54 ಗೋಏರ್ ವಿಮಾನಗಳ ನೋಂದಣಿ ರದ್ದತಿಗೆ ದೆಹಲಿ ಹೈಕೋರ್ಟ್ ಸೂಚನೆ

Update: 2024-04-27 03:48 GMT

Photo: twitter.com/KSRLAW

ಹೊಸದಿಲ್ಲಿ: ಗೋ ಏರ್ ವಿಮಾನಯಾನ ಸಂಸ್ಥೆ ಗುತ್ತಿಗೆಗೆ ಪಡೆದಿದ್ದ 54 ವಿಮಾನಗಳನ್ನು ಕಳೆದ ಮೇ ತಿಂಗಳಿನಿಂದೀಚೆಗೆ ಸೇವೆಯಿಂದ ತೆಗೆಯಲಾಗಿದ್ದು, ಇವುಗಳ ನೋಂದಣಿಯನ್ನು ಐದು ದಿನಗಳ ಒಳಗಾಗಿ ರದ್ದುಪಡಿಸುವಂತೆ ದೆಹಲಿ ಹೈಕೋರ್ಟ್, ವಿಮಾನಯಾನ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ. ಗೋಏರ್ ಸಂಸ್ಥೆಗೆ ಇದರಿಂದಾಗಿ ಹಲವು ಆಯಾಮಗಳಲ್ಲಿ ಪರಿಹಾರ ದೊರಕಿದಂತಾಗಿದೆ.

ಆದರೆ ಈ ತೀರ್ಪಿನಿಂದಾಗಿ ಐಬಿಸಿ ಅನ್ವಯ ಗೋಏರ್ ಪುನಶ್ಚೇತನದ ಹಾದಿ ಇದೀಗ ಮತ್ತಷ್ಟು ಕಠಿಣವಾಗಿದೆ. ಗೋಏರ್ ಸಂಸ್ಥೆಗೆ ಲೀಸ್ ಆಧಾರದಲ್ಲಿ ವಿಮಾನ ನೀಡಿದವರು ಇದೀಗ ಟಾಟಾದ ಏರ್ ಇಂಡಿಯಾ ಮತ್ತು ಹೆಚ್ಚು ಸಮೃದ್ಧ ಎನಿಸಿದ ಇಂಡಿಗೊ ಸಂಸ್ಥೆಗೆ 15 ಎ320 ವಿಮಾನಗಳನ್ನು ನೀಡಲು ಮುಂದಾಗಿದ್ದಾರೆ. ಇವುಗಳನ್ನು ಶೀಘ್ರದಲ್ಲೇ ಸೇವೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಎಂಜಿನ್ ಮತ್ತು ಬಿಡಿಭಾಗಗಳ ತಾಂತ್ರಿಕ ದೋಷಗಳಿಂದಾಗಿ ಸೇವೆಗೆ ಅನರ್ಹಗೊಂಡಿರುವ ಉಳಿದ ವಿಮಾನಗಳ ಬದಲಾವಣೆ ಕೂಡಾ ವಿಳಂಬವಾಗಲಿದೆ. ಏಕೆಂದರೆ 75 ವಿಮಾನಗಳನ್ನು ಸೇವೆಯಿಂದ ಹಿಂದಕ್ಕೆ ಪಡೆದಿರುವ ಇಂಡಿಗೊ ಸಂಸ್ಥೆಗೆ ಕೂಡಾ ಪ್ರಟ್ & ವಿಟ್ನಿ ಈ ಬಿಡಿಭಾಗಗಳನ್ನು ಪೂರೈಸಬೇಕಿದೆ.

ನಿಶಾಂತ್ ಪಿಟ್ಟಿ ನೇತೃತ್ವದ ಉದ್ಯಮ ಸಮೂಹದ ಮೂಲಗಳ ಪ್ರಕಾರ, ಐಬಿಸಿ ಅಡಿಯಲ್ಲಿ ಗೋಏರ್ ಪುನಶ್ಚೇತನದ ನಿಟ್ಟಿನಲ್ಲಿ ಲೀಸ್ ಆಧಾರದಲ್ಲಿ ವಿಮಾನ ನೀಡಿದವರ ಜತೆ ಮಾತುಕತೆ ನಡೆಯುತ್ತಿದ್ದು, ಕನಿಷ್ಠ 15 ವಿಮಾನಗಳನ್ನು ನೀಡುವಂತೆ ಮನವೊಲಿಸಲಾಗುತ್ತಿದೆ. ಇದೀಗ ಲೀಸ್ ನಲ್ಲಿ ವಿಮಾನ ನೀಡುವವರು ಏರ್ ಇಂಡಿಯಾ/ಇಂಡಿಗೊ ಹಾಗೂ ಗೋಏರ್ ಸಮೂಹದಲ್ಲಿ ಯಾರಿಗೆ 15 ವಿಮಾನಗಳನ್ನು ನೀಡಬೇಕು ಎನ್ನುವುದನ್ನು ನಿರ್ಧರಿಸಬೇಕಿದೆ.

ಭಾರತೀಯ ನಿಯಮಗಳ ಅನ್ವಯ ನೋಂದಣಿ ರದ್ದುಗೊಳ್ಳದೇ ಭಾರತಕ್ಕೆ ರಫ್ತು ಮಾಡಲಾಗಿದ್ದ, ಹಲವು ತಿಂಗಳಿನಿಂದ ಸೇವೆಯಲ್ಲಿಲ್ಲದ ವಿಮಾನಗಳನ್ನು ನಿರ್ವಹಣೆಗಾಗಿ ಹಿಂದಕ್ಕೆ ಪಡೆಯಲು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವಿತಸ್ತ ಗಂಜು ಅನುಮತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News