ವಿರಾಟ್ ಕೊಹ್ಲಿಯ ಗರ್ಲ್‌ಫ್ರೆಂಡ್ ಯಾರು?

Update: 2016-10-17 11:03 GMT

ಮುಂಬೈ,ಅ.17: ಕಳೆದ ತಿಂಗಳು ಭಾರತೀಯ ವಾಯುಪಡೆಯ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕುರಿತು ಪ್ರಶ್ನೆಯನ್ನು ಕೇಳಲಾಗಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಹವಾ ಎಬ್ಬಿಸಿತ್ತು. ಈ ಅಧ್ವಾನವಿನ್ನೂ ಹಸಿರಾಗಿರುವಾಗಲೇ ಮಹಾರಾಷ್ಟ್ರದಲ್ಲಿಯ ಶಾಲೆಯೊಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ,ವಿದ್ಯಾರ್ಥಿಗಳಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಕುರಿತಂತೆ ಅಸಂಬದ್ಧ ಪ್ರಶ್ನೆಯನ್ನು ಕೇಳುವ ಮೂಲಕ ತನ್ನ ಮಾನವನ್ನು ತಾನೇ ಹರಾಜು ಮಾಡಿಕೊಂಡಿದೆ.

ಭಿವಂಡಿಯ ಚಾಚಾ ನೆಹರು ಹಿಂದಿ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಪಿಟಿ(ದೈಹಿಕ ಶಿಕ್ಷಣ) ಪರೀಕ್ಷೆಯಲ್ಲಿ ಕೊಹ್ಲಿಯ ಪ್ರಿಯತಮೆ ಯಾರು ಎಂಬ ಪ್ರಶ್ನೆಯನ್ನು ಉತ್ತರಿಸಬೇಕಾಗಿತ್ತು! ವಿದ್ಯಾರ್ಥಿಗಳಿಗೆ ಪ್ರಿಯಾಂಕಾ(ಚೋಪ್ರಾ), ಅನುಷ್ಕಾ(ಶರ್ಮಾ) ಮತ್ತು ದೀಪಿಕಾ (ಪಡುಕೋಣೆ) ಹೀಗೆ ಮೂರು ಉತ್ತರಗಳನ್ನು ನೀಡಿದ್ದು, ವಿದ್ಯಾರ್ಥಿಗಳು ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕಿತ್ತು.

ಕೊಹ್ಲಿ-ಅನುಷ್ಕಾ ಸಂಬಂಧ 2013ರಲ್ಲಿ ಆರಂಭಗೊಂಡಿದ್ದು, ಕೆಲವೊಮ್ಮೆ ಅನ್ಯೋನ್ಯ ವಾಗಿದ್ದರೆ ಕೆಲವೊಮ್ಮೆ ಮುನಿಸಿಕೊಂಡು ಪರಸ್ಪರರ ಮುಖವನ್ನೂ ನೋಡುವುದಿಲ್ಲ. ಇತ್ತೀಚಿಗೆ ಅವರ ನಡುವಿನ ಸಂಬಂಧ ಸುಧಾರಿಸಿದಂತಿದ್ದು,‘ಟಿವಿ ಜ್ಞಾನ’ಅಪಾರವಾಗಿರುವ ವಿದ್ಯಾರ್ಥಿಗಳು ಸುಲಭವಾಗಿ ಈ ಪ್ರಶ್ನೆಗೆ ಉತ್ತರಿಸಿ ಅಂಕವನ್ನು ಗಳಿಸಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News