×
Ad

ಶಾಲಾ ಬಸ್ ಅಪಘಾತ: 15 ಮಕ್ಕಳಿಗೆ ಗಾಯ

Update: 2024-04-27 13:31 IST

Screengrab:X/@PTI_News

ರಾಂಚಿ: ಪಟ್ಟಣದಲ್ಲಿ ಶನಿವಾರ ಮುಂಜಾನೆ ಶಾಲಾ ಬಸ್ ಮಗುಚಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 15 ಮಕ್ಕಳು ಗಾಯಗೊಂಡಿದ್ದಾರೆ.

ಮಂದರ್ ನ ಸೈಂಟ್ ಮಾರಿಯಾ ಶಾಲೆಯಿಂದ ಕೇವಲ 100 ಮೀಟರ್ ದೂರದ ತಿರುವಿನಲ್ಲಿ 30 ಮಕ್ಕಳನ್ನು ಹೊಂದಿದ್ದ ಬಸ್ ಅಪಘಾತಕ್ಕೀಡಾಯಿತು ಎಂದು ಪೊಲೀಸರು ಹೇಳಿದ್ದಾರೆ.

"ಹದಿನೈದು ಮಕ್ಕಳಿಗೆ ಗಾಯಗಳಾಗಿದ್ದು, ಅವರನ್ನು ಪಕ್ಕದ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಮಂದರ್ ಠಾಣೆಯ ಅಧಿಕಾರಿ ರಾಹುಲ್ ಹೇಳಿದ್ದಾರೆ. ಒಬ್ಬ ವಿದ್ಯಾರ್ಥಿಯ ತಲೆಗೆ ಏಟಾಗಿದ್ದು, ಸಿ.ಟಿ. ಸ್ಕ್ಯಾನ್ ಮಾಡಲಾಗುತ್ತಿದೆ. ಇತರ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ. ಅಪಘಾತಕ್ಕೆ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಅವರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News