೆಸಲು ಮೇಲ್ನೋಟದ ಸಾಕ್ಷಿಯಿದೆಯೆಂದು ಅಭಿಪ್ರಾಯಿಸಿದ್ದಾರೆ.
2014ರ ಜೂ.3ರಂದು ನಡೆದ ಅಪಘಾತದ ಆಘಾತ ಹಾಗೂ ಹೃದಯ ಸ್ತಂಭನದಿಂದ 64ರ ಹರೆಯದ ಮುಂಢೆ ಕೊನೆಯುಸಿರೆಳೆದಿದ್ದರು.